ತಾಲೂಕ ಪಂಚಾಯತ್ ಕಚೇರಿಯಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ: ಸ್ವಂತ ಸಂಪನ್ಮೂಲ ವೃದ್ಧಿಗೆ ಇಒ ಸಂತೋಷ ಚವ್ಹಾಣ ಸೂಚನೆ

ತಾಲೂಕ ಪಂಚಾಯತ್ ಕಚೇರಿಯಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ: ಸ್ವಂತ ಸಂಪನ್ಮೂಲ ವೃದ್ಧಿಗೆ ಇಒ ಸಂತೋಷ ಚವ್ಹಾಣ ಸೂಚನೆ

ತಾಲೂಕ ಪಂಚಾಯತ್ ಕಾರ್ಯಾಲಯದಲ್ಲಿ ರಾಷ್ಟೀಯ ಪಂಚಾಯತ್ ರಾಜ್ ದಿನ ಆಚರಣೆ 

ಗ್ರಾ. ಪಂ. ಅಧಿಕಾರಿಗಳು ಸ್ವಂತ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಕಾರ್ಯಪ್ರವೃತ್ತರಾಗಿ : ಇಒ ಸಂತೋಷ ಚವ್ಹಾಣ 

ಚಿಂಚೋಳಿ : ತಾಲೂಕ ಪಂಚಾಯತ್ ಸಭಾಂಗಣದಲ್ಲಿ ರಾಷ್ಟೀಯ ಪಂಚಾಯತ್ ರಾಜ್ ದಿನ ಆಚರಿಸಲಾಯಿತು. ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಚವಾಣ್ ರವರು ಕೇಕ್ ಕಟ್ ಮಾಡುವುದರ ಮೂಲಕ ಪಂಚಾಯತ್ ರಾಜ್ ದಿನ ಸಂಭ್ರಮದಿಂದ ಆಚರಣೆ ಮಾಡಿದರು. 

ಬಳಿಕ ಇಒ ಸಂತೋಷ ಚವ್ಹಾಣ ಮಾತನಾಡಿ,  ಸಂವಿಧಾನವೇ ಅಧಿಕಾರ. ಸಂಪನ್ಮೂಲ ಹಂಚಿಕೆ ಮಾಡಲು ಗ್ರಾಮ ಪಂಚಾಯತ್ ಗಳು ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನದ ಮೇಲೆ ಅತಿಯಾಗಿ ಅವಲಂಬನೆ ಆಗುವುದು ಬೇಡ. ಸ್ವಂತ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು. ತೆರಿಗೆ ವೈಜ್ಞಾನಿಕವಾಗಿ ನಿಗದಿ ಮಾಡಿ ಪ್ರತಿಶತ ತೆರಿಗೆ ವಸೂಲಿ ಮಾಡಿ ಗ್ರಾಮ ಪಂಚಾಯತಿಗಳು ಸ್ವಾವಲಂಬನೆ ಆಗಲು RDPR ನೌಕರರು ಹಗಲಿರುಳು ಶ್ರಮಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಕುಂಚಾವರಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಕೊರದಂಪಳ್ಳಿರವರು ಅವರು ಮಾತನಾಡಿ 

ಪ್ರಾಚೀನ ಭಾರತದಲ್ಲಿ ಪಂಚರೇ ಪ್ರಮುಖರು ಆಗಿದರು. ಇವರು ಗ್ರಾಮದ ಆಗು - ಹೋಗುಗಳು ನಿಯಂತ್ರಣ ಮಾಡುತಿದ್ದರು. ಈ ಪಂಚರ ಸಮಿತಿ ವ್ಯಾಜ್ಯ ಬಗೆಹರಿಸುವುದು, ಭೂಮಿ ಹಂಚಿಕೆ ಮಾಡುವುದು, ಶಿಕ್ಷೆ ನೀಡುವುದು, ತೆರಿಗೆ ವಸೂಲಿ ಮಾಡುವ ಕಾರ್ಯನಿರ್ವಹಣೆ ಪಂಚರು ಮಾಡುತಿದ್ದರು. ಸ್ಥಳೀಯ ಆಡಳಿತ ಬಲಪಡಿಸುವಲ್ಲಿ ದೇಶದಲ್ಲಿಯೇ ಮೈಸೂರು ಪ್ರಾಂತ್ಯ ಮಾದರಿಯಾಗಿತ್ತು. 1949 ವೆಂಕಟಪ್ಪ ಸಮಿತಿ, 1957 ಬಲವಂತರಾಯ್ ಮೆಹತಾ ಸಮಿತಿ, 1977 ಅಶೋಕ್ ಮೆಹತಾ ಸಮಿತಿಗಳ ವರದಿಗಳು ಸ್ಥಳೀಯ ಆಡಳಿತ ಸರಕಾರ ಬಲವರ್ಧನೆಗೆ ಒತ್ತು ನೀಡಿದವು.

ಬ್ರಿಟಿಷ್ ಅಧಿಕಾರಿ ಲಾರ್ಡ್ ರಿಪ್ಪನ್ ಅವರು ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆ ಬಲಪಡಿಸಲು ಜಾರಿಗೆ ಶ್ರಮವಹಿಸಿದರು. ಮೈಸೂರು ಅರಸರು ಮೊದಲ ಬಾರಿಗೆ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲಶನ್ 1902 ಕಾಯಿದೆ ಜಾರಿಗೆ ತಂದು 3 ಹಂತದ ಪಂಚಾಯತ್ ವ್ಯವಸ್ಥೆ ಜಾರಿಗೆ ತಂದರು. ಭಾರತ ಸರಕಾರ 1993ರಲ್ಲಿ ಸಂವಿಧಾನಕ್ಕೆ 73 ನೇ ತಿದ್ದುಪಡಿ ತಂದು 3 ಹಂತದ ಸ್ಥಳೀಯ ಆಡಳಿತ ಜಾರಿಗೆ ತಂದು 1993 ಏಪ್ರಿಲ್ 24 ರಂದು ದೇಶದಾದ್ಯಂತ ಜಾರಿಗೆ ಬಂದಿರುವ ಹಿನ್ನಲೆಯಲ್ಲಿ ಪ್ರತಿ ವರ್ಷ ಏಪ್ರಿಲ್ 24 ರಂದು ರಾಷ್ಟೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಪಂಚಾಯತ್ ರಾಜ್ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

 ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರ ನಾಗೇಂದ್ರಪ್ಪ ಬೇಡಕಪಳ್ಳಿ, ವ್ಯವಸ್ಥಾಪಕ ಮಲ್ಲಿಕಾರ್ಜುನ , ಪವನ್ ಮೇತ್ರಿ, ರಾಜಶೇಖರ್ ಹಿತ್ತಲ, ಸುನಿಲ್ ರಟಕಲ್, ವಿನೋದ್ ಚವಾಣ್, ಗುರುನಾಥ ರಾಠೋಡ್ಅವರು ಉಪಸ್ಥಿತರಿದ್ದರು. ಫಯಾಜ್ ಸ್ವಾಗತಿಸಿದರು, ಗೋವಿಂದರೆಡ್ಡಿ ವಂದಿಸಿದರು, ಶಾಂತಪ್ಪ PDO ರವರು ನಿರೂಪಿಸಿದರು.