“ಯಾಳವಾರದಲ್ಲಿ ಕಲಾವಿದ ಸತೀಶ ಕೇಮಶೆಟ್ಟಿ ಅವರಿಗೆ ಸಂಸ್ಕಾರ ರತ್ನ ಪ್ರಶಸ್ತಿ
“ಯಾಳವಾರದಲ್ಲಿ ಕಲಾವಿದ ಸತೀಶ ಕೇಮಶೆಟ್ಟಿ ಅವರಿಗೆ ಸಂಸ್ಕಾರ ರತ್ನ ಪ್ರಶಸ್ತಿ”
ಯಾಳವಾರ: ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಯಾಳವಾರ ಗ್ರಾಮದ ಸಂಸ್ಕಾರಧಾಮ ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕಾರ ಉತ್ಸವ ಹಾಗೂ 14ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಅತ್ಯಂತ ಭವ್ಯವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ “ಸಂಸ್ಕಾರ ರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.
ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ವಿಜಯಪುರದ ಖ್ಯಾತ ಕಲಾವಿದ ಸತೀಶ ಕೇಮಶೆಟ್ಟಿ ಅವರಿಗೆ ಸಂಸ್ಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಸ್ವೀಕರಿಸಿದ ಅವರು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಾಲಾ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿ, ಈ ಗೌರವ ನನಗೆ ಇನ್ನಷ್ಟು ಉತ್ತಮ ಕಾರ್ಯ ಮಾಡಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಚಿತ್ರದಲ್ಲಿ: ಯಾಳವಾರ ಗ್ರಾಮದ ಸಂಸ್ಕಾರಧಾಮ ಶಾಲೆಯಲ್ಲಿ ನಡೆದ ಸಂಸ್ಕಾರ ಉತ್ಸವದಲ್ಲಿ ಕಲಾವಿದ ಸತೀಶ ಕೇಮಶೆಟ್ಟಿ ಅವರಿಗೆ ಸಂಸ್ಕಾರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದ ಕ್ಷಣ.
