ಸೌಮ್ಯ ಸ್ವಭಾವದ ಶಿಕ್ಷಕ - ಸಾಹಿತಿ ರಾಜೇಂದ್ರ ಝಳಕಿ ಕೋರಬಾ
ಸೌಮ್ಯ ಸ್ವಭಾವದ ಶಿಕ್ಷಕ - ಸಾಹಿತಿ ರಾಜೇಂದ್ರ ಝಳಕಿ ಕೋರಬಾ
ಪ್ರಸ್ತಾವನೆ:
ಶಿಕ್ಷಕರ ಕ್ಷೇತ್ರ ಬಹು ವಿಶಾಲವಾದದ್ದು.ಇಂದು ಎಲ್ಲಾ ಕ್ಷೇತ್ರದಲ್ಲಿ ಮೌಲ್ಯಗಳು ಅಧಃಪತನದ ಹಾದಿ ಹಿಡಿವೆ.ಇಂತಹ ಮಧ್ಯದಲ್ಲಿ ಶಿಕ್ಷಕ ಮತ್ತು ಶಿಕ್ಷಕರು ಬಹು ಮಹತ್ವದ ಪಾತ್ರ ವಹಿಸುತ್ತಾರೆ.ಈ ಹಾದಿ ಹಿಡಿದು ನಡೆಯು
ತ್ತಿರುವ ಅಪರೂಪದ ಶಿಕ್ಷಕ ಹಾಗೂ ಸಾಹಿತ್ಯ ಎರಡು ಕ್ಷೇತ್ರದಲ್ಲಿ ಗುರುತಿಸಲ್ಪಡುವ ಸೌಮ್ಯ ಸ್ವಭಾವದ ವ್ಯಕ್ತಿ ಶಕ್ತಿ
ವೃತ್ತಿಯಿಂದ ಪ್ರೌಢ ಶಾಲಾ ಶಿಕ್ಷಕರಾಗಿರುವ ರಾಜೇಂದ್ರ ಝಳಕಿ ಕೋರಬಾ ಅವರು ಪ್ರವೃತ್ತಿಯಿಂದ ಸಾಹಿತಿಗಳಾಗಿ
ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಿರಿಯ ಅನುಭವಿ ಶಿಕ್ಷಕ ಸಾಹಿತಿಗಳು. ಸೌಮ್ಯ-ಸಾದಾ -ಸೀದಾ, ಸ್ವಭಾವದ ಮನುಷ್ಯರಾದವರು.ಎಲ್ಲರ ದೃಷ್ಟಿಯಿಂದ ಒಳ್ಳೆಯ ಹೆಸರು
ಗಳಿಸಿಕೊಂಡು ಬಂದವರು.
ಹುಟ್ಟು- ಬಾಲ್ಯ:
ರಾಜೇಂದ್ರ ಝಳಕಿ ಕೋರಬಾ ಅವರು ಆಳಂದ ತಾಲುಕಿನ ಝಳಕಿ ಬಿ ಗ್ರಾಮದವರು.ಅಲ್ಲಿಯ ಕೃಷಿಕ ಮನೆತನದ ಬಸವಣ್ಣಪ್ಪಕೋರಬಾ ಮತ್ತು ಚಂದ್ರಭಾಗ ಇವರ
ದಂಪತಿಗಳ ಮಗನಾಗಿ 01-05-1967 ರಂದು ಝಳಕಿ ಜನಿಸಿದರು.ಹುಟ್ಟಿದ ಮಗನಿಗೆ ರಾಜೇಂದ್ರ ಎಂದು ಹೆಸರಿ ಟ್ಟು ಸಂಭ್ರಮಿಸಿದರು.ಆದರೆ ಕೇವಲ ಐದು ವರ್ಷದರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಅನಾಥ ಪ್ರಜ್ಞೆಯನ್ನು ಹೊಂದಿದಾಗ ಅದನ್ನು ಅವರ ತಂದೆಯ ಪ್ರೀತಿ ತಾಯಿ ತುಂಬಿದರು.ಅವರ ಅಶ್ರಯದಲ್ಲಿ ಯೇ ಬೆಳೆದು ಕಷ್ಟ ಪಟ್ಟು ಬಾಲ್ಯದ ದಿನವನ್ನು ಕಳೆದರು. ಅದರಂತೆ ಕಷ್ಟದ ಮಧ್ಯ ಓದು ಮುಂದುವರೆಸಿದರು.
ಶಿಕ್ಷಣ:
ಬಾಲ್ಯದಲ್ಲಿ ಅಜ್ಜಿ,ತಾಯಿ,ಅವರ ಜನಪದ ಹಾಡು ತಮ್ಮ ಓಣಿಯ ಕಲಾವಿದೆಯರು ಹಾಡುವ ಹಾಡು ಕೇಳುತ್ತ ಬೆಳೆದ ಅ...ಆ..ಇ..ಅಕ್ಷರ ತೀಡುತ್ತಲೇ ಬಂದವರು
ಒಂದನೆಯ ತರಗತಿಯಿಂದ ನಾಲ್ಕನೆಯ ತರಗತಿಯವರೆಗೆ ಹುಟ್ಟೂರಿನಲ್ಲಿ, ಐದರಿಂದ ಏಳನೆಯ ತರಗತಿಯವರೆಗೆ ಮದಗುಣಕಿ ಎಂಟರಿಂದ ಹತ್ತನೇ ತರಗತಿಯ ವರೆಗೆ ಮಾದನ ಹಿಪ್ಪರಗಾದಲ್ಲಿ ಓದಿದರು. ಮನೆಯಲ್ಲಿ ತಾಯಿ ಬಳೆ ವ್ಯಾಪಾರದ ಕಾಯಕದ ಕೆಲಸದಲ್ಲಿ ಸಹಾಯ ಮಾಡುತ್ತ ರಾಜೇಂದ್ರ ಬಂದವರು. ತಮ್ಮನೊಂದಿಗೆ ಹೊಲದಲ್ಲಿ ಕೆಲಸವನ್ನು ಮಾಡುತ್ತಲೇ ಹತ್ತನೆಯ ತರಗತಿ ಪಾಸಾದರು.
