ಪರವಾನಗಿ ಭೂಮಾಪಕರಿಗೆ ಖಾಯಂ ನೇಮಕಾತಿ, ಸಮಾನ ವೇತನಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ
ಪರವಾನಗಿ ಭೂಮಾಪಕರಿಗೆ ಖಾಯಂ ನೇಮಕಾತಿ, ಸಮಾನ ವೇತನಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ
ಕಲಬುರಗಿ: ಜಿಲ್ಲೆಯ ಪರವಾನಗಿ ಭೂಮಾಪಕರು ತಮ್ಮನ್ನು ಖಾಯಂ ಆಗಿ ಸರ್ಕಾರಿ ಸೇವೆಗೆ ವಿಲೀನಗೊಳಿಸಬೇಕು ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘದ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ ಖರ್ಗೆ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು. ಕಳೆದ ೨೩ ವರ್ಷಗಳಿಂದ ನಿರಂತರವಾಗಿ ರೈತರು ಮತ್ತು ಸರ್ಕಾರದ ವಿವಿಧ ಕೆಲಸಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದರೂ, ತಮ್ಮ ಸೇವೆಗೆ ತಕ್ಕ ಮಾನ್ಯತೆ ಮತ್ತು ಭದ್ರತೆ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪರವಾನಗಿ ಭೂಮಾಪಕರು, ೧೧ಇ, ತತ್ಕಾಲ್ ಪೋಡಿ, ಅಲಿನೇಷನ್, ಹದ್ದುಬಸ್ತು, ಕೋರ್ಟ್ ಪ್ರಕರಣಗಳು, ಇ-ಸ್ವತ್ತು, Pಒಉಂ, ಆಕಾರ್‌ಬಂದ್ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ, ಕನಿಷ್ಠ ಸೇವಾಶುಲ್ಕದಲ್ಲಿ ಜೀವನ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ. ಸೇವಾ ಭದ್ರತೆ ಇಲ್ಲದಿರುವುದು ಹಾಗೂ ಕಡಿಮೆ ವೇತನದಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.
ಮೋಜಿಣಿ ತಂತ್ರಾAಶದ ಈIಈಔ ವ್ಯವಸ್ಥೆಯಿಂದ ಕೆಲಸದ ಪ್ರಗತಿ ಕುಂಠಿತವಾಗುತ್ತಿದ್ದು, ದೋಷಪೂರಿತ ಅರ್ಜಿಗಳು, ಲಾಗಿನ್ ಸಮಸ್ಯೆಗಳು, ಪಾವತಿ ವಿಳಂಬ ಮುಂತಾದ ತಾಂತ್ರಿಕ ಸಮಸ್ಯೆಗಳು ಭೂಮಾಪಕರಿಗೆ ತೊಂದರೆ ಉಂಟುಮಾಡುತ್ತಿವೆ. ಇದರಿಂದ ರೈತರು ಮತ್ತು ಭೂಮಾಪಕರ ನಡುವೆ ಗಲಾಟೆಗಳು ಹಾಗೂ ಪ್ರಕರಣಗಳು ಹೆಚ್ಚಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ದರಖಾಸ್ತು ಪೋಡಿ ಹಾಗೂ ಕೇಂದ್ರ ಯೋಜನೆಗಳಾದ ನಕ್ಷ ಮತ್ತು ಸ್ವಾಮಿತ್ವ ಯೋಜನೆಗಳಲ್ಲಿ ಕಡಿಮೆ ವೇತನ ಹಾಗೂ ಪಾವತಿಯಲ್ಲಿ ವಿಳಂಬದಿAದ ಅಸಮಾಧಾನ ಉಂಟಾಗಿದೆ. ಜೊತೆಗೆ, ಖeissue ಅರ್ಜಿಗಳಲ್ಲಿ ಸಂಭಾವನೆ ದೊರೆಯದಿರುವುದು ಮತ್ತು ಸ್ವಾವಲಂಬಿ ಅರ್ಜಿಗಳಲ್ಲಿನ ಅನಿಯಮಗಳು ಕೂಡ ಸಮಸ್ಯೆಗಳನ್ನು ಹೆಚ್ಚಿಸುತ್ತಿವೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಒಂದು ಬಾರಿ ವಿಶೇಷ ನೇಮಕಾತಿ ಅಡಿಯಲ್ಲಿ ಪರವಾನಗಿ ಭೂಮಾಪಕರನ್ನು ಸರ್ಕಾರಿ ಭೂಮಾಪಕರಾಗಿ ವಿಲೀನಗೊಳಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘ ಮನವಿಯಲ್ಲಿ ತಿಳಿಸಿ ಆಗ್ರಹಿಸಿದೆ.
ಸಂಘದ ಅಧ್ಯಕ್ಷ ಶ್ರೀಕಾಂತ್ ನಾಟಿಕರ್, ಶರಣಬಸಪ್ಪ ಮಠಲಿ, ಸುಧಾಕರ್ ಡೆಂಗಿ, ರಮೇಶ್ ಬಸ್ತೆ, ರವಿಚಂದ್ರ, ಅರುಣ, ಅವಿನಾಶ ಇದ್ದರು.
