ದ್ರೋಣ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳ ಸಾಧನೆ: ಕಿತ್ತೂರು ಸೈನಿಕ ಶಾಲೆಗೆ ನಾಲ್ವರು ಆಯ್ಕೆ

ದ್ರೋಣ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳ ಸಾಧನೆ: ಕಿತ್ತೂರು ಸೈನಿಕ ಶಾಲೆಗೆ ನಾಲ್ವರು ಆಯ್ಕೆ

ದ್ರೋಣ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳ ಸಾಧನೆ: ಕಿತ್ತೂರು ಸೈನಿಕ ಶಾಲೆಗೆ ನಾಲ್ವರು ಆಯ್ಕೆ

ಜೇವರ್ಗಿ, ಕಲಬುರಗಿ ಜಿಲ್ಲೆ: ಜೇವರ್ಗಿ ಪಟ್ಟಣದಲ್ಲಿರುವ ಪ್ರತಿಷ್ಠಿತ ದ್ರೋಣ ಕೋಚಿಂಗ್ ಸೆಂಟರ್ ಸಂಸ್ಥೆಯ ವಿದ್ಯಾರ್ಥಿಗಳು ಕಿತ್ತೂರು ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಫೆಬ್ರವರಿ 1 ರಂದು ನಡೆದ ಕಿತ್ತೂರು ಸೈನಿಕ ಶಾಲೆ ಪ್ರವೇಶ ಪರೀಕ್ಷೆಗೆ ದ್ರೋಣ ಕೋಚಿಂಗ್ ಸೆಂಟರ್‌ನಿಂದ ಒಟ್ಟು ಐದು ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ ನಾಲ್ವರು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗುವ ಮೂಲಕ ಸಂಸ್ಥೆಗೆ ಹಾಗೂ ಇಡೀ ಜೇವರ್ಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳು:

ಅನ್ನಪೂರ್ಣ ಪಂಚಯ್ಯ ಹಿರೇಮಠ್,

ಸೌಜನ್ಯ ಅಮೀನಪ್ಪ ಹೊಸಮನಿ,

ಗೌತಮಿ ಸುನೀಲ್ ಚನ್ನೂರ,

ರೇಣುಕಾ ಹಣಮಂತ (ಶಾಹಬಾದ್).

ಈ ಕುರಿತು ಸಂಸ್ಥೆಯ ಸಂಸ್ಥಾಪಕ ಹಾಗೂ ತರಬೇತುದಾರರಾದ ಶರಣು ಬಿಲ್ಲಾರ ಅವರು ಸಂತೋಷ ವ್ಯಕ್ತಪಡಿಸಿ, “ನಮ್ಮ ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಸಮರ್ಪಿತ ತರಬೇತಿ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ಹಂತಗಳಲ್ಲಿಯೂ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲಿ” ಎಂದು ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕ ಸಿಬ್ಬಂದಿ, ಪೋಷಕರು ಹಾಗೂ ಜೇವರ್ಗಿ ಪಟ್ಟಣದ ಗಣ್ಯರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.

ವರದಿ: ಜೆಟ್ಟೆಪ್ಪ ಎಸ್ ಪೂಜಾರಿ