ಆರೋಗ್ಯ ಕಾಪಾಡಲು ನಿಯಮಿತ ವೈದ್ಯರ ಪರಿಶೀಲನೆ ಅಗತ್ಯ – ಶಿವರಾಜ ಅಂಡಗಿ

ಆರೋಗ್ಯ ಕಾಪಾಡಲು ನಿಯಮಿತ ವೈದ್ಯರ ಪರಿಶೀಲನೆ ಅಗತ್ಯ – ಶಿವರಾಜ ಅಂಡಗಿ

ಟೆಂಗಳಿಯಲ್ಲಿ "ಜಾಗತೀಕ ಆರೋಗ್ಯ ದಿನಾಚಾರಣೆ" ಅಂಡಗಿ ಪ್ರತಿಷ್ಠಾನ ಆಯೋಜನೆ.

ಆರೋಗ್ಯ ಐಶ್ವರ್ಯಬೇಕಾದರೆ ವೈದ್ಯರ ದರ್ಶನ ಪಡೆಯಲೇಬೇಕು      --ಶಿವರಾಜ ಅಂಡಗಿ

 ಆರೋಗ್ಯದ ಮಹತ್ವ, ಐಶ್ವರ್ಯ ನೆನಸಿಕೊಳ್ಳಲೇಬೇಕಾದ ಒಂದು ಪ್ರಮುಖ ಸಂದರ್ಭ ಇಂದು ಏಪ್ರೀಲ್-07 ಜಾಗತೀಕ ಆರೋಗ್ಯ ದಿನ. ಇಂದು ನಾವು ಹಣ ಗಳಿಸುವ ಭರಾಟೆಯಲ್ಲಿ ಆರೋಗ್ಯ ಲೆಕ್ಕಿಸದೆ ದುಡಿದು ಅನಾರೋಗ್ಯದ ಕಾರಣ ವೈದ್ಯರನ್ನು ಕಾಣುವ ಬದಲು ಗೂಗಲ್ ಇಂಟರನೇಟ್ ನೋಡಿ, ರೋಗದ ಲಕ್ಷಣಗಳ ನೋಡಿ ನಾವೇ ರೋಗವನ್ನು ನಿರ್ಧರಿಸಿ ಔಷಧ ಸೇವಿಸುತ್ತಿರುವುದು, ಇನ್ನಿಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ದಿನ ಪತ್ರಿಕೆಯಲ್ಲಿ ಓದುತ್ತಿದ್ದೇನೆ. ಹಾಗಾಗಿ ಆರೋಗ್ಯ ಐಶ್ವರ್ಯ ಪಡೆಯಬೇಕಾದರೆ ವೈದ್ಯರ ದರ್ಶನ ಮಾಡಲೇಬೇಕು. ಎಷ್ಟೆ ಸಣ್ಣ ಅನಾರೋಗ್ಯ ಕಾರಣವಾಗಿದ್ದರು, ವೈದ್ಯರ ದರ್ಶನ ಪೆಡೆದು ಔಷಧ ತೆಗೆದುಕೊಂಡಾಗ ಮಾತ್ರ ನಾವು ಆರೋಗ್ಯ ಐಶ್ವರ್ಯದಿಂದ ಬಾಳಿ ಬದುಕಲು ಸಾಧ್ಯ, ಎನ್ನುತ್ತಾ 2026ನೇ ವರ್ಷದ ಥಿಮ್ ಪ್ರಕಾರ ಆರೋಗ್ಯಕ್ಕಾಗಿ ಒಕ್ಕಟಾಗಿ ವಿಜ್ಞಾನದ ಜೋತೆಯಲ್ಲಿ ನಿಲ್ಲಿ ಎಂಬ ಘೋಷಣೆಯೊಂದಿಗೆ, ಟೆಂಗಳಿ ಗ್ರಾಮದಲ್ಲಿ ಅಂಡಗಿ ಪ್ರತಿಷ್ಠಾನ ವತಿಯಿಂದ ಜಾಗತೀಕ ಆರೋಗ್ಯ ದಿನಾಚಾರಣೆ ಆಯೋಜನೆ ಮಾಡಿ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಬದಲ್ಲಿ ಇಬ್ಬರು ವೈದ್ಯರಾದ ಡಾ.ವಿವೇಕಾನಂದ ಬುಳ್ಳಾ, ಡಾ.ಶೃತಿ ಅಂಡಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತೆಂದು ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿದರು. 

 ಈ ಸಂದರ್ಭದಲ್ಲಿ ಶಿವರಾಜ ಅಂಡಗಿ, ರಾಜು ಪಟೇದ, ಮಲ್ಲಿಕಾರ್ಜುನ ಪಟೇದ, ಮೌನೇಶ ಕಡ್ಲಿ, ಅವಿನಾಶ ಅಂಡಗಿ, ಶಿವರಾಜ ಪಟೇದ, ನಾಗಣ್ಣ ಪಟೇದ, ಚಂದ್ರು ಕಡ್ಲಿ, ಬಸವರಾಜ ಘಂಟಿ ಉಪಸ್ಥಿತರಿದ್ದರು.

ಪೋಟೋ-1) ಟೆಂಗಳಿ ಗ್ರಾಮದಲ್ಲಿ ಅಂಡಗಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿ ಜಾಗತೀಕ ಆರೋಗ್ಯ ದಿನಾಚರಣೆ ನಿಮಿತ್ಯ ಡಾ.ವಿವೇಕಾನಂದ ಬುಳ್ಳಾ, ಡಾ. ಶೃತಿ ಅಂಡಗಿ, ಅವರನ್ನು ಸನ್ಮಾನಿಸಲಾಯಿತು. ಹೂವಮ್ಮ ಅಂಡಗಿ, ಶಿವರಾಜ ಅಂಡಗಿ, ರಾಜು ಪಟೇದ, ಮಲ್ಲಿಕಾರ್ಜುನ ಪಟೇದ, ಮೌನೇಶ ಕಡ್ಲಿ, ಅವಿನಾಶ ಅಂಡಗಿ, ಶಿವರಾಜ ಪಟೇದ, ನಾಗಣ್ಣ ಪಟೇದ, ಚಂದ್ರು ಕಡ್ಲಿ, ಬಸವರಾಜ ಘಂಟಿ ಉಪಸ್ಥಿತರಿದ್ದರು

.