ವಿ.ಸಿ.ಬಿ ಮಹಾವಿದ್ಯಾಲಯ ಲಿಂಗಸಗೂರಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ವಿ.ಸಿ.ಬಿ ಮಹಾವಿದ್ಯಾಲಯ ಲಿಂಗಸಗೂರಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಲಿಂಗಸಗೂರ :- ದಿನಾಂಕ 10 & 11 ಏಪ್ರಿಲ್ 2026 ರಂದು ವಳಬಳ್ಳಾರಿ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ಲಿಂಗಸುಗೂರ ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ, ಕಲಬುರ್ಗಿ ಇವರ ಸಂಯೋಗದಲ್ಲಿ ವಸಾಹತು ಕಾಲದ ರಾಯಚೂರು ಪರಿಸರ ಐತಿಹಾಸಿಕ ದಾಖಲೆಗಳು ಮತ್ತು ಚರಿತ್ರೆಯ ಅವಲೋಕನ ಎಂಬ ವಿಷಯದ ಕುರಿತು
ಎರಡು ದಿವಸಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ವಿ.ಸಿ.ಬಿ ಮಹಾವಿದ್ಯಾಲಯ ಲಿಂಗಸಗೂರಿನ ಪ್ರಾಶುಂಪಾಲರಾದ ಪ್ರೋ.ಚಂದ್ರಶೇಖರ ರೆಡ್ಡಿ.ಬಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಸಾಹತು ಕಾಲದ ರಾಯಚೂರು ಪರಿಸರ ಐತಿಹಾಸಿಕ ದಾಖಲೆಗಳು ಮತ್ತು ಚರಿತ್ರೆಯ ಅವಲೋಕನ ಎಂಬ ವಿಷಯದ ಕುರಿತು
ಎರಡು ದಿವಸಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗುವುದು, ವಿಚಾರ ಗೋಷ್ಠಿಯ
ಉದ್ಘಾಟನೆಯನ್ನು:- ಡಾ. ಶಿವಾನಂದ ಕೆಳಗಿನಮನಿ ಕುಲಪತಿಗಳು, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರು, ಅಧ್ಯಕ್ಷತೆ:- ಶ್ರೀ ಹಂಪನಗೌಡ ಬಾದರ್ಲಿ ಶಾಸಕರು, ಸಿಂಧನೂರು ಹಾಗೂ ಅಧ್ಯಕ್ಷರು, ವಿ.ಸಿ.ಬಿ ಶಿಕ್ಷಣ ಸಂಸ್ಥೆ, ಲಿಂಗಸಗೂರು
ದಿಕ್ಸೂಚಿ ಭಾಷಣ:- ಡಾ. ಅಂಬರೀಶ್ ಯತಗಲ್ ನಿರ್ದೇಶಕರು, ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ,
ಮುಖ್ಯ ಅತಿಥಿಗಳು:- ಡಾ. ವೀರಶೆಟ್ಟಿ ಉಪನಿರ್ದೇಶಕರು, ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ, ಕಲ್ಬುರ್ಗಿ
ಡಾ. ಶಿವಶರಣಪ್ಪ ಗೊಳ್ಳೆ ಜಂಟಿ ನಿರ್ದೇಶಕರು, ಪ್ರಾದೇಶಿಕ ಕಚೇರಿ, ಕಾಲೇಜು ಶಿಕ್ಷಣ ಇಲಾಖೆ, ಕಲ್ಬುರ್ಗಿ
ಡಾ. ಸಿ.ಬಿ.ಪಾಟೀಲ ನಿವೃತ ಉಪ ಅಧಿಕ್ಷಕರು,ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬೆಂಗಳೂರ
ಡಾ. ಶಿವಶರಣ ಕೆ, ಅರುಣಿ ಪ್ರಾದೇಶಿಕ ನಿರ್ದೇಶಕರು, ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು,ಬೆಂಗಳೂರ
ಡಾ. ಮೀನಾಕ್ಷಿ ಖಂಡಿಮಠ ಸಿಂಡಿಕೇಟ್ ಸದಸ್ಯರು, ಆದಿಕವಿ ಶ್ರೀ ಮಹರ್ಷಿ ವಿಶ್ವವಿದ್ಯಾಲಯ, ರಾಯಚೂರು
ಶ್ರೀ. ಶ್ರೇಣಿಕರಾಜ ಸೇಟ್ ಕಾರ್ಯದರ್ಶಿಗಳು, ವಿಸಿಬಿ ಶಿಕ್ಷಣ ಸಂಸ್ಥೆ,ಲಿಂಗಸಗೂರು
ಉಪಸ್ಥಿತಿ:- ಪ್ರೊಫೆಸರ್ ಚಂದ್ರಶೇಖರ್ ರೆಡ್ಡಿ ಪ್ರಾಚಾರ್ಯರು ವಿಸಿಬಿ ಮಹಾವಿದ್ಯಾಲಯ ಲಿಂಗಸುಗೂರು,
ಡಾ. ಸುಜಾತ ಎಸ್ ನಟೆಕಲ್ ಇತಿಹಾಸ ಸಹಾಯಕ ಪ್ರಾಧ್ಯಾಪಕರು ವಿಸಿಬಿ ಮಹಾವಿದ್ಯಾಲಯ ಲಿಂಗಸುಗೂರು ಭಾಗವಹಿಸಲಿದ್ದಾರೆ.
