ಮಕ್ಕಳ‌ ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕಾರ ಅತ್ಯಗತ್ಯ:ಡಾ.ಚಂಪಾರಾಣಿ

ಮಕ್ಕಳ‌ ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕಾರ ಅತ್ಯಗತ್ಯ:ಡಾ.ಚಂಪಾರಾಣಿ

ಮಕ್ಕಳ‌ ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕಾರ ಅತ್ಯಗತ್ಯ:ಡಾ.ಚಂಪಾರಾಣಿ 

                                                                           ಕಲಬುರಗಿ:ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುನ್ನು ಪೋಷಕರು ತಮ್ಮ ಮನೆಯಿಂದಲೆ ಪ್ರಾರಂಭಿಸಬೇಕು.ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇದು ಸಹಕಾರಿಯಾಗಲಿದೆ ಎಂದು ಖ್ಯಾತ ಜ್ಯೋತಿಷಿ ವಿದ್ವಾಂಸರಾದ ಡಾ.ಚಂಪಾರಾಣಿ ಕಲ್ಯಾಣರಾವ ಕುಂಬಾರ ಅವರು ಹೇಳಿದರು.

                                                                        ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಇಂದು ಹಮ್ಮಿಕೊಂಡಿದ್ದ

ಮಕ್ಕಳ ವಿಕಾಸಕ್ಕೆ ಹಾಗೂ ಉತ್ತಮ ಜೀವನಕ್ಕೆ

“ಸಂಸ್ಕಾರ ಮತ್ತು ಸಂಸ್ಕ್ರತ”ಎಂಬ 11 ದಿನಗಳ ಶಿಬಿರವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಇಂದು ಮಕ್ಕಳಿಗೆ ಸಂಸ್ಕಾರ ಅವಶ್ಯವಾಗಿದೆ.ಮಕ್ಕಳಲ್ಲಿ ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಗುಣಗಳನ್ನು ಕಲಿಸಬೇಕು.ಸಂಸ್ಕಾರವಂತ ಮಕ್ಕಳಿಗೆ ಜೀವನದಲ್ಲಿ ಉನ್ನತ ಸ್ಥಾನ ಹೊಂದಲು ಸಹಕಾರಿಯಾಗಲಿದೆ ಎಂದರು.ಸಾಹಿತಿ ಜಿ.ಜಿ.ವಣಿಕ್ಯಾಳ ಮಾತನಾಡಿ ಇಂದು ಮಕ್ಕಳಿಗೆ ಮೋಬೈಲ್ ಗೀಳು ಹೆಚ್ಚಾಗಿದೆ.ಇದರಿಂದ ಅವರ ವ್ಯಕ್ತಿತ್ವ ವಿಕಸನಕ್ಕೆ ಹೊಡೆತ ಬೀಳುತ್ತದೆ.ಅದರಿಂದ ಹೊರತರಲು ಮಕ್ಕಳಿಗೆ ಇಂಥ ಶಿಬಿರಗಳು ಸಹಕಾರಿಯಾಗಲಿದೆ ಎಂದ ಅವರು ಪೋಷಕರು ತಮ್ಮ ಮಕ್ಕಳ ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಮಾತನಾಡಿ, ಮಕ್ಕಳಿಗೆ ಸಂಸ್ಕಾರವಂತರನ್ನಾಗಿ ಮಾಡುವ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ.ಸಂಸ್ಕ್ರತಿ ಜೊತೆಗೆ ಪೂಜೆ ಪುನಸ್ಕಾರ ಹಾಗೂ ಮಂತ್ರಗಳನ್ನು ಇಲ್ಲಿ ಹೇಳಿಕೊಡಲಾಗುವುದು.ಟ್ರಸ್ಟ್ ವತಿಯಿಂದ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಟ್ರಸ್ಟ್ ಹಿರಿಯ ಸದಸ್ಯ ಹಾಗೂ ಶಿಬಿರ ಸಂಯೋಜಕ ಎಂ.ಡಿ.ಮಠಪತಿ, ಸಂಸ್ಕೃತ ಪಂಡಿತ ಶಿವರುದ್ರಯ್ಯ ಮಠಪತಿ ಅವರು ಮಾತನಾಡಿದರು

ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ,ಸಹ ಕಾರ್ಯದರ್ಶಿ ಮನೋಹರ ಬಡಶೇಷಿ, ಕೋಶಾಧ್ಯಕ್ಷ ಬಸವರಾಜ ಮಾಗಿ,ಮಲ್ಲಯ್ಯಸ್ವಾಮಿ ಗಂಗಾಧರಮಠ,ಗುರುಪಾದಪ್ಪ ಕಾಂತಾ,ಬಸವರಾಜ ಅನ್ವರಕರ್, ಬಸವರಾಜ ಪುರ್ಮಾ,ಮನೋಹರ ಬಡಶೇಷಿ, ನಾಗರಾಜ ಖುಬಾ,ಮಲ್ಲಯಸ್ವಾಮಿ ಬೀದಿಮನಿ,ಮಹಿಳಾ ಘಟಕದ ಅಧ್ಯಕ್ಷರಾದ ಶೈಲಜಾ ವಾಲಿ,ಅನುರಾಧಾ ಕುಮಾರಸ್ವಾಮಿ,ಅನಿತಾ ನವಣಿ,ಸುಷ್ಮಾ ಮಾಗಿ,ಗೀತಾ ಸಿರಗಾಪೂರ,ಗೀತಾ ಹುಡುಗಿ ಸೇರಿದಂತೆ ನೂರಾರು ಮಕ್ಕಳು ಭಾಗವಹಿಸಿದ್ದರು.