ಪ್ರೊ. ಜಿ. ರಾಮಕೃಷ್ಣ ಅವರಿಗೆ ನಾಡೋಜ ಕೋ. ಚೆನ್ನಬಸಪ್ಪ ಪ್ರಶಸ್ತಿ

ಪ್ರೊ. ಜಿ. ರಾಮಕೃಷ್ಣ ಅವರಿಗೆ ನಾಡೋಜ ಕೋ. ಚೆನ್ನಬಸಪ್ಪ ಪ್ರಶಸ್ತಿ

ಪ್ರೊ. ಜಿ. ರಾಮಕೃಷ್ಣ ಅವರಿಗೆ ನಾಡೋಜ ಕೋ. ಚೆನ್ನಬಸಪ್ಪ ಪ್ರಶಸ್ತಿ

ಬೆಂಗಳೂರು: ಕನ್ನಡ ನಾಡಿನ ಹಿರಿಯ ಸಂಸ್ಕೃತಿ ಚಿಂತಕ, ಶಿಕ್ಷಣ ತಜ್ಞ ಹಾಗೂ ಪ್ರಖರ ವೈಚಾರಿಕ ನಿಲುವಿನ ಸಾಹಿತಿ ಪ್ರೊ. ಜಿ. ರಾಮಕೃಷ್ಣ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ “ನಾಡೋಜ ಕೋ. ಚೆನ್ನಬಸಪ್ಪ ಪ್ರಶಸ್ತಿ” ಘೋಷಿಸಲಾಗಿದೆ.

ಕೋ.ಚೆ ಸಾಹಿತ್ಯ ಮತ್ತು ಶಿಕ್ಷಣ ಟ್ರಸ್ಟ್, ಬೆಂಗಳೂರು ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, ದಿ.12-02-2026ರಂದು ನಡೆದ ಪ್ರಶಸ್ತಿ ಆಯ್ಕೆ ಸಮಿತಿ ಹಾಗೂ ಟ್ರಸ್ಟಿನ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಪ್ರೊ. ಜಿ. ರಾಮಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟಿನ ಗೌರವ ಸಲಹೆಗಾರರಾದ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಹಾಗೂ ಅಧ್ಯಕ್ಷರಾದ ಶ್ರೀಮತಿ ಶಾಂತಾ ಜಯಪ್ರಸಾದ ಅವರು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಪ್ರೊ. ಜಿ. ರಾಮಕೃಷ್ಣ ಅವರನ್ನು ರೂ.50,000 ನಗದು ಪುರಸ್ಕಾರ, ಪ್ರಶಸ್ತಿಪತ್ರ, ಶಾಲು ಹಾಗೂ ಫಲ-ಹಾರಗಳೊಂದಿಗೆ ಗೌರವಿಸಲಾಗುತ್ತದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಅವರ ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.