ಇತಿಹಾಸ ತಜ್ಞ ಶ್ರೀಶೈಲ್ ಬಿರಾದಾರ್ ಬದುಕು–ಬರಹ ಕುರಿತು ವಿಚಾರ ಸಂಕಿರಣ
ಇತಿಹಾಸ ತಜ್ಞ ಶ್ರೀಶೈಲ್ ಬಿರಾದಾರ್ ಬದುಕು–ಬರಹ ಕುರಿತು ವಿಚಾರ ಸಂಕಿರಣ
ಸೇಡಂ : ಕೆರಳ್ಳಿ ಗುರುನಾಥ್ ರೆಡ್ಡಿ ಪ್ರತಿಷ್ಠಾನದ ವತಿಯಿಂದ ಲಿಂಗೈಕ ಕೆರಳಿ ಗುರುನಾಥ್ ರೆಡ್ಡಿ ಅವರ 29ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ನಿಲಗಂಗಾ ಕಲ್ಯಾಣ ಮಂಟಪದಲ್ಲಿ ಇತಿಹಾಸ ತಜ್ಞರಾದ ಶ್ರೀಶೈಲ್ ಬಿರಾದಾರ್ ಅವರ ಬದುಕು–ಬರಹ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಶ್ರೀಶೈಲ್ ಬಿರಾದಾರ್ ಮಾತನಾಡಿ , 1985ರಲ್ಲಿ ಸೇಡಂ ನಗರಕ್ಕೆ ಆಗಮಿಸಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ ಸಂದರ್ಭವನ್ನು ಸ್ಮರಿಸಿದರು. ಆ ಸಮಯದಲ್ಲಿ ಬಸವರಾಜ್ ಪಾಟೀಲ್ ಸೇಡಂ ಅವರ ಪ್ರೇರಣೆಯಿಂದ ತಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆ ಸಂಭವಿಸಿತು ಎಂದು ಹೇಳಿದರು.
ತಮ್ಮ ಇಡೀ ಜೀವನವೇ ಸೇಡಂ ನೆಲದಲ್ಲೇ ಕಳೆದಿದ್ದು, ಸಾಹಿತ್ಯ, ಸಂಸ್ಕೃತಿ ಹಾಗೂ ತಮ್ಮ ವ್ಯಕ್ತಿತ್ವದ ಏಳಿಗೆಗೆ ಈ ನೆಲ ಮಹತ್ತರ ಪಾತ್ರವಹಿಸಿದೆ. ಆದ್ದರಿಂದ ಸೇಡಂ ನೆಲದ ಋಣ ತಮ್ಮ ಮೇಲೆ ಸದಾ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುರೇಶ್ ನಂದಗಾಂವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿದ್ದಪ್ಪ ತಳ್ಳೂಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ಭಾಲ್ಕಿಯ ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಬಿರಾದಾರ ಅವರು ಮಾತನಾಡಿ ಬಿರಾದಾರ ಅವರ ಪ್ರೇರಣೆಯಿಂದ ತಾವು ಇತಿಹಾಸ ಅಧ್ಯಯನದತ್ತ ಹೆಚ್ಚು ಆಕರ್ಷಿತರಾಗಿ ಇತಿಹಾಸ ತಜ್ಞರಾಗಲು ಸಾಧ್ಯವಾಯಿತು ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರಲ್ಲದೆ, ಶ್ರೀಶೈಲ್ ಬಿರಾದಾರ್ ಅವರ ಬದುಕು–ಬರಹ ಕುರಿತು ವಿಶ್ಲೇಷಿಸಿದರು. ಬಿರಾದಾರ್ ಅವರ ತಂದೆ ಬಸವಂತರಾಯ ಪಾಟೀಲ ಅವರ ಕನಸು ಮಕ್ಕಳು ಶಿಕ್ಷಣದ ಜೊತೆಗೆ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿಯೂ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬುದಾಗಿತ್ತು. ಆ ಕನಸನ್ನು ಶ್ರೀಶೈಲ್ ಬಿರಾದಾರ್ ಅವರು ಸಾಕಾರಗೊಳಿಸಿದ್ದಾರೆ ಎಂದು ಹೇಳಿದರು.
ಗ್ರಾಮೀಣ ವಾತಾವರಣದಲ್ಲಿ ಅಮೃತ ಬಾವಜಿ, ಶಿಕ್ಷಕ ಹಾಗೂ ಸಾವಳಗಿ ಮನೆಯ ದಸ್ತಗೀರ ತಳವಾರ ಅವರಂತಹವರ ಒಡನಾಟದಲ್ಲಿ ಬೆಳೆದ ಅವರು ಸಮಾನತೆ ಮತ್ತು ಸಮಭಾವದ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಹಿತ್ಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 20 ವಿದ್ಯಾರ್ಥಿಗಳಿಗೆ ಪಿಹೆಚ್.ಡಿ. ಮತ್ತು ಎಂ.ಫಿಲ್. ಅಧ್ಯಯನಕ್ಕೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿರುವುದು ಅವರ ಹೆಮ್ಮೆಯ ಸಾಧನೆ ಎಂದು ತಿಳಿಸಿದರು.
ಶರಣಪ್ಪ ಬಿರಾದಾರ್ (ಭಾಲ್ಕಿ) ಅವರು ಶ್ರೀಶೈಲ್ ಬಿರಾದಾರ್ ಅವರ ಜೀವನ ಸಾಧನೆ ಕುರಿತು ಮಾತನಾಡಿದರು.
ಸಾಹಿತಿ ಆರತಿ ಕಡಗಂಚಿ ಅವರು ನಿರೂಪಿಸಿದರು. ಮಹಿಪಾಲ ರೆಡ್ಡಿ ಮುನ್ನೂರ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ,ಶರಣಗೌಡ ಪಾಟೀಲ ಪಾಳಾ, ಡಾ ವೀರಶೇಟ್ಟಿ ಗಾರಂಪಳ್ಳಿ, ಸಿ ಎಸ್ ಮಾಲಿ ಪಾಟೀಲ, ಲಿಂಗಾರೆಡ್ಡಿ ಶೇರಿ, ಶೋಭಾದೇವಿ ಚಕ್ಕಿ,ಚಂದ್ರಕಲಾ ಪಾಟೀಲ, ಬಿ ಕೆ ಬನ್ನಪ್ಪ,
ವಿಚಾರ ಸಂಕಿರಣದಲ್ಲಿ ಸಾಹಿತ್ಯಾಸಕ್ತರು, ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ವ್ಯಕ್ತಿಗಳು ಉಪಸ್ಥಿತರಿದ್ದರು.
