ಶರಣಕುಮಾರ ಮೋದಿ ಜನ್ಮದಿನ ಪ್ರಯುಕ್ತ ಹಣ್ಣು ಹಂಪಲ ವಿತರಣೆ ಹಾಗೂ ಅನ್ನ ದಾಸೋಹ ಕಾರ್ಯಕ್ರಮ

ಶರಣಕುಮಾರ ಮೋದಿ ಜನ್ಮದಿನ ಪ್ರಯುಕ್ತ ಹಣ್ಣು ಹಂಪಲ ವಿತರಣೆ ಹಾಗೂ ಅನ್ನ ದಾಸೋಹ ಕಾರ್ಯಕ್ರಮ

ಶರಣಕುಮಾರ ಮೋದಿ ಜನ್ಮದಿನ ಪ್ರಯುಕ್ತ ಹಣ್ಣು ಹಂಪಲ ವಿತರಣೆ ಹಾಗೂ ಅನ್ನ ದಾಸೋಹ ಕಾರ್ಯಕ್ರಮ

ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರು, ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಹಾಗೂ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಶರಣಕುಮಾರ ಮೋದಿ ಅವರ ಜನ್ಮದಿನದ ಅಂಗವಾಗಿ ಶ್ರೀ ಈಶ್ವರ ಖಂಡ್ರೆ ಸಾಬ್ ಅಭಿಮಾನಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದಶವಂತ ಬಿ. ಕಣಮಸಕರ್ ಅವರ ನೇತೃತ್ವದಲ್ಲಿ ಅನ್ನದಾಸೋಹ ಹಾಗೂ ಹಣ್ಣು ಹಂಪಲ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಸೋಮಶೇಖರ ಹಿರೇಮಠ, ಭೀಮಾಶಂಕರ ಮಿಟೇಕಾರ, ತೋಟಯ್ಯ ಸ್ವಾಮಿ, ವಿಠಲ ಹಾಗರಗಿ, ಶೇಖರ ವಿದ್ಯಾನಗರ, ಸಿದ್ದು ಕನಕ, ಚಂದ್ರಶಾ ಗಾಯಕವಾಡ, ಮಲ್ಲಿಕಾರ್ಜುನ ಸೇರಿದಂತೆ ಸಂಘದ ಪದಾಧಿಕಾರಿಗಳು, ಅಭಿಮಾನಿಗಳು ಇದ್ದರು.