ಬಿಜಾಪುರ ಜಿಲ್ಲೆಯ ಚಡಚಣ ತಾಲುಕಿನ ಹಲಸಂಗಿಯಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. ನಂತರದಲ್ಲಿ
ಕಲಬುರಗಿಯ ನೂತನ ವಿದ್ಯಾಲಯದಲ್ಲಿ ಬಿ. ಎ. ಪದವಿ ಪಡೆದರು.ಇಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ಪ್ರೊ.ವಸಂತ ಕುಷ್ಟಗಿ, ಡಾ.ಸ್ವಾಮಿರಾವ ಕುಲಕರ್ಣಿ ಅವರ ಶಿಷ್ಯರಾಗಿ ಅವರಿಂದ ಪ್ರೇರಣೆಯಿಂದ ಪ್ರಭಾವಿತರಾಗಿ ಸಾಹಿತ್ಯ ಕೃಷಿ ಆರಂಭಿಸಿ ಕಾಲೇಜಿನಲ್ಲಿ ನಡೆಯುವ ಅಂತರ ತರಗತಿ ಮಟ್ಟದಲ್ಲಿ ಭಾಗವಹಿಸಿ 40 ಸ್ಪರ್ಧಾಳಿಗಳಲ್ಲಿ ಕವಿತಾ ವಾಚನ ಮಾಡಿ ಪ್ರಥಮ ಸ್ಥಾನ ಪಡೆದುಕೊಂಡರು. ಇದೇ ವೇದಿಕೆ ಸಾಹಿತ್ಯ ಕೃಷಿಗೆ ಉತ್ತೇಜನ ನೀಡಿತು.
ಗುಲಬರ್ಗಾ ವಿಶ್ವ ವಿದ್ಯಾಲಯ ಕಲಬುರ್ಗಿಯಲ್ಲಿ ಎಂ. ಎ. ಪದವಿಯನ್ನು ಪಡೆದರು.ಸರಕಾರಿ ಶಿಕ್ಷಕರ ಮಹಾವಿದ್ಯಾ ಲಯ ಕಲಬುರಗಿಯಿಂದ ಬಿ.ಇಡಿ ಪದವಿ ಪಡೆದರು.ಆಗಲೇ ಕಾವ್ಯ ಬರೆಯುತ್ತಿದ್ದ ಇವರ ಗೆಳೆಯರು ಸೇರಿ ಬಸವರಾಜ ಐನೋಳಿ ಅವರ ಸಂಪಾದಕತ್ವದಲ್ಲಿ ನೆನಪು ಕವನ ಸಂಕಲನ ಪ್ರಕಟಿಸಿ ಬಂಡಾಯ ಸಾಹಿತಿ ಡಾ.ಚನ್ನಣ್ಣ ವಾಲಿಕಾರ ಅವರಿಂದ ಬಿಡುಗಡೆ ಮಾಡಿಸಿದರು.ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರದಿಂದ ಎಂ.ಈಡಿ ಪದವಿ ಪಡೆದುಕೊಂಡರು. ಹೀಗಾಗಿ ಎಂ.ಎ., ಎಂ.ಈಡಿ ಪದವೀಧರರಾದರು.
ಶೈಕ್ಷಣಿಕ ಸೇವೆ - ವೃತ್ತಿ:
ಎರಡು ಮೂರು ವರ್ಷಗಳ ಕಾಲ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.ಚಿಂಚೋಳಿ ತಾಲೂಕಿನಲ್ಲಿ 1997 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು.ಆಳಂದ ನಗರದಲ್ಲಿ ನಂತರ ಜಿಡಗಾ ಸಿ.ಆರ್. ಸಿ ಆಗಿ ಕಾರ್ಯ ನಿರ್ವಹಿಸಿದರು.
2011 ರಲ್ಲಿ ಸಕಾರಿ ಪ್ರೌಢ ಶಾಲೆಗೆ ಬಡ್ತಿ ಹೊಂದಿ ಚಿಂಚೋ ಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಸೇವೆ ಆರಂಭಿಸಿದರು.ಮತ್ತೆ ವರ್ಗಾವಣೆಗೊಂಡ ಆಳಂದ ತಾಲುಕಿನ ದಂಗಾಪುರದಸರಕಾರಿ ಪ್ರೌಢ ಶಾಲಾ ಶಿಕ್ಷಕ ರಾಗಿ ಸೇವೆ ಸಲ್ಲಿದರು.ಪ್ರಸ್ತುತ ಕಲಬುರ್ಗಿಯ ರೋಜಾ ಬಡಾವಣೆಯ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಸೇವೆ ಕನ್ನಡ ಸಹ ಶಿಕ್ಷಕರಾಗಿ ಸಲ್ಲಿಸುತ್ತಿದ್ದಾರೆ. ಸತತ ಮೂವತ್ತು ವರ್ಷಗಳಿಂದ ಶೈಕ್ಷಣಿಕ ಸೇವೆ ಸಲ್ಲಿಸುವಿದರ ಜೊತೆಗೆ ಶಾಲಾಯ ಅಭಿವೃದ್ಧಿ, ಮಕ್ಕಳ ಮೇಲಿನ ಪ್ರೀತಿ,ಅಭಿಮಾನ,ಸಾಮಾಜಿಕ ಕಳಕಳಿ ಹೊಂದಿ ಒಬ್ಬ ಆದರ್ಶ ಶಿಕ್ಷಕರಾದವರು. 31-04-2027 ರಂದು ವಯೋ ನಿವೃತ್ತಿ ಹೊಂದಲು ಕೇವಲ ಒಂಬತ್ತು ತಿಂಗಳು ಬಾಕಿ ಇದೆ.
ಶಿಕ್ಷಕರಾಗಿ ಪಾಲಕರ,ಮಕ್ಕಳ, ಸಿಬ್ಬಂದಿ, ಜನರ ಮಧ್ಯ ಸಂಪರ್ಕ ಸೇತುವೆ ಯಾಗಿ ನಿಂತವರು.ಶಿಕ್ಷಣ ಪ್ರೇಮಿ,ಶಿಕ್ಷಣ ತಜ್ಞ, ಶೈಕ್ಷಣಿಕ ಚಿಂತಕರಾದರರು.
