ನಾಳೆ ವಿಚಾರ ಸಂಕಿರಣ

ನಾಳೆ ವಿಚಾರ ಸಂಕಿರಣ

ನಾಳೆ ವಿಚಾರ ಸಂಕಿರಣ 

 ಕಲ್ಬುರ್ಗಿ ನಗರದ ಹಮೀದ ಪಿಯಾರೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಸಹಯೋಗದಲ್ಲಿ ಸೂಫಿತ್ಪದ ಸ್ಪರ್ಶದಲ್ಲಿ ಕನ್ನಡ ತತ್ವಪದಕಾರರು ಎನ್ನುವ ಒಂದು ದಿನದ ವಿಚಾರ ಸಂಕಿರಣ 16.6.2026 ರಂದು ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಹಮೀದ ಪಿಯಾರೆ ಶಿಕ್ಷಣ ಮಹಾವಿದ್ಯಾಲಯದ ಚೀಫ್ ಟ್ರಸ್ಟಿ ಡಾ. ರಬಿಯಾ ಖಾನಮ ಮಾಡಲಿದ್ದು,ಸೂಫೀತ್ವದ ಸ್ಪರ್ಶದಲ್ಲಿ ಕನ್ನಡ ತತ್ವಪದಕಾರ ಕುರಿತು ಚಿಂತಕರಾದ ಡಾ. ಮೀನಾಕ್ಷಿ ಬಾಳಿ ಮಾತನಾಡಲಿದ್ದು,ಡಾ. ಸಂಗನಗೌಡ ಹಿರೇಗೌಡರು ವಿಷಯದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವನಿತಾ ಜಾದವ್ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲ್ಬುರ್ಗಿ ಜಿಲ್ಲಾ ಸಂಯೋಜಕರಾದ ಡಾ. ವೀರಶೆಟ್ಟಿ ಗಾರಂಪಳ್ಳಿ ಹಾಗೂ ಪ್ರಾಧ್ಯಾಪಕರು ಸಂಯೋಜಕರಾದ ಡಾ.ಶರಣಬಸಪ್ಪ ವಡ್ಡನಕೇರಿ ಅವರು ಉಪಸ್ಥಿತರಿರಲಿದ್ದಾರೆ ಎಂದು ಕರ್ನಾಟಕ ವಿದ್ಯವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಂಕರ ಹಲಗತ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.