ನಿವೃತ್ತಿ ಹೊಂದಿದ ಪಾಟೀಲರಿಗೆ ಗೌರವ ಸನ್ಮಾನ

ನಿವೃತ್ತಿ ಹೊಂದಿದ ಪಾಟೀಲರಿಗೆ ಗೌರವ ಸನ್ಮಾನ

ನಿವೃತ್ತಿ ಹೊಂದಿದ ಪಾಟೀಲರಿಗೆ ಗೌರವ ಸನ್ಮಾನ

ನರೇಗಲ್ಲ: ಪಿ.ಎಂ. ಶ್ರೀ ಕೆ.ಜಿ.ಎಂ.ಎಸ್. ಶಾಲೆಯಲ್ಲಿ ಸಹ ಶಿಕ್ಷಕರಾಗಿ 20 ವರ್ಷ 3 ದಿನಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ ಜೆ.ಎ. ಪಾಟೀಲ ಅವರು ಜೂನ್ 30ರಂದು ಸೇವಾ ನಿವೃತ್ತಿ ಹೊಂದಿದರು.

ಅಜಾತಶತ್ರು, ಕನ್ನಡದ ಕಟ್ಟಾಳು ಹಾಗೂ ಹಮ್ಮಗಿಯ ಹಮ್ಮೀರ ಎಂದು ಗುರುತಿಸಿಕೊಂಡಿರುವ ಪಾಟೀಲ ಅವರು ತಮ್ಮ ಸೇವಾ ಅವಧಿಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕ ಮೌಲ್ಯಗಳು ಮತ್ತು ಸಮಾಜಮುಖಿ ಚಿಂತನೆಗಳನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ ಎಸ್. ಕೊಟಗಿ, ಮುಖ್ಯ ಶಿಕ್ಷಕ ಎಂ.ಎಲ್. ಹೊಸಳ್ಳಿ, ಶಿಕ್ಷಕ ಬಳಗ, ಕೆ.ಎಸ್.ಪಿ.ಎಸ್.ಟಿ.ಎ. ತಾಲೂಕು ಘಟಕ ಗಜೇಂದ್ರಗಡದ ಅಧ್ಯಕ್ಷ ಬಸವರಾಜ ಕುರಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಜೆ.ಎ. ಪಾಟೀಲ ಅವರಿಗೆ ಸೇವಾ ನಿವೃತ್ತಿಯ ಶುಭಾಶಯಗಳನ್ನು ಸಲ್ಲಿಸಿದರು.

ಅವರ ನಿವೃತ್ತಿ ಜೀವನ ಸುಖ, ಶಾಂತಿ, ಆರೋಗ್ಯ ಮತ್ತು ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.