ಇಲಾಖೆಗೆ ಗೌರವ ತಂದವರು:
ತುಮಕೂರು , ಧಾರವಾಡಗಳಲ್ಲಿ ರಾಜ್ಯ ಮಟ್ಟದ ತರಬೇತಿಗಳಲ್ಲಿ ಭಾಗವಹಿಸಿ ಕನ್ನಡ ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷರಿಗೆ ತರಬೇತಿ ನೀಡಿದ್ದಾರೆ.ಮಕ್ಕಳಿಗಾಗಿ ಚಿಣ್ಣರ ಅಂಗಳ ಕಲಿಕಾ ಹಬ್ಬಗಳಂಥ ಇಲಾಖಾ ಕಾರ್ಯಕ್ರ ಮಗಳು ಅನುಷ್ಠಾನ ಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಎಸ್.ಎಸ್.ಎಲ್.ಸಿ ಮಕ್ಕಳ ಫಲಿತಾಂಶ ಉತ್ತಮ ರೀತಿಯಲ್ಲಿ ತರಲು ಹಗಲಿರುಳು ಇಲಾಖೆಯ ಜೊತೆಗೆ,ಶಾಲಾ ಮಕ್ಕಳು ಮತ್ತು ಸಿಬ್ಬಂದಿ ಜೊತೆ ಶ್ರಮಿಸಿದ್ದಕ್ಕಾಗಿ ಶಿಕ್ಷಣ ಇಲಾಖೆಯ ಎಸ್. ಎಸ್.ಎಲ್. ಸಿ. ಬೋರ್ಡ್ ವತಿಯಿಂದ ಪ್ರಶಂಸನೆಗೆ ಪಾತ್ರರಾಗಿದ್ದು ಅವರ ಕಾರ್ಯ,ಪ್ರಮಾಣಿಕತೆ,ಕರ್ತವ್ಯ ನಿಷ್ಠತೆ ಎದ್ದು ಕಾಣುತ್ತದೆ.
ಸಾಹಿತ್ಯ ಕ್ಷೇತ್ರದಲ್ಲಿ:
ಕೋರಾ ಎಂಬ ಕಾವ್ಯ ನಾಮ ಕೊರಬಾ ರಾಜೇಂದ್ರ ತಮ್ಮ ಊರು ದಾಖಲಿಸಿದರೆ;ಚಂದ್ರರಾಜ ವಚನಾಂಕಿತದಿಂದ ತಮ್ಮ ತಾಯಿ ಹೆಸರಿನಿಂದ ಗುರುತಿಸಿಕೊಂಡವರು. ತಮ್ಮ ವೈವಿಧ್ಯಮಯವಾದ ಹವ್ಯಾಸಗಳನ್ನು ಹೊಂದುವ ಮೂಲಕ ಲೇಖನ,ಕವನ,ಸಮಾಜ ಸೇವೆ,ಸಂಘಟನೆ, ಬಡ ದುರ್ಬಲರಿಗೆ ಸಹಾಯ ಮಾಡುವುದು,ವಿದ್ಯಾರ್ಥಿಗ ಳಿಗಾಗಿ ಮಾಡುವುದು,ಹಾಡುಗಳನ್ನು ಹಾಡುತ್ತಾ ಹಾವ- ಭಾವದೊಂದಿಗೆ ಪಾಠ ಮಾಡುವುದು,ನಶಿಸಿ ಹೋಗುತ್ತಿರು ವ ಜನಪದ ಸಾಹಿತ್ಯ-ಕಲೆ ಉಳಿಸಿ ಬೆಳೆಸುವ ಕಾರ್ಯದ ಜೊತೆಗೆ ಜನಪದ ಶೈಲಿಯಲ್ಲಿ ಆಸಕ್ತಿ ಮೂಡಿಸುವ ಸಾಹಿತ್ಯ ಕೃಷಿ ಮಾಡುತ್ತಿರುವಿದು ಕಂಡರೆ ಅವರ ದೇಶಿ ಶೈಲಿ ನಮಗೆ ಅರಿವಿಗೆ ಬರುವುದು. ಅನೇಕ ಸಂಘ ಸಂಸ್ಥೆಗಳ ಪದಾಧಿ ಕಾರಿಯಾಗಿ, ಪ್ರತಿನಿಧಿಯಾಗಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಹಿರಿಮೆ ಗರಿಮೆ ಹೆಚ್ಚಿಸಿಕೊಂಡಿದ್ದಾರೆ.
ಪ್ರಕಟವಾದ ಕೃತಿಗಳು:
ಕವನ ಸಂಕಲನಗಳು:
ಕಲ್ಲರಳಿನ ಕರುಳು(2000),ಚಿಗುರು ಚೇತನ(2012),
ಬೆಳಸುಗಳು(2023) ಮೂರು ಕವನ ಸಂಕಲನಗಳು.
ಪ್ರಸ್ತುತ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ,ತಲ್ಲಣ,ತವಕ ಸಮಸ್ಯೆಗಳನ್ನು ಕುರಿತು ಬಂಡಾಯದ ಆಶಯದ ಕವನಗಳಾಗಿವೆ.
ಮಕ್ಕಳ ಸಾಹಿತ್ಯ:
ಮಕ್ಕಳ ಸಾಹಿತ್ಯಕ್ಕೂ ಅಕ್ಷರ ಅರಿವು ಮಕ್ಕಳಿಗಾಗಿಯೇ ಬರೆದ ಈ ಸಂಕಲನ ಕನ್ನಡೇತರ ಭಾಷಾ ಮಕ್ಕಳಿಗು ಕಲಿಯಲು ಕಲಿಸಲು ಈ ಪುಸ್ತಕ ಬಹಳ ಉಪಯುಕ್ತವಾ ಗಿದೆ. ತಾತಾ (ಕಿರು ನಾಟಕ 2024)ಮಕ್ಕಳಲ್ಲಿ ಜೀವನ ಮೌಲ್ಯ,ಸಂಸ್ಕೃತಿ ಬೆಳೆಸುವ ನಾಟಕ.ಇದನ್ನ ನೋಡಲು ಈ ಗಾತ್ರದಲ್ಲಿ ಚಿಕ್ಕದಾಗಿದ್ದು, ಒಳಗಿನ ಸಂದೇಶ ಬಹಳ ಅರ್ಥಪೂರ್ಣವಾಗಿ ಮೂಡಿ ಬಂದಿದೆ.ಸಂಸ್ಕಾರ ಸಂಸ್ಕೃತಿಯಂತ ಮೌಲ್ಯಗಳು ಮರೆಯಾಗುತ್ತಿರುವ ಈಗಿನ ಸಂದರ್ಭದಲ್ಲಿ ತಾತನ ಪಾತ್ರ ಮೂಲಕ ಒಳ್ಳೆಯ ಮೌಲ್ಯದ ಬೀಜಗಳು ಬಿತ್ತುವ ಕೆಲಸ ತಾತ ನಾಟಕದಲ್ಲಿ ಕಾಣಬಹುದು.ಇದೊಂದು ಉತ್ತಮ ಪ್ರಯೋಗಶೀಲತೆ ಹೊಂದಿದೆ.ಸಂಭಾಷಣೆ, ಪಾತ್ರಗಳ ಸೃಷ್ಟಿ ಮನ ಮಿಡಿಯುತ್ತವೆ.
