ಶೋಷಿತ ಸಮಾಜದ ಮಹಿಳಾ ಅಧಿಕಾರಿಗೆ ಜೀವ ಬೇದರಿಕೆ : ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಅಧಿಕಾರಿ ಮನವಿ ಸಲ್ಲಿಕೆ

ಶೋಷಿತ ಸಮಾಜದ ಮಹಿಳಾ ಅಧಿಕಾರಿಗೆ ಜೀವ ಬೇದರಿಕೆ : ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಅಧಿಕಾರಿ ಮನವಿ ಸಲ್ಲಿಕೆ

ಶೋಷಿತ ಸಮಾಜದ ಮಹಿಳಾ ಅಧಿಕಾರಿಗೆ ಜೀವ ಬೇದರಿಕೆ : ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಅಧಿಕಾರಿ ಮನವಿ ಸಲ್ಲಿಕೆ  

ಚಿಂಚೋಳಿ : ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮದ ಪ್ರಭಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದ ಶೋಷಿತ ಸಮಾಜದ ಮಹಿಳಾ ಅಧಿಕಾರಿ ವಿಜಯಲಕ್ಷ್ಮೀ ಮೇತ್ರೆ ಅವರಿಗೆ ಗ್ರಾಮದ ಬಸವರಾಜ ತಂದೆ ಘಾಳಪ್ಪ ಸೈದಕನೋರ್, ಸುನೀಲಕುಮಾರ ಶಾಮರಾವ ತ್ರಿಪಾಟಿ, ಸುಂದರಮೂರ್ತಿ ಯಲ್ಲಪ್ಪ ನಿರಾಳಕರ್ ಹಾಗೂ ಮಹಾವೀರ ಮಾಣಿಕರಾವ ಸೈದಕನೋರ್ ಅವರು ಕಿರುಕುಳ ಕೊಟ್ಟು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಜೀವ ಬೇದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹಿಸಿ, ಆರ್ ಡಿಪಿಆರ್ ನೌಕರ ಸಂಘದ ಅಧ್ಯಕ್ಷ ಪವನಕುಮಾರ ಮೇತ್ರಿ ಅವರ ನೇತೃತ್ವದಲ್ಲಿ ಚಿಂಚೋಳಿ ಪೊಲೀಸ್ ಠಾಣೆಯ ಸಿಪಿಐ ಕಪಿಲದೇವ ಅವರಿಗೆ ಅಧಿಕಾರಿ ವಿಜಯಲಕ್ಷ್ಮೀ ಮೇತ್ರೇ ದೂರು ಸಲ್ಲಿಸಿದ್ದಾರೆ.

ಚಿಮ್ಮಾಇದ್ಲಾಯಿ ಗ್ರಾಮದವರಾದ ಬಸವರಾಜ ಘಾಳಪ್ಪ ಸೈದಕನೋರ್, ಸುನೀಲಕುಮಾರ ಶಾಮರಾವ ತ್ರಿಪಾಟಿ, ಸುಂದರಮೂರ್ತಿ ಯಲ್ಲಪ್ಪ ನಿರಾಳಕರ್ ಹಾಗೂ ಮಹಾವೀರ ಮಾಣಿಕರಾವ ಸೈದಕನೋರ್ ಅವರು ಅನಾವಶ್ಯಕವಾಗಿ ಸರಕಾರಿ ಕರ್ತವ್ಯಕ್ಕೆ ಅಡ್ಡಪಡಿಸಿ, ಹಣ ಕೊಡಲು ಪೀಡಿಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಹಣ ಕೊಡದ ಪಕ್ಷದಲ್ಲಿ ಲೋಕಾಯುಕ್ತಕ್ಕೆ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ದೂರು ಸಲ್ಲಿಸಲಾಗುತ್ತದೆ ಎಂದು ಬ್ಲಾಕ್ ಮೇಲ ಮಾಡುತ್ತಿದ್ದಾರೆ. ನನಗೆ ಸಾರ್ವಜನಿಕ ಸರಕಾರಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ನನಗೆ ಜೀವ ಬೇದರಿಕೆ ಇದ್ದು, ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳಾ ಅಧಿಕಾರಿ ವಿಜಯಲಕ್ಷ್ಮೀ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅರ್ಜಿಯಲ್ಲಿನ ಅಂಶಗಳನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಕಪೀಲದೇವ ಅವರು ಅಧಿಕಾರಿಗಳಿಗೆ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಚಿಂಚೋಳಿ ಹಾಗೂ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ತಾಲೂಕ ಘಟಕ ಚಿಂಚೋಳಿಯ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಚಿಂಚೋಳಿ ತಹಸೀಲ್ದಾರರ ಮೂಲಕ ಸೂಕ್ತ ಕಾನೂನು ಜರುಗಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ದೇವೀಂದ್ರಪ್ಪ ಹೋಳ್ಕರ್, ಆರ್.ಡಿ.ಪಿ.ಆರ್ ಸಂಘದ ಅಧ್ಯಕ್ಷ ಪವನಕುಮಾರ ಮೇತ್ರಿ, ಜಗನ್ನಾಥ ರೆಡ್ಡಿ, ರಾಮಕೃಷ್ಣ ಕೊರಡಂಪಳ್ಳಿ , ಪಿಡಿಓ ವಿಜಯಲಕ್ಷ್ಮೀ ಮೇತ್ರೆ, ಡಾ. ಮಲ್ಲಿಕಾರ್ಜುನ ಪಾಲಾಮೂರ , ಸುನೀಲ, ಭೀಮಾಶಂಕರ ಕಮಕನೂರ ಸೇರಿದಂತೆ ಆರ್.ಡಿ.ಪಿ.ಆರ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದರು.