ಸೃಜನಶೀಲ ಶಿಕ್ಷಕ ಅಂಬಾರಾಯ ಮಡ್ದೆ

ಸೃಜನಶೀಲ ಶಿಕ್ಷಕ ಅಂಬಾರಾಯ ಮಡ್ದೆ

ಸೃಜನಶೀಲ ಶಿಕ್ಷಕ ಅಂಬಾರಾಯ ಮಡ್ದೆ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗಡಿ ಗ್ರಾಮಗಳಲ್ಲಿ ಒಂದಾದ ಮದಗುಣಕಿ ಎಂಬ ಗ್ರಾಮದಲ್ಲಿ ಶ್ರೀಮತಿ ಲಷ್ಮಿಬಾಯಿ ಶ್ರೀ ರಾಮಚಂದ್ರ ಮಡ್ಡೆ ದಂಪತಿಗಳ ಉದರದಲ್ಲಿ ದಿನಾಂಕ 7.7.1989ರಂದು ಜನಿಸಿದ ಶ್ರೀ ಅಂಬಾರಾಯ ಮಡ್ಡೆ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು(1-5ನೇ )ಅದೇ ಗ್ರಾಮದಲ್ಲಿ ಮುಗಸಿದರು.ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬೆಳೆದ ಇವರ ಕುಟುಂಬ ಕೃಷಿ ಕಾಯಕದಲ್ಲಿ ತೊಡಗಿತ್ತು.ಕೆಲವು ಕೌಟುಂಬಿಕ ಕಾರಣಕ್ಕಾಗಿ ಮದಗುಣಕಿ ಗ್ರಾಮವನ್ನು ತೊರೆದು 2000ರಲ್ಲಿ ಕಲಬುರ್ಗಿ ಜಿಲ್ಲೆಯ ಈಗಿನ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮಕ್ಕೆ ಬಂದು ನೆಲೆಸಿತ್ತು.ಅಕ್ಷರದ ಅರಿವೇ ಇಲ್ಲದ ಕುಟುಂಬದಲ್ಲಿ ಬೆಳೆದ ಇವರು ತಮ್ಮ ಶಿಕ್ಷಣವನ್ನು ಕುರಿಕೋಟ ಗ್ರಾಮದಲ್ಲಿ ಮುಂದುವರಿಸಿದರು.ನಂತರ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ ನಲ್ಲಿ ಪಿ ಯು ಸಿ,ನೂತನ ವಿದ್ಯಾಲಯದಲ್ಲಿ ಶಿಕ್ಷಕರ ತರಬೇತಿ(ಡಿ.ಎಡ್ )ಪಡೆದ ಇವರು,ತಮ್ಮ ಪದವಿಯನ್ನು ಉನ್ನತ ಶ್ರೇಣಿಯೊಂದಿಗೆ ಸರ್ಕಾರಿ ಪದವಿ ಕಾಲೇಜ ಮಹಾಗಾoವ ಕ್ರಾಸನಲ್ಲಿ ಮುಗಸಿದರು.ಬಿ.ಎಡ ಶಿಕ್ಷಣವನ್ನು ಶ್ರೀ ಹಿಂಗುಲಂಬಿಕಾ ಶಿಕ್ಷಣ ಮಹಾವಿದ್ಯಾಲಯ ದಲ್ಲಿ ಪೂರ್ಣಗೊಳಿಸಿದ ಇವರು ಮದ್ಯದಲ್ಲಿ ಹಲವಾರು ಆಸಕ್ತಿಯ ಕ್ಷೇತ್ರಗಳಲ್ಲಿ ಪಾಲ್ಗೊಂಡಿದ್ದರು.ಸ್ಪರ್ಧಾತ್ಮಕ ಪರೀಕ್ಷೆಯ ಉತ್ತಮ ತಯ್ಯಾರಿಯೊಂದಿಗೆ 2014ರಲ್ಲಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ 111ಅಂಕಗಳೊಂದಿಗೆ ಅಗ್ರ ಶ್ರೇಣಿಯನ್ನು ಪಡೆದು ಶಿಕ್ಷಕರ ನೇಮಕಾತಿಗೆ ಅರ್ಹತೆ ಪಡೆದರು.ಶಿಸ್ತು ಬದ್ದ ಓದಿನಲ್ಲಿ ತೊಡಗಿಕೊಂಡ ಇವರು 2015ರಲ್ಲಿ ನಡೆದ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಕಲಬುರ್ಗಿ ಜಿಲ್ಲೆಗೆ ಕನ್ನಡ ಭಾಷಾ ವಿಷಯದಲ್ಲಿ ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ

ಶಾಲೆ ದಸ್ತಾಪುರದಲ್ಲಿ ತಮ್ಮ ಶಿಕ್ಷಕ ವೃತ್ತಿ ಜೀವನ ಪ್ರಾರಂಭಿಸಿದರು.ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಪ್ರಗತಿಯನ್ನು ಅರಿತ ಇವರು ಬುನಾದಿ ಹಂತದ ಕಲಿಕೆಗೆ ಆದ್ಯತೆ ನೀಡಿದ್ದಾರೆ.ಮಕ್ಕಳೊಂದಿಗೆ ಮಕ್ಕಳಾಗಿ ಅವರ ಕಲಿಕೆಗೆ ಮುಕ್ತ ವಾತಾವರಣ ನಿರ್ಮಿಸಿದರು.ಇದರಿಂದ ಮಕ್ಕಳು,ಪೋಷಕರು,ಸಮುದಾಯ,ಶಿಕ್ಷಣ ಇಲಾಖೆಯಲ್ಲಿ ಗುರುತಿಸಿಕೊಂಡರು.