ಫರಹತಾಬಾದ, ನಾಳೆಯಿಂದ ಶರಣಬಸವೇಶ್ವರ ಜಾತ್ರೆ

ಫರಹತಾಬಾದ, ನಾಳೆಯಿಂದ ಶರಣಬಸವೇಶ್ವರ ಜಾತ್ರೆ

ಫರಹತಾಬಾದ, ನಾಳೆಯಿಂದ ಶರಣಬಸವೇಶ್ವರ ಜಾತ್ರೆ

ಕಲಬುರಗಿ: ತಾಲ್ಲೂಕಿನ ಫರಹತಾಬಾದ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಶರಣಬಸವೇಶ್ವರ ದೇವಸ್ಥಾನದ ೨೦೪ನೇ ಜಾತ್ರಾ ಮಹೋತ್ಸವ ದಿ. ೧೧ ರಿಂದ ಮೂರು ದಿನಗಳ ದಿನಗಳ ಬಹುವಿಜೃಂಭಣೆಯಿAದ ಜರುಗಲಿದ್ದು, ದಿ. ೧೨ ರಂದು ರಾತ್ರಿ ೯ ಗಂಟೆಗೆ ಭವ್ಯ ರಥೋತ್ಸವ ನೆರವೇರಲಿದೆ ಎಂದು ಶ್ರೀ ಶರಣಬಸವೇಶ್ವರ ಸೇವಾ ಸಂಘದ ಅಧ್ಯಕ್ಷ ಸೋಮಶೇಖರ ಕಲಬುರರ್ಗಿ, ಕಾರ್ಯದರ್ಶಿ ಚನ್ನಬಸಪ್ಪ ಬಿ. ಸಜ್ಜನ್ ತಿಳಿಸಿದ್ದಾರೆ.

ಮುಗಳನಾಗಾಂವ ಸಂಸ್ಥಾನ ಹಿರೇಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಕಟ್ಟಿಮನಿ, ಚೌಡಾಪುರ ಚಿನ್ಮಯಗಿರಿ ಮಠದ ಪೂಜ್ಯ ವೀರಮಹಾಂತ ಶಿವಾಚಾರ್ಯರು, ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಲಿಂಗರಾಜ ಬಸವರಾಜಪ್ಪ ಅಪ್ಪಾ ಅವರ ನೇತೃತ್ವದಲ್ಲಿ ಶನಿವಾರ ಸಂಜೆ ಪಲ್ಲಕ್ಕಿ ಉತ್ಸವ, ಲೋಹ ಅಲಂಕೃತವಾದ ಉಚ್ಛಾಯಿ ನೆರವೇರಲಿದೆ.

ದಿ. ೧೨ ರಂದು ಸಂಜೆ ೬ ಗಂಟೆಗೆ ಭವ್ಯ ಮೆರವಣಿಗೆ ನಡೆಯಲಿದ್ದು, ಕುದುರೆ ಕುಣಿತ, ಗೊಂಬೆ ಕುಣಿತ, ವಿದ್ಯುತ್ ಅಲಂಕಾರದ ಬ್ಯಾಂಚೋ ಮೆರವಣಿಗೆ, ನಂದಿಕೋಲ ಮೆರವಣಿಗೆ, ಡೊಳ್ಳು ಕುಣಿತ, ಹಲಿಗೆಯ ಕುಣಿತ ಸೇರಿ ಸಾಂಸ್ಕೃತಿಕ ಚಟುವಟಿಕೆಗಳು ಜರುಗಲಿವೆ. ನಂತರ ಭಜನೆ ಕಾರ್ಯಕ್ರಮ ಇರಲಿದೆ. ರಾತ್ರಿ ೮: ೫೫ ಗಂಟೆಗೆ ಭವ್ಯ ರಥೋತ್ಸವ ನೆರವೇರಲಿದೆ. ದಿ. ೧೩ ರಂದು ಪೈಲ್ವಾನರ ಜಂಗಿ ಕುಸ್ತಿಗಳು ಜರುಗಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಸಂಘಟಕರಾದ ಬಾಬು ಹಾಲಕಾಯಿ, ಈರಣ್ಣ ಸೋನಾರ ಸೇರಿ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.