ನೀಲಕಂಠ (2024) ಶ್ರೀ ನೀಲಕಂಠ ಜಮಾದಾರ ಅವರು ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಅಭಿನಂದನ ಹೊರ ತಂದು ನೀಲಕಂಠ ಜಮಾದಾರ ಅವರ ಸೇವೆ,ಒಡನಾಟ,ಸಮಾಜ, ಬ್ಯಾಂಕ್ ಮುಂತಾದ ಕೊಡುಗೆ ಸ್ಮರಿಸಿ,ವೈಚಾರಿಕ ಮತ್ತು ಪ್ರಗತಿಶೀಲ ಚಿಂತನೆಯ ಲೇಖನಗಳನ್ನು ಆಯ್ದ ಹಾಕಲಾಗಿ ಆಕರ ಗ್ರಂಥ ಮಾಡಿದ್ದಾರೆ. ಗ್ರಂಥದ ಪ್ರಧಾನ ಸಂಪಾದಕರು ಬಿ.ಎಚ್.ನಿರಗುಡಿ ಜೊತೆ ಸಂಪಾದಕರಾಗಿ ಝಳಕಿ ಹೊರ ತರಲಾಗಿದೆ.
ಅರಿವೇ ಗುರು ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಕಲಬುರಗಿ ಸಹಯೋಗದೊಂದಿಗೆ ಪ್ರತಿಭಾವಂತ ಶಿಕ್ಷಕರು ಬರೆದ ಕವಿತೆಗಳು ಒಂದೆಡೆ ಸೇರಿಸಿ ಸಂಕಲನವನ್ನು ಹೊರ ತಂದಿದ್ದಾರೆ.ಆ ಪುಸ್ತಕದ ಸಂಪಾದನಾ ಮಂಡಳಿಯ ಸದಸ್ಯರಾಗಿ ಹೊರ ತಂದವರು.ಚಂದ್ರಾರಾಜ ಎನ್ನುವ ವಚನಾಂಕಿತದಲ್ಲಿ ಸುಮಾರು 300 ಕ್ಕಿಂತಲೂ ಹೆಚ್ಚು ಆಧುನಿಕ ವಚನಗಳು ಪ್ರಕಟವಾಗಿವೆ.ಬೆಳಗಾವಿ ಜಿಲ್ಲೆಯ ಅಥಣಿ ಮಠದ ಮೂಲಕ ರಾಜ್ಯ ಮಟ್ಟದಲ್ಲಿ ಪ್ರಕಟವಾದ ವಚನ ಓಂಕಾರ ಕೃತಿಯಲ್ಲಿ ಇವರ ವಚನಗಳು ಪ್ರಕಟವಾಗಿವೆ.ಆಗಿನ ಕನಕಪುರ ತಾಲುಕಿನ ಕನ್ನಡ ಸಾಹಿತ್ಯ ಸಮ್ಮೇಳನದ ವಚನ ಪ್ರಸಾದ ಪುಸ್ತಕದಲ್ಲಿ ವಚನಗಳು ಪ್ರಕಟವಾಗಿವೆ.ಬೀದರಿನಲ್ಲಿ ಪ್ರಕಟವಾದ ವಚನಾಂಜಲಿ ಪುಸ್ತಕದಲ್ಲಿ ವಚನಗಳು ಪ್ರಕಟವಾಗಿವೆ. ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರ ಅವರಿಗೆ 75 ವರ್ಷಗಳು ತುಂಬಿದ ಶುಭ ಸಂದರ್ಭದಲ್ಲಿ ಹೊರ ತಂದ ಕೃತಿಯಲ್ಲಿ ಇವರ ವಚನಗಳು ಪ್ರಕಟವಾಗಿವೆ.