ಹಲವಾರು ತರಬೇತಿಗೆ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಸಿದ್ದಾರೆ.8ವರ್ಷಗಳ ಕಾಲ ದಸ್ತಾಪುರ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ 2023ರಲ್ಲಿ ವರ್ಗಾವಣೆ ಹೊಂದಿ ಪ್ರಸ್ತುತ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಮಹಾಗಾoವ ಕ್ರಾಸ್ ನಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ. ಎ ಪದವಿಯನ್ನು ಪಡೆದಿದ್ದು ತನ್ನ ಜೀವನಕ್ಕೆ ಆಧಾರವನ್ನು ತಂದುಕೊಟ್ಟ ವೃತ್ತಿಯಲ್ಲಿ ಕರ್ತವ್ಯ ನಿಷ್ಠೆ ಪ್ರಜ್ಞೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಇವರು ವೃತ್ತಿಯ ಜೊತೆಗೆ ಕಾರ್ಯಕ್ರಮಗಳ ಸಂಘಟನೆ, ನಿರೂಪಣೆ, ಸಾಹಿತಿಕ ಸೇವೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ತಮ್ಮನ ತಾವು ತೊಡಗಿಸಿಕೊಂಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿರುವ ಇರುವ ಕಮಲಾಪುರ ತಾಲೂಕಿನ ಯಶಸ್ವಿ ನಿರೂಪಕರಾಗಿ ಗುರುತಿಸಿಕೊಂಡದ್ದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಹಲವಾರು ಕಡೆ ಉಪನ್ಯಾಸವನ್ನು ನೀಡಿದ್ದಾರೆ. ತಾನು ಕಷ್ಟಪಟ್ಟು ಬೆಳೆದು ಬಂದ ರೀತಿಯನ್ನು ಸ್ಪರ್ಧಾರ್ಥಿಗಳ ಮುಂದೆ ಹಂಚಿಕೊಂಡು ಸ್ಪರ್ಧೆಯ ಮಹತ್ವ ಪರೀಕ್ಷೆ ಮಹತ್ವವನ್ನು ವಿವರಿಸಿದ್ದಾರೆ. ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಯಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಸೂಕ್ತ ಸಂದರ್ಭದಲ್ಲಿ ಬಳಸಿಕೊಂಡಿರುವ ಮಡ್ದೆ ಅವರು ಇಲ್ಲಿಯವರೆಗೂ 10 ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಸೃಜನ, ಸೃಜನೇತರ ವಿಭಾಗದಲ್ಲಿ ಸಾಹಿತ್ಯ ರಚಿಸಿದ್ದಲ್ಲದೆ ಸ್ಪರ್ಧಾ ಲೋಕಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಕನ್ನಡ ಮತ್ತು ಕನ್ನಡ ವ್ಯಾಕರಣ ಎಂಬ ಎರಡು ಪುಸ್ತಕಗಳು,ಬಡವನ ಗುಡಿಸಲು ಮತ್ತು ವೃಕ್ಷದ ಬೇರು ಎಂಬ ಎರಡು ಕವನ ಸಂಕಲನಗಳು ಆಧ್ಯಾತ್ಮಿಕಕ್ಕೆ ಸಂಬಂಧಿಸಿದಂತೆ ಮುತ್ಯಾನ ಬಬಲಾದಿಯ ಬಜನಾ ಪದಗಳಿಗೆ ಸಂಬಂಧಿಸಿದ ಒಂದು ಪುಸ್ತಕ ಮಹಾಗಾoವ ಕಳ್ಳಿಮಠದ ಶ್ರೀಗಳಿಗೆ ಸಂಬಂಧಿಸಿದ ಭಜನಾ ಪದಗಳ ಪುಸ್ತಕ ಸಂಪಾದಿಸಿದ್ದಾರೆ. ಕಮಲಾಪುರ ತಾಲೂಕಿನ ಅಂಕಲಗಾ ಗ್ರಾಮದ ಗ್ರಾಮದೇವತೆ ಮಹಾಲಕ್ಷ್ಮಿ ದೇವಿಯ ಚರಿತ್ರೆಯನ್ನು ಬರೆದಿದ್ದಲ್ಲದೆ ಸಿದ್ದಲಿಂಗೇಶ್ವರ ಪ್ರಕಾಶನದ ಜನಪ್ರಿಯ ಮಾಲಿಕೆಯ ಅಡಿಯಲ್ಲಿ ಭಾರತದ ಪ್ರಧಾನ ಮಂತ್ರಿಗಳು ಮತ್ತು ದಿನಾಚರಣೆಗಳು ಎಂಬ ಪುಸ್ತಕವನ್ನು ರಚಿಸಿ ಜನಪ್ರಿಯಗೊಂಡಿದ್ದು, ಸ್ವಂತ ಊರಾದ ಆಳಂದ ತಾಲೂಕಿನ ಮದಗುಣಿಯ ಗ್ರಾಮದ ಕುರಿತು ಮದಗುಣಕಿಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಮಗ್ರ ದರ್ಶನ ಎಂಬ ಕೃತಿಯನ್ನು ಅವರ ಆಪ್ತ ಸ್ನೇಹಿತರಾದ ಶಿವರಾಜರೊಂದಿಗೆ ಸೇರಿ ರಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಹೀಗೆ ಒಟ್ಟು ಹತ್ತು ಹಲವಾರು ಕೃತಿಗಳನ್ನು ರಚನೆ ಮಾಡಿ ಬರವಣಿಗೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಮಡ್ದೆ ಅವರು ಕಮಲಾಪುರಿನ ಭರವಾಸೆಯ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇವರ ಲೇಖನಗಳು ಹಲವು ಪತ್ರಿಕೆಗಳಲ್ಲಿ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆ ಪಡೆದಿವೆ. ಸುಮಾರು 15 ಲೇಖನಗಳು ವಿವಿಧ ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಅಲ್ಲದೆ ಕುರಕೋಟ ಗ್ರಾಮದಲ್ಲಿರುವ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದಲ್ಲಿ ಪೀಠಾಧಿಪತಿಗಳಾದ ಪರಮ ತಪಸ್ವಿ ಮ. ನಿ. ಪ್ರ. ಸ್ವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಆದೇಶದ ಅನ್ವಯ ಪ್ರತಿ ತಿಂಗಳು ಮೂರನೇ ಭಾನುವಾರದಂದು ಬಸವಾದಿ ಶರಣರ ಕುರಿತಾದ ಚಿಂತನ ಕಾರ್ಯಕ್ರಮ ಅನುಭವ ಸಂಗಮ 34ಮಾಲಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ.ಹಲವಾರು ಲೇಖಕರ,ಬರಹಗಾರರ,ಚಿಂತಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ , ಆಧ್ಯಾತ್ಮಿಕ ಹರಿಯುವನ್ನು ಹರಿಸಿದ್ದಾರೆ. ಇವರ ಸಾಹಿತ್ಯಕ ಸಾಧನೆಯನ್ನು ಗಮನಿಸಿ ಕಲಬುರಗಿಯ ವಿಶ್ವಕರ್ಮ ಶಿಕ್ಷಣ ಸಂಸ್ಥೆಯ ದೇವನಾoಪ್ರಿಯ ಪ್ರಶಸ್ತಿ, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಜಿಲ್ಲಾಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಲಬುರಗಿ ಉತ್ತರ ವಲಯದ ವತಿಯಿಂದ ಕೊಡಮಾಡುವ ಕಮಲಾಪುರ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳನ್ನು ಮುಡಿಕೇರಿಸಿಕೊಂಡಿದ್ದಾರೆ. ಭಕ್ತಿ,ಆಧ್ಯಾತ್ಮ, ಕನ್ನಡ ಸಾಹಿತ್ಯ ಮೊದಲಾದ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರು ಮಹಾಗಾoವ ಕನ್ನಡ ಸಾಹಿತ್ಯ ಪರಿಷತ್ತು ವಲಯ ಘಟಕ ಅಧ್ಯಕ್ಷರಾಗಿ, ಕಮಲಾಪುರ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾಗಿ, ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರಲ್ಲದೆ ಹಲವಾರು ಕವಿಗೋಷ್ಠಿ, ವಿಚಾರ ಸಂಕಿರಣ ಹಾಗೂ ಕಾರ್ಯಗಾರಗಳಲ್ಲಿ ಭಾಗವಹಿಸಿ ಯಶಶ್ವಿಗೊಳಿಸಿದ್ದಾರೆ.

-ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