ಸಂಗೀತ ಶಾರದೆ...ಜಾನಕಮ್ಮ

ಸಂಗೀತ ಶಾರದೆ...ಜಾನಕಮ್ಮ

ಸಂಗೀತ ಶಾರದೆ......

ಸಾಹಿತ್ಯ ಸಾಮ್ರಾಜ್ಯದ ಅಮ್ಮ

ಸಂಗೀತ ಲೋಕದ ಶಾರದಮ್ಮ 

ಸುಮಧುರ ಸಿರಿಯ ಜಾನಕಮ್ಮ 

ಸಕಲರ ಭಾವ ಜೀವಿಗಳ ನಾಡಿಯಂ

ಸಾರಸ್ವತ ಲೋಕದ ಕನ್ನಡದ ದೊಡ್ಡಮ್ಮ 

ಸಂಸ್ಕೃತಿಯ ಸಂಕೇತದ ಪ್ರತೀಕವೇ ನಿವಮ್ಮ

ಸಾತ್ವಿಕತೆರೆ ಹಿರಿಮೆಯ ಗರಿಯಂ 

ಸರಿಗಮಪ ದ ಗಾನ ಕೋಗಿಲೆಯಂ 

ಸಕಲ ಕಲಾವಲ್ಲಭರಿಗೆ ಸ್ವರ ಶಾರದೆಯಂ 

ಸಂಪ್ರೀತಿಯ ಮಮತೆಯ ಕರುಣಾಸಾಗರವಂ

ಸಾರ್ವಭೌಮಕಲಾ ರಸಿಕರ ಮಾಧುರ್ಯವಂ

ಸಾಗರದಾಚೆಯ ಸಂಗೀತ ಪ್ರಿಯರಿಗೂ ಗಾನ ಸುಧೆಯಂ 

ಸಾಂಸ್ಕೃತಿಕ ರಾಜಧಾನಿಯ ಮೈಸೂರಿನಲ್ಲಿ ಅಮರರಾದಿರಮ್ಮ 

ಶ್ರೀಕೃಷ್ಣ ಕೊಳಲಿನ ನಾದಸ್ವರಂ 

ಸದ್ಗುಣ ಸಾಕ್ಷಿಪ್ರಜ್ಞೆಯ ಸ್ವಾಭಿಮಾನಿಯಂ 

ಸತ್ಯ ಸಂದೇಶದ ಸಾಕಾರ ಮೂರ್ತಿಯೇ ನಿವಮ್ಮ 

ಶಿವಾಲಯದ ಗಾನಗಂಧರ್ವರ ದೇವಯಾನಿವಂ 

ಸಂಗೀತದ ಮೌನಯೋಗಿನಿ ನೀವಾದಿರಿಯಂ 

ಶಾಂತಿ ಸಂದೇಶದ ದೈವಸಾಗರವಂ  

ಸದ್ಗತಿಯ ಮುಕ್ತಿ ಮಂದಿರದಲಿ ಸದಾ ಜ್ಯೋತಿರ್ಮಯಂ.

              ಶಿವಕಂದ

ಶ್ರೀ ಶಿವಯ್ಯಾ ಮಠಪತಿ 

 ಯುವ ಸಾಹಿತಿ ಕಲಬುರಗಿ 

  ಮೋ.ಸಂ.೯೯೪೫೯೦೯೭೨೧