ಲೇಖನಗಳು ಪ್ರಕಟ:
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಚನಕಾರ ಭೋಗಣ್ಣನ ಬಗ್ಗೆ ಬರೆದ ಲೇಖನ,
ಸಂಯುಕ್ತ ಕರ್ನಾಟಕದಲ್ಲಿ ಸದ್ಗುರು ರೇವಣಸಿದ್ದೇಶ್ವರ ಕುರಿತು ಮತ್ತು ಶರಣ ಭೋಗೇಶ್ವರ ಕುರಿತು ಬರೆದ ಲೇಖನ ಮತ್ತು ಕವನಗಳು,ವಿಜಯವಾಣಿಯಲ್ಲಿ ಪತ್ರಿಕೆಯಲ್ಲಿ ಕವನಗಳು ಪ್ರಕಟವಾಗಿವೆ.ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕವನ ಪ್ರಕಟ ಹಿಂದಿನ ಸ್ಥಳೀಯ ಪತ್ರಿಕೆಗಳಾದ,ಶಾಸನ,ಗ್ರಿನೊಬಲ್ಸ್ ,ಚಿಂತಕ ,ಉದಯ ವಾಣಿ ಪತ್ರಿಕೆಗಳಲ್ಲಿ ಹಲವು ಲೇಖನಗಳು.ಇಂದಿನ ಕಲ್ಯಾಣ ಕಹಳೆ ಮಾಸ ಪತ್ರಿಕೆಯಲ್ಲಿ, ಸೂರ್ಯ ನಗರಿ ಕಲಬುರಗಿ ಕುರಿತು ಲೇಖನ,ಕಲ್ಯಾಣ ಚೇತನ ಮತ್ತು ಪ್ಯಾಸೆನ್ ಪೀಪಲ್ಸ್ ದಿನ ಪತ್ರಿಕೆಗಳಲ್ಲಿ ಇವರ ಲೇಖನ ಕವನಗಳು ಪ್ರಕಟವಾಗಿವೆ.ಹೈದ್ರಾಬಾದ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಕಲಬುರಗಿ ಜಿಲ್ಲೆಯ ಕುರಿತು ಬರೆದ ಲೇಖನ, ಬಂಧು ಎನ್ನುವ ಮಾಸ ಪತ್ರಿಕೆಯ ಲ್ಲಿ ಪ್ರಕಟ,ಗವಿಸಿದ್ಧಪ್ಪ ಪಾಟೀಲರ ಕೆಂಪು ಗುಲಾಬಿಯ ಹಾಯಿಕುಗಳು ಕುರಿತು ಕಲ್ಯಾಣ ಲೋಕ ಪತ್ರಿಕೆಯಲ್ಲಿ ಬಿಡಿ ಬಿಡಿಯಾಗಿ ಪ್ರಕಟವಾದ ಲೇಖನಗಳು. ನಾಡಿನ ಹಲವಾರು ಹಿರಿಯ ಸಾಧಕರ,ಅಭಿನಂದನ ಗ್ರಂಥಗಳಿಗೆ ಲೇಖನ, ಹಲವು ಗ್ರಂಥಗಳಿಗೆ ವ್ಯಕ್ತಿ ವಿಶೇಷ ಲೇಖನ,ಯುವ ಸಾಹಿತಿಗಳ ಕೃತಿಗೆ ಬೆನ್ನುಡಿ ಮುನ್ನುಡಿ ಬರೆದಿದ್ದಾರೆ.
ಆಕಾಶವಾಣಿ:
ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸ್ವರಚಿತ ಕವನ ವಾಚನ,ಚರ್ಚಾ ಕಾರ್ಯಕ್ರಮ,ಮತ್ತು ಅನೇಕ ಬೆಳಗಿನ ಚಿಂತನೆಗಳು ಪ್ರಸಾರವಾಗಿವೆ.ದೂರದರ್ಶನದಲ್ಲಿ ಯುಗಾದಿ ಹಾಸ್ಯ ಕವಿತೆ ವಾಚನೆ,ಝಳಕಿ ಬಿ. ಗ್ರಾಮದ ಜನಪದ ಮಹಿಳಾ ಕಲಾವಿದರಿಗೆ ಆಕಾಶವಾಣಿ ಕಲಬುರ್ಗಿಯಲ್ಲಿ ಜನಪದ ಹಾಡು ಹಾಡುವ ಅವಕಾಶ ಕಲ್ಪಿಸಿ ಕೊಡುವ ಪ್ರಯತ್ನ ಮಾಡಿದ್ದಾರೆ. ಆಳಂದ ತಾಲೂಕಾ ನ್ಯಾಯಾಲದಿಂದ ಝಳಕಿ ಬಿ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ ಮಾಡಿಸಿದ್ದಾರೆ.
ಭಾಗವಹಿಸಿದ ಕಾರ್ಯಕ್ರಮಗಳು:
1988 ರಲ್ಲಿ ಖ್ಯಾತ ಸಾಹಿತಿ ಮತ್ತು ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಪ್ರೊ.ಜಿ. ಎಸ್. ಸಿದ್ಧಲಿಂಗಯ್ಯನವರ ಸಮ್ಮುಖದಲ್ಲಿ ನೂತನ ವಿದ್ಯಾ (NV) ಸಂಸ್ಥೆಯಲ್ಲಿ ಕವನ ವಾಚನ),1992ರಲ್ಲಿ ಬಿಜಾಪುರ ಜಿಲ್ಲೆಯ ಬಿಜಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಗೆ ವಾಚನಕ್ಕೆ ಇವರ ಕವಿತೆ ಆಯ್ಕೆ,1993 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಿಂದ ಪ್ರಕಟ ಆಗುವ ಬೆಳಕಿಂಡಿ ಮಾಸ ಪತ್ರಿಕೆಯಲ್ಲಿ ಕವನ ಪ್ರಕಟ,1996 ರಲ್ಲಿ ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಮಂಗಳ ಕಲಾ ಸಾಹಿತ್ಯ ವೇದಿಕೆ ವತಿಯಿಂದ ರಾಜ್ಯ ಮಟ್ಟದ ಕವನ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ,1998 ರಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ವತಿಯಿಂದ ಪ್ರಶಂಸನ ಪತ್ರ,1999 ರಲ್ಲಿ ತಾಲೂಕು ಚಿಂಚೋಳಿಯಲ್ಲಿ ಕಾರ್ಗಿಲ್ ಕವಿಗೋಷ್ಠಿ,2000 ರಲ್ಲಿ ಮನುಕುಲ ಕಲ್ಯಾಣ ಟ್ರಸ್ಟ್ ಮತ್ತಿಮೂಡ ಚಿತ್ತಾಪುರ ಇವರಿಂದ ಸನ್ಮಾನ,2000 ರಲ್ಲಿ ಖ್ಯಾತ ಸಮನ್ವಯ ಕವಿ ಚೆನ್ನವೀರ ಕಣವಿ ಮತ್ತು ಜಾನಪದ ವಿದ್ವಾಂಸ ಮಲ್ಲಿಕಾರ್ಜುನ ಲಠ್ಠೆ ಅವರಿಂದ ಪ್ರಶಂಸನ ಪತ್ರ
2002 ರಲ್ಲಿ ಕಲಬುರಗಿ ಆಕಾಶವಾಣಿಯಿಂದ ಕಲ್ಲರಲಿನ ಕರುಳು ಪುಸ್ತಕ ಪರಿಚಯ,ಗಡಿ ಭಾಗ ಮಾದನ ಹಿಪ್ಪರಗಾದಲ್ಲಿ ನಡೆದ ಯುವ ಕವಿ ಗೋಷ್ಠಿಯ ಅಧ್ಯಕ್ಷತೆ,(2002),ಆಳಂದದಲ್ಲಿ ವಿದ್ಯಾರ್ಥಿಗಳಿಗಾಗಿ ಬೇಸಿಗೆಯ ಚಿಣ್ಣರ ಅಂಗಳ ಕವಿಗೋಷ್ಠಿ ಏರ್ಪಾಡ ಮತ್ತು ನಿರೂಪಣೆ
