ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ರೋಣ ಸಿಪಿಐ ವಿಜಯ್ ಕುಮಾರ್ ನಾಯಕ್.

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ರೋಣ ಸಿಪಿಐ ವಿಜಯ್ ಕುಮಾರ್ ನಾಯಕ್.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ, ಕುಂದು ಕೊರತೆಗಳ ಸಭೆ

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ರೋಣ ಸಿಪಿಐ ವಿಜಯ್ ಕುಮಾರ್ ನಾಯಕ್.

ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಪಿಎಸ್ಐ ಐಶ್ವರ್ಯ ನಾಗರಾಳ

*ಕಲ್ಯಾಣ ಕಹಳೆ ನರೇಗಲ್ಲ, ಮೇ ೧೮* ಹಿಂದುಳಿದ ಎಲ್ಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಸಂವಿಧಾನದ ಎಲ್ಲಾ ಕರ್ತವ್ಯ ಮತ್ತು ಕಾರ್ಯಗಳನ್ನು ಸರಿಯಾಗಿ ಓದಿ ನಿಮ್ಮ ಜೀವನವನ್ನು ಉಜ್ವಲ ಗೊಳಿಸಿಕೊಳ್ಳಿ ,ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ರೋಣ ಸಿಪಿಐ ವಿಜಯ್ ಕುಮಾರ್ ನಾಯಕ್ ಹೇಳಿದರು. 

ನರೇಗಲ್ಲ ಮಜರೇ ಗ್ರಾಮವಾದ ತೋಟಗಂಟಿ ಗ್ರಾಮದಲ್ಲಿ , ಶನಿವಾರ ಸಾಯಂಕಾಲ ಗದಗ್ ಜಿಲ್ಲಾ ಪೊಲೀಸ್ ಇಲಾಖೆ ರೋಣ ಪೊಲೀಸ್ ವೃತ್ತ ನಿರೀಕ್ಷಕರ ವಲಯ ಹಾಗೂ ನರೇಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಓದಿ ಎಲ್ಲಾ ಮಕ್ಕಳು ತಮ್ಮ ಜೀವನವನ್ನು ಬದಲಾವಣೆ ಮಾಡಿಕೊಳ್ಳಬೇಕು , ಸಮಾಜದಲ್ಲಿ ಅಹಿತಕರ ಘಟನೆಯಲ್ಲಿ ಯಾರೂ ಭಾಗಿಯಾಗಬಾರದು ಸಮಾಜದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ನಮ್ಮ ಪೊಲೀಸ್ ಇಲಾಖೆಗೆ ತಿಳಿಸಬೇಕು ನಾವು ಅದನ್ನು ಪರಿಶೀಲಿಸಿ ತಮಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ .ಸದಾ ಪೊಲೀಸ್ ಇಲಾಖೆ ನಿಮ್ಮೊಂದಿಗೆ ಇದೆ ಎಂದು ಹೇಳಿದರು.

ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್ಐ ಐಶ್ವರ್ಯ ನಾಗರಾಳರವರು ಮಾತನಾಡಿ ಸಮಾಜದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಲ್ಲರೂ ಒಂದೇ, ಮಕ್ಕಳಿಗೆ ಶಿಕ್ಷಣ ಕಲಿಸುವುದರ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಕ್ಕಳು ಶಿಕ್ಷಣವಂತರಾಗಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಅಂತಾಗಬೇಕು , ಹಾಗಾಗುವಂತೆ ಸರಿಯಾಗಿ ಮಕ್ಕಳನ್ನು ಬೆಳೆಸಬೇಕೆಂದು ಕಿವಿ ಮಾತು ಹೇಳಿದರು.

ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ಎಸ್ ಬಿ ವಡ್ಡಟ್ಟಿ. ಷರೀಫ್ ಮುಲ್ಲಾ .ಬಿ ಎಸ್ ಮಾಯಣ್ಣವರ್ ಉಪಸ್ಥಿತರಿದ್ದರು. ಸಮಾಜದ ಹಿರಿಯರಾದ ಲಕ್ಷ್ಮಪ್ಪ ಹಳ್ಳದಮನಿ, ದೇವಪ್ಪ ನುಲ್ಕಿ, ಎಲ್ಲಪ್ಪ ಹಳ್ಳದಮನಿ, ಫಕೀರಪ್ಪ ಪೂಜಾರ , ಶರಣಪ್ಪ ಹಳ್ಳದಮನಿ , ಶೇಖಪ್ಪ ಡಂಬಳ, ಕಳಕಪ್ಪ ಡಂಬಳ ಇತರರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಕಾರ್ಯಕ್ರಮವನ್ನು ಉಪನ್ಯಾಸಕ ಶಿವಾನಂದ ಗೋಗೇರಿ ನಿರೂಪಿಸಿದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