ಬಾಬೂಜೀಗೆ ಅವಮಾನ ಖಂಡಿಸಿ ರಸ್ತೆ ತಡೆ

ಬಾಬೂಜೀಗೆ ಅವಮಾನ ಖಂಡಿಸಿ ರಸ್ತೆ ತಡೆ

ಬಾಬೂಜೀಗೆ ಅವಮಾನ ಖಂಡಿಸಿ ರಸ್ತೆ ತಡೆ

ಚಿಂಚೋಳಿ: ತಾಲೂಕಿನ ಚಂದನಕೇರಾ ಪಂಚಾಯತ್ ವ್ಯಾಪ್ತಿಯ ಕೋಟಗ ಗ್ರಾಮದಲ್ಲಿ ಹಸಿರು ಕ್ರಾಂತಿ ಹರಿಕಾರ ಭಾರತದ ಪ್ರಥಮ ಉಪ ಪ್ರಧಾನಿ ಡಾ ಬಾಬು ಜಗಜೀವನರಾಂ ರವರ ನಾಮ ಫಲಕಕ್ಕೆ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಚಪ್ಪಲಿ ಹಾರ ಮತ್ತು ಸಗಣಿ ಹಾಕಿ ಅವಮಾನ ಮಾಡಿರುವುದನ್ನು ಖಂಡಿಸಿ ಶುಕ್ರವಾರ ಚಿಂಚೋಳಿ ಕಲಬುರ್ಗಿ ಮುಖ್ಯ ರಸ್ತೆ ತಡೆದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷರಾದ ಗೋಪಾಲರಾವ ಕಟ್ಟಿಮನಿ ಮಾದಿಗ ದಂಡೋರ ತಾಲೂಕ ಅಧ್ಯಕ್ಷ ಮಲ್ಲು ಕೋಡಂಬಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ 

ದಶರಥ ಕೋಟಗ,ಸೋಮಶೇಖರ ಮುತ್ತಂಗಿ,ಮೋಹನ ಐನಾಪೂರ,ಮಲ್ಲಿಕಾರ್ಜುನ ಐನಾಪೂರ,ಪ್ರಮೋದ ಬಸಂತಪೂರ,ನರಸಪ್ಪ ಕಿವುಡನೋರ,ಮಂಜುನಾಥ ಕೋಟಗ,ಅವಿರೋಧ ಚಂದನಕೇರಾ,ಆಕಾಶ ಬ್ಯಾನರ್ಜಿ ಹಾಗೂ ಅನೇಕ ಮುಖಂಡರು ಮಹಿಳೆಯರು ಮತ್ತು ನೂರಾರು ಮಾದಿಗ ಸಮಾಜದ ಕಾರ್ಯಕರ್ತರು ಸೇರಿ ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.