ಅಸ್ಪೃಶ್ಯತೆ ಪಿಡಗು ನಿವಾರಣೆಗೆ ಪ್ರಜ್ಞೆಯವಂತರು ಕೈಜೋಡಿಸಬೇಕು : ಎ.ಡಿ ಡಾ. ಶೃತಿ

ಅಸ್ಪೃಶ್ಯತೆ ಪಿಡಗು ನಿವಾರಣೆಗೆ ಪ್ರಜ್ಞೆಯವಂತರು ಕೈಜೋಡಿಸಬೇಕು : ಎ.ಡಿ ಡಾ. ಶೃತಿ

ಸಂವಿಧಾನ ಜಾರಿಯಾಗಿ 75 ವರ್ಷ ಕಳೆದಿವೆ. ಆದರೂ ಅಸ್ಪೃಶ್ಯತೆ ನಿವಾರಣೆ ಆಗದೆ ಜೀವಂತವಾಗಿ ಉಳಿದು ಮುಂದುವರೆಯುತ್ತಿದೆ : ಇಒ ಸಂತೋಷ ಚವ್ಹಾಣ

ಅಸ್ಪೃಶ್ಯತೆ ಪಿಡಗು ನಿವಾರಣೆಗೆ ಪ್ರಜ್ಞೆಯವಂತರು ಕೈಜೋಡಿಸಬೇಕು : ಎ.ಡಿ ಡಾ. ಶೃತಿ

ಚಿಂಚೋಳಿ : ದೇಶದ ಸಂವಿಧಾನವನ್ನು ನಮಗೆ ನಾವು ಅರ್ಪಿಸಿಕೊಂಡು 75 ವರ್ಷಗಳು ಕಳೆದಿವೆ. ಆದರೂ ದೇಶದಲ್ಲಿ ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ಇನ್ನೂ ಜೀವಂತವಾಗಿದ್ದು, ಮುಂದುವರೆಯುತ್ತಿದೆ. ಇದನ್ನು ತೊಲಗಿಸಲು ಸರಕಾರ ಅಸ್ಪೃಶ್ಯತೆ ನಿವಾರಣೆಗೆ ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುತ್ತಿದೆ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಚವ್ಹಾಣ ತಿಳಿಸಿದರು.

ಅವರು ಪಟ್ಟಣ ಬಸ್ ನಿಲ್ದಾಣ ಆವರಣ ಎದುರುಗಡೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಅನುಗ್ರಹ ಸಮಗ್ರ ಗ್ರಾಮೀಣ ಮಹಿಳಾ ಅಭಿವೃದ್ಧಿ ಸೇವಾ ಸಂಸ್ಥೆ ಕಮಲಾಪೂರ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದಅಸ್ಪೃಶ್ಯತೆ ನಿವಾರಣೆಗೆ ಬೀದಿ ನಾಟಕ ಮತ್ತು ವಿಚಾರ ಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಸ್ಪೃಶ್ಯತೆ ಸಾಮಾಜಿಕ ಪಿಡುಗು ಇನ್ನೂ ಜೀವಂತವಾಗಿ ಉಳಿದುಕೊಂಡಿದೆ. ಇದರ ಬಗ್ಗೆ ಸರಕಾರ ಸಂಘ ಸಂಸ್ಥೆಗಳ ಮೂಲಕ ಜನರಲ್ಲಿ ಜಾಗೃತಿ ತರಲಾಗುತ್ತಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-1 ಸಹಾಯಕ ನಿರ್ದೇಶಕಿ ಡಾ. ಶೃತಿ ಅವರು ಮಾತನಾಡಿ, ಅಸ್ಪೃಶ್ಯತೆ ಪಿಡಗು ಹೋಗಲಾಡಿಸಲು ಬುದ್ಧ, ಬಸವಣ್ಣನವರು ಆ ಕಾಲದಲ್ಲಿಯೇ ಪ್ರಯತ್ನ ಪಟ್ಟಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅಸ್ಪೃಶ್ಯತೆ ಎನ್ನುವುದು ಕಾನೂನು ಅಪರಾಧವಾಗಿದೆ. ಆದರೂ ಜನರಲ್ಲಿ ಜಾಗೃತಿ ಮೂಡಿಲ್ಲವೆಂದು ವಿಷಾದ ವ್ಯಕ್ತಪಡಿಸಿದರಲ್ಲದೇ, ಅಸ್ಪೃಶ್ಯತೆ ಪಿಡಗು ನಿವಾರಣೆ ಆಗಬೇಕಾದರೆ ಸಮಾಜದ ಪ್ರತಿಯೊಬ್ಬ ಪ್ರಭದ್ದ ನಾಗರಿಕ ಪ್ರಜೆಗಳು, ಪ್ರಜ್ಞಾವಂತ ಬುದ್ದಿ ಜೀವಿಗಳು ಕೈಜೋಡಿಸಿದಾಗ ಮಾತ್ರ ದೊಡ್ಡ ಸಾಮಾಜಿಕ ಪಿಡುಗನ್ನು ತೊಲಗಲು ಸಾಧ್ಯವಿದೆ ಎಂದರು. 

ಪುರಸಭೆ ಮುಖ್ಯ ಅಧಿಕಾರಿ ಮಾತನಾಡಿ, ಅಸ್ಪೃಶ್ಯತೆ ನಿವಾರಣೆ ಎಂಬುವುದು ದೊಡ್ಡ ಸಾಮಾಜಿಕ ಪಿಡಗು ಆಗಿದ್ದು, ಇದರ ಬಗ್ಗೆ ಜಾತ್ರೆ, ಸಂತೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಕಾರ್ಯ ಕ್ರಮಗಳು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಬಸ್ ಡಿಪೋ ವ್ಯವಸ್ಥಾಪಕ ಸುರೇಶ ತೆಗಲತ್ತಿಪ್ಪಿ, ಬಿಜೆಪಿ ಹಿರಿಯ ಮುಖಂಡ ಕೆ. ಎಂ. ಬಾರಿ, ಶಂಕರ ಹಿಪ್ಪರಗಿ ಅವರು ಮಾತನಾಡಿದರು. 

ಸಂಸ್ಥೆಯ ಅಧ್ಯಕ್ಷ ರವೀಂದ್ರ ಬಿ. ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಶಾಮರಾವ ಕೊರವಿ, ಆರ್ ಎಸ್ ಎಸ್ ಕಾರ್ಯಕರ್ತ ರೇವಣಸಿದ್ಧ ಮೋಘ, ಶ್ರೀಕಾಂತ ಜಾನಕಿ, ಸುರೇಶ ದೇಶಪಾಂಡೆ, ತುಳಸಿರಾಮ ಪೋಳ, ರಾಜಕುಮಾರ ಕೊಳ್ಳೂರ್ ಅವರು ಉಪಸ್ಥಿತರಿದ್ದರು.