(2003)ಆಳಂದ ತಾಲೂಕಿನ ಶಿಕ್ಷಕರಿಗಾಗಿ ಸಹ ಚಟುವಟಿಕೆ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ (2003), ಆಳಂದದಲ್ಲಿ ಸಾಕ್ಷರತಾ ಸಮಿತಿವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ (2005),
ಆಳಂದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಲಹಾ ಸಮಿತಿ ಸದಸ್ಯ(2005),ಝಳಕಿ ಬಿ ಗ್ರಾಮದಲ್ಲಿ ಆಳಂದ ತಾಲೂಕು ನ್ಯಾಯಾಲಯದಿಂದ ಗ್ರಾಮೀಣ ಜನರಿಗೆ ನ್ಯಾಯ ಅರಿವು ಕಾರ್ಯಕ್ರಮಕ್ಕೆ ಸಹಕಾರ ಮತ್ತು ಕಾರ್ಯಕ್ರಮದ ನಿರೂಪಣೆ(2008),ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ (2008)ತಾಲೂಕಿನ ಅಖಿಲ ಭಾರತ ಶರಣ ಸಾಹಿತ್ಯ ಸಂಯುಕ್ತ ಆಶ್ರಯದಲ್ಲಿ ಗಡಿ ಜಾಗೃತ ಸಮಾವೇಶದಲ್ಲಿ ಕವನ ವಾಚನ,ಕನ್ನಡ ಸಂಸ್ಕೃತ ಇಲಾಖೆ ಕಲಬುರಗಿ ಇವರ ವತಿಯಿಂದ ನಡೆದ ಸಂಗೀತ ಸೌರಭ ಕಾರ್ಯಕ್ರಮ ಝಳಕಿ ಬಿ.ಗ್ರಾಮದಲ್ಲಿ ನಡೆಸಲು ವ್ಯವಸ್ಥೆ ನಿರೂಪಣೆ(2008),ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿದ್ದಾಗ 1 ರಿಂದ 10 ನೇ ತರಗತಿಯ ಮಕ್ಕಳಿಗೆ ವಿಶೇಷ ಕವಿಗೋಷ್ಠಿ,(2008),ಆಳಂದ ಘಟಕದ ಮಕ್ಕಳ ಸಾಹಿತ್ಯ ವೇದಿಕೆಯಿಂದ ವಚನ ಗಾಯನ ಕಂಠ ಪಾಠ ಸ್ಪರ್ಧೆ(2008),
2008ರಿಂದ 2015 ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾದನ ಹಿಪ್ಪರಾಗ ವಲಯದ ಗೌರವ ಕೋಶಾಧ್ಯಕ್ಷರಾಗಿ ಆಳಂದದಲ್ಲಿ ವಿವಿಧ ಶಾಲಾ ಮಕ್ಕಳಿಗಾಗಿ ಮಕ್ಕಳ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿವಿಧ ಶಾಲಾ ಮಕ್ಕಳಿಗೆ ಕರೆ ತರುವ ಜವಾಬ್ದಾರಿ ಬಿಇಒ ಕಾರ್ಯಾಲಯದಿಂದ ವಹಿಸಲಾಗಿದೆ (2009) ಆಳಂದದ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂ ದ ಕವಿ ನೆನಹು ಕವಿಗೋಷ್ಠಿಯಲ್ಲಿ ಕಾರ್ಯಕ್ರಮದಲ್ಲಿ ಕವನ ವಾಚನ(2010) ಮಹಾರಾಷ್ಟ್ರದ ಮೈಂದರಗಿಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಯು. ಆರ್. ಅನಂತಮೂರ್ತಿ ಯವರ ಜನ್ಮ ದಿನದ ಅಂಗವಾಗಿ ಅನಂತಮೂರ್ತಿಯವರ ಕುರಿತು ಉಪನ್ಯಾಸ (2014),ಶಿವಮೊಗ್ಗದಲ್ಲಿ ಕೋಲಿ ಗಂಗಾಮತ ಸಮಾಜದ ಗಂಗಾ ಧ್ವನಿ ಪುಸ್ತಕದ ಸಂಪಾದಕ ಮಂಡಳಿ ಯ ಸದಸ್ಯರಾಗಿದ್ದ ಪ್ರಯುಕ್ತ. ಸನ್ಮಾನ(2015),ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ವಲಯದ ಗೌರವ ಕಾರ್ಯದರ್ಶಿಯಾಗಿ (2016-2021), ಆಳಂದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಜಿಡಗಾ ಘಟಕದ ಅಧ್ಯಕ್ಷ (2018),ಧಂಗಾಪುರ ಶಾಲೆಯ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಫಲಿತಾಂಶ ಶೇಕಡಾ 97 % ಬಂದ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತರಿಂದ ಪ್ರಶಂಸನಿಯ ಪತ್ರ (2018),ರಾಯಚೂರಿನ ಮಂತ್ರಾಲಯದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವನ ವಾಚನ(2019), ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಕಲಬುರಗಿ ಜಿಲ್ಲಾ ಘಟಕದಲ್ಲಿ ಸಹ ಕಾರ್ಯದರ್ಶಿಯಾಗಿ ನಾಮ ನಿರ್ದೇಶನ (2022- 2027), ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2023),ಪರಿವರ್ತನಾ ಪ್ರತಿಷ್ಠಾನ ಕಲಬುರಗಿ ಘಟಕದ ವತಿಯಿಂದ ಸನ್ಮಾನ (2024), ಜೇವರಗಿ ತಾಲೂಕಿನಲ್ಲಿ ನಡೆದ ರಾಜ್ಯ ಮಟ್ಟದ ಗಮಕ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಗಮಕ ಲೇಖನ (2024),ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿಕವನ ವಾಚನ (2024),ಕಲಬುರಗಿ ನಗರದ ಮಾತಾ ಮಾಣಿಕೇಶ್ವರಿ ಬಡಾವಣೆಯಲ್ಲಿ ದಸರಾ ಕವಿಗೋಷ್ಠಿ ಆಯೋಜನೆ ಮಾಡಲಾಯಿತು (2024), ಕನ್ನಡ ಸಾಹಿತ್ಯ ಸಂಘ ಜಗತ್ ವೃತ್ತ ಕಲಬುರ್ಗಿಯಲ್ಲಿ ದಸರಾ ಕವಿಗೋಷ್ಠಿಯಲ್ಲಿ ಕವನ ವಾಚನ (2024), ಬರಹಗಾರರ ಬಳಗ ಜಿಲ್ಲಾ ಘಟಕ ಕಲಬುರಗಿಯವ ರವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಸನ್ಮಾನ (2024), ಕಲಬುರಗಿಯಲ್ಲಿ ನಡೆದ ಜಿಲ್ಲಾ ೨೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರ ಸನ್ಮಾನದಲ್ಲಿ ಸನ್ಮಾನ (2025),
ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಶಿಕ್ಷಕರ ಕವಿ ಸಮ್ಮೇಳನದಲ್ಲಿ ಕವನ ವಾಚನ,ಕಲಬುರಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ,ಮೈಸೂರಿನಲ್ಲಿ ನಡೆದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಚುಟುಕು ಕಾವ್ಯ ವಾಚನ,ಅಫಜಲಪುರ ತಾಲೂಕಿನಲ್ಲಿ ನೇತ್ರ ಶಾಸ್ತ್ರ ಚಿಕಿತ್ಸೆಯಲ್ಲಿ ಸ್ವಯಂ ಸೇವಕ ಸೇವೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಚಕೋರ ಸಾಹಿತ್ಯ ವೇದಿಕೆ ಕಲಬುರಗಿ ಜಿಲ್ಲೆಯಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಂಪರೆ ಉಪನ್ಯಾಸ ಮಸಲಿಕೆಯಲ್ಲಿ ಉಪನ್ಯಾಸ ನೀಡಿದ್ದಾರೆ.ಸಾಹಿತ್ಯ ಸಮಾಗಮ,ಸಾಹಿತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು. ಹೀಗೆ ಇನ್ನೂ ಹಲವಾರು ಕಾರ್ಯಕ್ರಮ-ಸಂಘ- ಸಂಸ್ಥೆ-ಶೈಕ್ಷಣಿಕ ಕಾರ್ಯಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.
ಸಂದ ಪ್ರಶಸ್ತಿ ಪುರಸ್ಕಾರ:
ಚಿತ್ರದುರ್ಗ ಸಿರಿಗನ್ನಡ ಪ್ರಕಾಶನ ವತಿಯಿಂದ ಕನ್ನಡ ರತ್ನ ಪ್ರಶಸ್ತಿ (2011),ಚಿತ್ರದುರ್ಗ ಸಿರಿಗನ್ನಡ ಪ್ರಕಾಶನ ವತಿಯಿಂದ ಕನ್ನಡ ರತ್ನ ಪ್ರಶಸ್ತಿ (2010) ,ಮಹಾರಾಷ್ಟ್ರದ ಮೈಂದರಗಿಯಲ್ಲಿ ಶಿಕ್ಷಕರ ಸೇಡಮ್ ತಾಲೂಕಿನ ಮೇದಕ್ ನ ಚೆನ್ನಕೇಶವ ಉತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿ (2018)ಬಿಜಾಪುರ ಜಿಲ್ಲೆಯ ಆಯೇರಿ ಸಂಸ್ಥೆ ವತಿಯಿಂದ ರಾಷ್ಟ್ರೀಯ ಬಸವ ರತ್ನ ಪ್ರಶಸ್ತಿ (2019)ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ವತಿಯಿಂದ ಕವಿ ಶ್ರೇಷ್ಠ ಪ್ರಶಸ್ತಿ (2026), ಸಿರಿಗನ್ನಡ ವೇದಿಕೆಯ ರಾಜ್ಯ ಮಟ್ಟದ ಪ್ರಶಸ್ತಿ (2026), ಉರ್ದು ಆಕಾಡೆಮಿ ಯಾದಗಿರಿ ಇವರಿಂದ ಆದರ್ಶ ಶಿಕ್ಷಕ ಪ್ರಶಸ್ತಿ,
ಕಲಬುರಗಿ ಉತ್ತರ ವಲಯದ ರೋಜಾ ತೈನ್ ಉರ್ದು ಕ್ಲಸ್ಟ್ ರಿನ ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ, ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ರಾಜ್ಯೋತ್ಸವ ಪ್ರಶಸ್ತಿ,ಕಲಬುರಗಿ ಜಿಲ್ಲಾ ರೋಟರಿ ಕ್ಲಬ್ ವತಿಯಿಂದ ನ್ಯಾಷನಲ್ ಬಿಲ್ಡರ್ ಅವಾರ್ಡ್,
ವಿದ್ಯಾರ್ಥಿಗಳಿಗಾಗಿ:
ಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ,ವಾಚನ ಕಂಠ ಪಾಠ ಸ್ಪರ್ಧೆ,ನಾಟಕ,ಕಥೆ,ಹಾಡು,ವಿದ್ಯಾರ್ಥಿಗಳಿಗಾಗಿ ಸುಂದರ ಬರವಣಿಗೆ,ಸ್ವರಚಿತ ಕಥೆ,ಕವನ ಬರೆಸುವುದು,ಅಂಗವಿಕಲ ಮಕ್ಕಳಿಗೆ ಹಾಡು ಬರೆದು ಹಾಡಿಸಿ ಪ್ರೋತ್ಸಾಹ, ಅವರಿಗೆ ಮಕ್ಕಳ ದಿನಾಚರಣೆಯ ದಿನ ಸನ್ಮಾನಿಸುವುದು,ವಿಶೇಷ ತರಗತಿ ತಗೆದುಕೊಂಡು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಓದುವಂತೆ ಮಾಡಿ ಕಲಿಕೆಯಲ್ಲಿ ಪ್ರಗತಿ ಸಾಧಿಸುವುದು.
