ಖರ್ಗೆ ವಿರುದ್ಧ ನಿಂದನಾತ್ಮಕ ಹೇಳಿಕೆ ಖಂಡಿಸಿ ದಲಿತ ಯುವ ಬ್ರಿಗೇಡ್‌ದಿಂದ ಪ್ರತಿಭಟನೆ
ಖರ್ಗೆ ವಿರುದ್ಧ ನಿಂದನಾತ್ಮಕ ಹೇಳಿಕೆ ಖಂಡಿಸಿ ದಲಿತ ಯುವ ಬ್ರಿಗೇಡ್‌ದಿಂದ ಪ್ರತಿಭಟನೆ
ಕಲಬುರಗಿ: ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ನೀಡಿದ ನಿಂದನಾತ್ಮಕ ಹೇಳಿಕೆಯನ್ನು ಖಂಡಿಸಿ ದಲಿತ ಯುವ ಬ್ರಿಗೇಡ್ ಕಲಬುರಗಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಬಡ ದಲಿತ ಕುಟುಂಬದಿAದ ಬೆಳೆಯುತ್ತಾ ಐವತ್ತು ವರ್ಷಗಳ ಕಾಲ ರಾಜಕೀಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಖರ್ಗೆ ಅವರಂತಹ ಹಿರಿಯ ನಾಯಕರಿಗೆ ವ್ಯಕ್ತಿಗತ ಅವಮಾನ ಮಾಡುವ ರೀತಿಯ ಹೇಳಿಕೆ ನೀಡಿರುವುದು ಖಂಡನೀಯ ಎಂದು ತಿಳಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾದರೂ, ವ್ಯಕ್ತಿ ಗೌರವ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ಸಂಘಟನೆ ತಿಳಿಸಿದೆ.
ಹಿಮಂತ್ ಬಿಸ್ವಾ ಶರ್ಮಾ ಅವರ ಹೇಳಿಕೆ ಕೇವಲ ಖರ್ಗೆ ಅವರಿಗೆ ಮಾತ್ರವಲ್ಲ, ಇಡೀ ದಲಿತ ಸಮುದಾಯಕ್ಕೆ ಅವಮಾನವಾಗಿದೆ ಎಂದು ಆರೋಪಿಸಿರುವ ಬ್ರಿಗೇಡ್, ಅವರು ತಕ್ಷಣವೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ದಲಿತ ಯುವ ಬ್ರಿಗೇಡ ಪದಾಧಿಕಾರಿಗಳಾದ ಅಮರ್ ಶಿರವಾಳ್, ಸಚಿನ್ ಬಂಡೆ, ಶಿವುಕುಮಾರ್ ಮಾನೆ
ಮತ್ತು ಪಾಲಿಕೆ ಸದಸ್ಯರಗಳಾದ ಸಚೀನ ಶಿರವಾಳ, ರಾಜೀವ ಜಾನೆ, ರೇಣುಕಾ, ಶ್ರೀನಿವಾಸ್ ಲಾಖೆ, ದಲಿತ ಮುಖಂಡರಾದ ಅಶೋಕ ವೀರನಾಯಕ, ಪ್ರಕಾಶ ಮೂಲಭಾರತಿ, ರೇಣುಕಾ ಸಿಂಗೆ, ಟೈಗರ್ ವಿಘ್ನೇಶ್ವರ್, ಅರುಣಕುಮಾರ, ಗೌತಮ ಕರೇಕಲ್, ಮಹಾಲಿಂಗ, ಮಲ್ಲಿಕಾರ್ಜುನ, ದಯಾನಂದ, ಗೀತಾ, ರವಿ, ಶೀಲ್ಪಾ ಸೇರಿದಂತೆ ಇತರರು ಇದ್ದರು.
ಈ ಮನವಿಯ ಪ್ರತಿಗಳನ್ನು ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಸಂಸತ್ತಿನ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಪಾಲರಿಗೆ ಕಳುಹಿಸಲಾಗಿದೆ.
