ಶಹಾಬಾದ ತಹಶೀಲ್ ಕಚೇರಿಯಲ್ಲಿ ಜಗಜೀವನರಾಂ ಜಯಂತಿ ಆಚರಣೆ :
ಶಹಾಬಾದ ತಹಶೀಲ್ ಕಚೇರಿಯಲ್ಲಿ ಜಗಜೀವನರಾಂ ಜಯಂತಿ ಆಚರಣೆ :
ನಾಗರಾಜ್ ದಂಡಾವತಿ ವರದಿ
ಶಹಾಬಾದ : - ತಾಲ್ಲೂಕ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ರವರ 119ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಡಾ.ಬಾಬುಜೀ ಯವರ ಭಾವಚಿತ್ರಕ್ಕೆ ತಹಶೀಲ್ದಾರ ನೀಲಪ್ರಭಾ ಬಬಲಾದ ಮತ್ತು ನಿವೃತ್ತ ಅಧಿಕಾರಿ ಎಸ.ಎಸ ದಿವಾಕರ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ಗುರುರಾಜ ಸಂಗಾವಿ, ಅಣವೀರಪ್ಪ,
ಅಂಬೇಡ್ಕರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ರಾಜೇಶ ಯನಗುಂಟಿ, ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ಶಿವರಾಜ ಕೋರೆ, ಶರಣು ಪಗಲಾಪುರ, ಸುಭಾಷ ಸಾಕರೆ, ಕೃಷ್ಣಪ್ಪ ಕರಣಿಕ, ಶ್ರೀಧರ ಕೊಲ್ಲೂರ, ಅಮರ ಕೋರೆ, ಸತೀಶ ಕೋಬಾಳ ಇದ್ದರು.
