ಜನಪದ ಕಲೆ ಯಾವತ್ತಿಗೂ ಶಾಶ್ವತ
ಜನಪದ ಕಲೆ ಯಾವತ್ತಿಗೂ ಶಾಶ್ವತ,
ಆಳಂದ. ಜನಪದ ಸಾಹಿತ್ಯಕ್ಕೆ ಸಂಸ್ಕೃತಿ ತಾಯಿ ಬೇರು, ಜನಪದ ಕಲೆ ಯಾವತ್ತು ಶಾಶ್ವತ ಎಂದು ಪ್ರಬುದ್ಧ ಕಾಲೇಜಿನ ಪ್ರಾಂಶುಪಾಲರಾದ ಸಂಜೆಯ ಪಾಟೀಲ ಅವರು ತಿಳಿಸಿದರು.
ರವಿವಾರ ಪಟ್ಟಣದ ಶ್ರೀ ಏಕಾಂತರಾಮಯ್ಯ ಮಂದಿರದಲ್ಲಿ ವೀರಭದ್ರೇಶ್ವರ ಸಂಸ್ಕೃತಿಕ ಹಾಗೂ ಕ್ರೀಡಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ 2025-26 ನೇ ಸಾಲಿನ ಧನಸಹಾಯ ಸಾಮಾನ್ಯ ಯೋಜನೆ ಅಡಿಯಲ್ಲಿ ಸಾಂಸ್ಕೃತಿಕ ಕಲರವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನ ಗಳು ಇವೆ. ಇಂದಿನ ಮೊಬೈಲ ಯುಗದಲ್ಲಿ ಕನ್ನಡ ಗ್ರಾಮೀಣ ಜನಪದ ಸೊಗಡು ಮರೆಯಾಗುತ್ತಿರುವ ಆತಂಕದ ಸಂಗತಿಯಾಗಿದೆ. ಇಂಥ ಕಾರ್ಯಕ್ರಮಗಳ ಮೂಲಕ ಕಲೆ ಜೀವಂತ ಇಡಲು ಸಾಧ್ಯ ಎಂದರು.
ಪಿ ಐ ಶರಣಬಸಪ್ಪ ಕೊಡ್ಲಾ ಹಾರ್ಮೋನಿಯಂ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಭೆಯ ಸಾನಿಧ್ಯವನ್ನು ಹಳ್ಳಿ ಸಲಗದ ನಿರಾಕಾರ ಮಹಾಸ್ವಾಮಿಗಳು ವಹಿಸಿದ್ದರು. ಬಾಬುರಾವ ಮಡ್ಡೆ, ಪತ್ರಕರ್ತ ಶಿವಲಿಂಗ ತೇಲ್ಕರ್ ಧಂಗಾಪುರ ಕಾರ್ಯಕ್ರಮ ಕುರಿತು ಮಾತನಾಡಿದರು.
ಶಿವರುದ್ರಯ್ಯ ಸ್ವಾಮಿ, ಪ್ರಕಾಶ ಜಂಗಲೇ, ಪ್ರಭು ಪಾಟೀಲ, ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿ. ಎಸ್ ಮಡ್ಡೆ , ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಎಸ್, ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸಯ್ಯ ಗುತ್ತೇದಾರ, ಶ್ರೀಶೈಲ ಕೂಂಡೆದ, ಸೈದಪ್ಪ ಸಪ್ಪನ್ಗೋಳ, ಮಲ್ಲಿಕಾರ್ಜುನ ದೊಡ್ಡಿ, ಬಸವರಾಜ ಎಸ್, ವೆಂಕಟೇಶ. ಬಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು.
ವರದಿ ಡಾ. ಅವಿನಾಶ ಎಸ್. ದೇವನೂರ