ವಿದ್ವಾಂಸರು, ಇತಿಹಾಸ ತಜ್ಞರು, ಚಿಂತಕರು, ತತ್ವಜ್ಞಾನಿಗಳು, ಇತಿಹಾಸ ಪಂಡಿತರು ಉಪನ್ಯಾಸಕರು ವಿದ್ಯಾರ್ಥಿಗಳು
ತದನಂತರ ಡಾ. ಸುಜಾತ ಎಸ್ ನಟೆಕಲ್ ಇತಿಹಾಸ ಸಹಾಯಕ ಪ್ರಾಧ್ಯಾಪಕರು ವಿ.ಸಿ.ಬಿ ಮಹಾವಿದ್ಯಾಲಯ ಲಿಂಗಸುಗೂರ ಅವರು ಮಾತನಾಡಿ , ವಸಾಹಾತು ಕಾಲಘಟ್ಟ, ಬ್ರಿಟಿಷ್ ಮತ್ತು ನಿಜಾಮರ ಆಳ್ವಿಕೆಕಾಲದಲ್ಲಿ ಅವರ ಆಳ್ವಿಕೆ ಮಾಡುವ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಾಹಿತ್ಯಕ್ಕೆಸಂಬಂಧಿಸಿದಂತೆ, ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದಂತೆ, ವಸಹಾತುಗಳು, ದಾಖಲೆಗಳ, ಅಧ್ಯಯನಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಸಂಸ್ಥಾನಗಳಾದಂತಹ ಗದ್ವಾಲ, ಗುರುಗುಂಟ, ಕನಕಗಿರಿ ಸಂಸ್ಥಾನಗಳು ನಿಜಾಮರು ಮತ್ತು ಬ್ರಿಟಿಷರ ಹೋರಾಟ ಮಾಡಿರುವಂತಹ ಬಗೆಯನ್ನು ವಿಚಾರ ಸಂಕೀರ್ಣದಲ್ಲಿ ಗುರುತಿಸುವ ಹಿನ್ನೆಲೆಯಲ್ಲಿ ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚೆಯ ಮೂಲಕ ರಾಯಚೂರು ಪ್ರದೇಶದ ಆಧುನಿಕ ಇತಿಹಾಸವನ್ನು ಕಟ್ಟುವ ಒಂದು ಪ್ರಯತ್ನವೇ ವಿಚಾರ ಸಂಕೀರ್ಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕದ ವಿವಿಧ ಭಾಗಗಳಿಂದ ಇತಿಹಾಸ ತಜ್ಞರು, ವಿದ್ವಾಂಸರು, ಆಗಮಿಸುವುದರ ಮುಖಾಂತರ ಚರ್ಚೆಯ ಮುಖಾಂತರ ಹೋರಾಟಗಾರರ ಅಧ್ಯಯನ ಮಾಡುವ ಅವಶ್ಯಕತೆ, ನಮ್ಮ ಭಾಗದಲ್ಲಿ ಅನಿವಾರ್ಯವಾಗಿದೆ, ಆಧುನಿಕ ಇತಿಹಾಸವನ್ನು ಕಟ್ಟಲು ಇದೊಂದು ವೇದಿಕೆಗೆ ಸಾಕ್ಷಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುದ್ದರು.
ಈ ಸಂದರ್ಭದಲ್ಲಿ ಪ್ರೊಫೆಸರ್ ಚಂದ್ರಶೇಖರ್ ರೆಡ್ಡಿ ಬಿಪ್ರಾಚಾರ್ಯರು ವಿ.ಸಿ.ಬಿ ಮಹಾವಿದ್ಯಾಲಯ ಲಿಂಗಸಗೂರ ಡಾ. ಸುಜಾತ ಎಸ್ ನಟೆಕಲ್ ಇತಿಹಾಸ ಸಹಾಯಕ ಪ್ರಾಧ್ಯಾಪಕರು ವಿ.ಸಿ.ಬಿ ಮಹಾವಿದ್ಯಾಲಯ ಲಿಂಗಸುಗೂರ, ಡಾ.ಪದ್ಮರಾಜ್ ಜೈನ್ ಸಂಯೋಜಕರು (ಐಕ್ಯೂಎಸಿ) ಉಪಸ್ಥಿತರಿದ್ದರು.
