ನಾರಾಯಣ ಗುರು ಈಡಿಗ ನಿಗಮ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ಅಭಿನಂದನೆ

ನಾರಾಯಣ ಗುರು ಈಡಿಗ ನಿಗಮ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ಅಭಿನಂದನೆ

ನಾರಾಯಣ ಗುರು ಈಡಿಗ ನಿಗಮ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ಅಭಿನಂದನೆ

ಕಲಬುರಗಿ : ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಹೆಬ್ರಿ ತಾಲೂಕಿನ ಮುದ್ರಾಡಿಯ ಹಿರಿಯ ಮುಖಂಡ ಶ್ರೀ ಮಂಜುನಾಥ ಪೂಜಾರಿ ಅವರಿಗೆ ರಾಜ್ಯ ಸರ್ಕಾರವು ಇದೀಗ ರಾಜ್ಯ ಸಚಿವ ದರ್ಜೆಯ ಸ್ಥಾನಮಾನವನ್ನು ನೀಡಿ ಆದೇಶಿಸಿದ್ದು ಸರ್ಕಾರದ ನಿರ್ಧಾರವನ್ನು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದೆ.

      ರಾಜ್ಯ ಸರ್ಕಾರದ ಇತರ ನಿಗಮಗಳಂತೆ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಿದ್ದರೂ ಹೆಚ್ಚಿಸುವ ಸಂಪುಟದ ಸ್ಥಾನ ನೀಡಿರಲಿಲ್ಲ. ಇದೀಗ ಆದೇಶu ಹೊರಡಿಸಿ ರಾಜ್ಯ ಸಚಿವ ಸ್ಥಾನಮಾನ ನೀಡಿರುವುದು ರಾಜ್ಯದ 45 ಲಕ್ಷಕ್ಕಿಂತ ಅಧಿಕವಿರುವ ಈಡಿಗ ಬಿಲ್ಲವ ನಾಮಧಾರಿ ನಾಯಕ ಧೀವರ ಸೇರಿದಂತೆ ಎಲ್ಲರಿಗೂ ಗೌರವ ನೀಡಿದಂತಾಗಿದೆ.

ಕಳೆದ ಮೂರು ದಶಕಗಳಿಂದ ಸಾಮಾಜಿಕ ಜೀವನದಲ್ಲಿದ್ದು ಎಲ್ಲ ಸಮುದಾಯಗಳ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುವ ಮಂಜುನಾಥ ಪೂಜಾರಿ ಯವರನ್ನು ನಿಗಮದ ಅಧ್ಯಕ್ಷ ಸ್ಥಾನ ನೀಡುವುದರ ಜೊತೆಗೆ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವುದು ಅವರ ವ್ಯಕ್ತಿತ್ವಕ್ಕೆ ನೀಡಿದ ಗೌರವವಾಗಿದೆ ಎಂದು ಹೋರಾಟ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. 

   ಮುದ್ರಾಡಿ ಗ್ರಾಮ ಪಂಚಾಯತ್‌ನಿಂದ ಹಿಡಿದು ಜಿಲ್ಲಾ ಪಂಚಾಯತ್‌ವರೆಗಿನ ವಿವಿಧ ಸ್ತರದ ಆಡಳಿತಗಳಲ್ಲಿ ದಕ್ಷತೆ ಮೆರೆದಿದ್ದ ಮಂಜುನಾಥ ಪೂಜಾರಿ ಅವರು ಜನಪರ ಮತ್ತು ನಿಸ್ವಾರ್ಥ ಜನಸೇವಕರಾಗಿ ದುಡಿದವರು. ಹೆಬ್ರಿ ತಾಲೂಕು ರಚನೆ ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಗ್ರಾಮೀಣ ಭಾಗದ ಏಳಿಗೆಗಾಗಿ ಸಹಕಾರಿ ಸಂಘವನ್ನು ಸ್ಥಾಪಿಸಿದ ಇವರ ಜನಪರ ಕಾಳಜಿಗೆ ಈ ಸ್ಥಾನಮಾನವು ಮತ್ತಷ್ಟು ಬಲ ತುಂಬಿದೆ ಎಂದು ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್ ಕುಪೇಂದ್ರ ಗುತ್ತೇದಾರ್ ನಾಗೂರ್ , ಈ ತಿಮ್ಮಪ್ಪ ಗಂಗಾವತಿ ರಾಜೇಶ್ ದತ್ತು ಗುತ್ತೇದಾರ್, ಪ್ರವೀಣ್ ಶಿವಯ್ಯ ಗುತ್ತೇದಾರ್, ಸುರೇಶ್ ಗುತ್ತೇದಾರ್ ಮಟ್ಟೂರ ಅಂಬಯ್ಯ ಇಬ್ರಾಹಿಂಪುರ್ ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಗುತ್ತೇದಾರ್ ಹೊಳಕುಂದ, ಶಿವಯ್ಯ ಪೇಟ್ ಶಿರೂರು, ಕಾಶಿನಾಥ್ ಗುತ್ತೇದಾರ್ ಚಿತ್ತಾಪುರ ಸುರೇಶ್ ಗುತ್ತೇದಾರ್ ಕರದಾಳ್ ಪ್ರವೀಣ್ ಜತ್ತನ್, ಸಂತೋಷ್ ಪೂಜಾರಿ, ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.