ಪಲ್ಸ್ ಫೋಲಿಯೋ,ಚಿಕನ್ ಗುನ್ಯಾ, ಶೌಚಾಲಯ, ಪರಿಸರ,ದುಶ್ಚಟಗಳು,ವರದಕ್ಷಿಣೆ, ಜಾತಿಯತೆ, ಬಗ್ಗೆ ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಅರಿವು ಮೂಡಿಸಲು ಪ್ರಭಾತ್ ಫೇರಿ ಮಾಡಿಸುವುದು.
ವಿವಿಧ ಸಂಘಟನೆಗಳಲ್ಲಿ:
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಉಪಾಧ್ಯಕ್ಷ,ಕರ್ನಾಟಕ ಮಕ್ಕಳ ಸಾಹಿತ್ಯ ವೇದಿಕೆ ಆಳಂದ ಘಟಕದ ಅಧ್ಯಕ್ಷ ,ಕರ್ನಾಟಕ ಸರಕಾರಿ ಬಡ್ತಿ ಶಿಕ್ಷಕರ ಸಂಘದ ಆಳಂದ ತಾಲುಕು ಘಟಕದ ಅಧ್ಯಕ್ಷ, ಭಾರತ ಜ್ಞಾನ ವಿಜ್ಞಾನ ಸಮಿತಿ ಆಳಂದ ಘಟಕದ ಅಧ್ಯಕ್ಷ , ಕಲಬುರಗಿ ತಾಲೂಕಿನಲ್ಲಿರುವ ದಕ್ಷಿಣ ವಿಧಾನ ಸಭಾ ಮತಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ,ಮಾದನ ಹಿಪ್ಪರಗಾದ ಕನ್ನಡ ಸಾಹಿತ್ಯ ಪರಿಷತ್ತಿನ ವಲಯ ಘಟಕದ ಕೋಶಾಧ್ಯಕ್ಷ,ಕನ್ನಡ ಸಾಹಿತ್ಯ ಪರಿಷತ್ತಿನ ಆಳಂದ ತಾಲೂಕದ ಸಲಹಾ ಸಮಿತಿ ಸದಸ್ಯ,
ಕರ್ನಾಟಕ ರಾಜ್ಯ ಬಡ್ತಿ ಶಿಕ್ಷಕರ ಸಂಘದ ಕಲಬುರಗಿ ತಾಲೂಕ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಿರಿಗನ್ನಡ ವೇದಿಕೆ ಕಲಬುರಗಿ ಜಿಲ್ಲಾ ಘಟಕವು ಇವರ ಸಾಹಿತ್ಯ ಕುರಿತು ಸಾಹಿತ್ಯ ಸಮಾಗಮದಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹೀಗೆ ಸುದೀರ್ಘವಾಗಿ ಇಪ್ಪತ್ತೊಂಬತ್ತು ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ದಕ್ಷತೆ, ಪ್ರಾಮಾಣಿಕ ಕರ್ತವ್ಯದಿಂದ ಕಾರ್ಯ ನಿರ್ವಹಿಸಿದ್ದಾರೆ. ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ,ಸಂಘ ಸಂಸ್ಥೆಗಳಲ್ಲಿ ಸಾಕಷ್ಟು ಕೃಷಿ ಮಾಡಿದ ಮಾಡುತ್ತಿರುವ ಇನ್ನೂ ಒಂಬತ್ತೇ ತಿಂಗಳಲ್ಲಿ ವೃತ್ತಿಯಿಂದ 31-04-2027 ರಂದು ನಿವೃತಿಯಾಗುತ್ತಿರುವ ರಾಜೇಂದ್ರ ಝಳಕಿ ಕೋರಬಾ ಅವರ ಸಾಧನೆ ಅನನ್ಯ.ಈ
ಷಷ್ಠೀ ಪೂರ್ತಿ ಸಮಾರಂಭದಲ್ಲಿ ರಾಜೇಂದ್ರ ಎಂಬ ಅಭಿನಂದನ ಗ್ರಂಥ ಅವರ ಕುಟುಂಬ ವರ್ಗ, ಹಿರಿಯರು, ಸಾಹಿತಿ,ಕವಿಗಳು,ಶಿಷ್ಯರು,ಒಡನಾಡಿಗಳು,ಸಮಾಜ ಅವರಿಗೆ ಅರ್ಪಿಸಲಿದೆ.ಇಂತಹ ಸರಳ,ನಿಸ್ಪ್ರಹ,ನಿಸ್ವಾರ್ಥ, ಸೌಜನ್ಯ ಸ್ನೇಹ ಜೀವಿ.ಆದರೆ ಅಂತರಂಗದಲ್ಲಿ ಇರುವ ಕೆಂಡ ಬಂಡಾಯ ಪ್ರಜ್ಞೆ ಯನ್ನು ಯಾವ ಮುಲಾಜಿಲ್ಲದೇ ಹೊರ ಹಾಕುವ ಕಾಲ ಬಂದಿದೆ.ಅವರ ಆತ್ಮಕಥನವೂ ಪ್ರಕಟವಾಗಬೇಕಾಗಿದೆ.ನಿಜ ಶರಣ ಅಂಬಿಗರ ಚೌಡಯ್ಯ
ನಂತೆ; ವಾಲೀಕಾರ ಚನ್ನಣ್ಣನಂತೆ ಅವರ ಬರಹಗಳು ನೇರ,ನಿಷ್ಟುರ,ನಿರ್ಭೀಡೆಯಿಂದ ಹೊರ ಬರುವ ಸ್ಪಷ್ಟವಾದ
ಲಕ್ಷಣಗಳು ಕಂಡುಬರುತ್ತವೆ. ಇವರ ಒಟ್ಟು ಜೀವಮಾನದ ಸಾಧನೆಯನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕಲಬುರಗಿಯವರು ಗುರುತಿ ಪ್ರಪ್ರಥಮವಾಗಿ ಜರುಗುತ್ತಿರುವ ಶಿಕ್ಷಕ ಸಾಹಿತಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಇಡೀ ಶಿಕ್ಷಕ ಬಳಗಕ್ಕೆ ಮತ್ತು ಶಿಕ್ಷಕ ಸಾಹಿತಿಗಳಿಗೆ ಸಂದ ಗೌರವ..
ಲೇಖಕರು:ಡಾ.ಗವಿಸಿದ್ಧಪ್ಪ ಎಚ್.ಪಾಟೀಲ ಸಾಹಿತಿಗಳು ಕಲಬುರಗಿ
