ಸಾಂಸ್ಕೃತಿಕ ಉತ್ಸವಗಳು ನಾಡಿನ ಶ್ರೀಮಂತಿಕೆ ಹೆಚ್ಚಿಸುತ್ತವೆ - ಗುರುಪಾದ ಶ್ರೀಗಳು
ಸಾಂಸ್ಕೃತಿಕ ಉತ್ಸವಗಳು ನಾಡಿನ ಶ್ರೀಮಂತಿಕೆ ಹೆಚ್ಚಿಸುತ್ತವೆ - ಗುರುಪಾದ ಶ್ರೀಗಳು
ಶಹಪುರ : ಇಂಥ ಸಾಂಸ್ಕೃತಿಕ ಮತ್ತು ಸಂಗೀತ ಕಲಾ ಉತ್ಸವಗಳು ಆಸಕ್ತ ಕಲಾ ಪ್ರೇಮಿಗಳಿಗೆ ಸಂಗೀತದ ರಸದೌತಣ ಉಣ ಬಡಿಸುವುದರ ಜೊತೆಗೆ ಈ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುತ್ತವೆ ಎಂದು ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು ಹೇಳಿದರು.
ನಗರದ ಫಕೀರೇಶ್ವರ ಮಠದ ಸಭಾ ಮಂಟಪದಲ್ಲಿ ಶ್ರೀ ಗುರು ಕೃಪಾ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರಗಳ ಸಹಯೋಗದಲ್ಲಿ ಜರುಗಿದ ಸಂಗೀತ ಸಾಂಸ್ಕೃತಿಕ ಕಲಾ ಉತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು,
ಎಲೆಮರೆಕಾಯಿಯಂತಿರುವ ಯುವ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು, ಅವರಲ್ಲಿರುವ ಕಲೆ,ಸಾಹಿತ್ಯ, ಸಂಗೀತ,ನೃತ್ಯ,ಮುಂತಾದ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯ ಚಟುವಟಿಕೆಗಳು ಮುನ್ನಡೆಸಿಕೊಂಡು ಬರುತ್ತಿದೆ ಆದ್ದರಿಂದ ಶ್ರೀ ಗುರು ಕೃಪಾ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನಿಯವಾದದ್ದು ಎಂದು ಬಣ್ಣಿಸಿದರು.
ಈ ನಾಡಿನ ನೆಲದ ಸಂಸ್ಕೃತಿ ಮತ್ತು ಸಂಗೀತದ ವೈಭವವನ್ನು ಸಾರುವ ಇಂಥಹ ಉತ್ಸವಗಳು ಹೆಚ್ಚೆಚ್ಚು ಜರುಗಬೇಕು, ಈ ಭಾಗದ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಬೇಕು ಅಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಸಿದ್ದಣ್ಣ ಸಾಹು ಆರಬೋಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಮಲ್ಲಯ್ಯ ಹಿರೇಮಠ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ನರಸಿಂಹ ವೈದ್ಯ,ಶರಣಗೌಡ ಪಾಟೀಲ್,ಶಂಭುಲಿಂಗ ದೇಸಾಯಿ,ಡಾ : ಮಲ್ಲಿಕಾರ್ಜುನ ಪಾಟೀಲ್,ಶೃತಿ ಕಾವಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರಾಯೋಜಕತ್ವದಲ್ಲಿ ಹಲವಾರು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಶರಣಕುಮಾರ ವಠಾರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಬೂದಯ್ಯ ಹಿರೇಮಠ ಸುಗಮ ಸಂಗೀತ,ನೀಲಪ್ಪ ಚೌದರಿ ಜಾನಪದ ಗಾಯನ,ಶಶಿಕಲಾ ಚಿನ್ನಗುಡಿ ವಚನ ಗಾಯನ,ಶಂಕರ ಶಾಸ್ತ್ರೀಯ ತತ್ವಪದ,ಈರಣ್ಣ ಕುರುಕುಂದ ರಂಗಗೀತೆ, ಭೀಮಬಾಯಿ ಕಟ್ಟಿಮನಿ ಬೀಸುವ ಪದ,ಮಹೇಶ್ ಪತ್ತಾರ್ ಭಾವಗೀತೆ,ಬಸವರಾಜ ಹಯ್ಯಾಳ ಪಾರಿಜಾತ ಸಂಗೀತ,ವಿಶ್ವನಾಥ ಕನ್ಯಕೂಳೂರ ಕನ್ನಡ ಗೀತೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
