ಪ್ರಿಯಾಂಕ್ ಖರ್ಗೆ ಅವರನ್ನು ಡಿಸಿಎಂ ಮಾಡಲು ವಿಶೇಷ ಪೂಜೆ, ಹೈಕಮಾಂಡ್‌ಗೆ ಒತ್ತಾಯ

ಪ್ರಿಯಾಂಕ್ ಖರ್ಗೆ ಅವರನ್ನು ಡಿಸಿಎಂ ಮಾಡಲು ವಿಶೇಷ ಪೂಜೆ, ಹೈಕಮಾಂಡ್‌ಗೆ ಒತ್ತಾಯ

ಪ್ರಿಯಾಂಕ್ ಖರ್ಗೆ ಅವರನ್ನು ಡಿಸಿಎಂ ಮಾಡಲು ವಿಶೇಷ ಪೂಜೆ, ಹೈಕಮಾಂಡ್‌ಗೆ ಒತ್ತಾಯ

ಕಲಬುರಗಿ: ಇಂದು 29/05/2026ರಂದು ಬೆಳಿಗ್ಗೆ 10:20 ಗಂಟೆಗೆ ನಗರದ ಹನುಮಾನ್ ತಾಂಡಾ ರೈಲ್ವೆ ಅಂಡರ್ ಬ್ರಿಡ್ಜ್ ಹತ್ತಿರದ ಶ್ರೀ ಕ್ಷೇತ್ರ ಕೊರಂಟಿ ಹನುಮಾನ್ ದೇವಸ್ಥಾನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂದು ಮಾದಿಗ ಸಮಾಜದ ಯುವ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ, ಸಿಡಿಕಾಯಿ ಹೊಡೆದು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಶುರಾಮ್ ನಾಟೆಕಾರ್ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದಲ್ಲಿ ಜನಪರ ಹಾಗೂ ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಿದ್ದು, ಯುವಕರಿಗೆ ಪ್ರೇರಣೆಯಾಗಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅವರು ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿನೇಶ್ ಶಾಬಾದ್ಕರ್, ದೇವರಾಜ್ ಕೊಳ್ಳೇರ, ಶರಣು ಸಾಗರಕರ, ದಿಗಂಬರ ತ್ರಿಮೂರ್ತಿ, ಜೈರಾಜ್ ಕಿಣಗಿಕಾರ್, ಸುರೇಶ್ ಹೊಸಮನಿ, ಸುರೇಶ್ ಇಟಗಿ, ವಿನೋದ್ ಇಟಗಿ, ಅಮರ್ ಕಲ್ಯಾಣಕಾ, ಪ್ರಕಾಶ್ ಮಾಲಗೆ, ಸೂರ್ಯಪ್ರಕಾಶ್, ನಿಖಿಲ್ ಹಿರಾಪುರ, ರೋಹಿತ್ ವಿಭೇದರ್, ಜಡ್ಸೇನ್ ನಿರಳ್ಳಿ, ದಿನೇಶ್ ಬುದ್ಧನಗರ, ರಿಯಲ್ ಶಾಂತು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.