ಪರಿಸರ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸಿ

ಪರಿಸರ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸಿ

ಪರಿಸರ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸಿ 

ಕಮಲಾಪೂರ: ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸಬೇಕಿರುವುದು ಇಂದಿನ ಅಗತ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ಸಂಚಾಲಕ ರಾಘವೇಂದ್ರ ಕುಲಕರ್ಣಿ ಆಶಯ ವ್ಯಕ್ತಪಡಿಸಿದರು.

ತಾಲೂಕಿನ ಮಹಾಗಾಂವ ಕ್ರಾಸ್ ನ ಬಸಮ್ಮ ಶಿವಶರಣಪ್ಪ ವೀರಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಬಿಜೆಪಿ ಗ್ರಾಮೀಣ ಮಂಡಲ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗಳಿಗೆ ನೀರುಣಿಸಿ ಅವರು ಮಾತನಾಡಿದರು."ಹಸಿರೇ ಉಸಿರು" ಎಂಬ ಧ್ಯೇಯದೊಂದಿಗೆ ಗಿಡ ನೆಡುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಜನ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಜಂಟಿಯಾಗಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇವಲ ಗಿಡಗಳನ್ನು ನೆಡುವುದಷ್ಟೇ ಅಲ್ಲದೆ, ಅವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನೂ ಪ್ರತಿಯೊಬ್ಬ ನಾಗರಿಕರು ಹೊರಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಅದ್ಯಕ್ಷ ಶಿವಪ್ರಭು ಪಾಟೀಲ,ಗ್ರಾಮೀಣ ಮಂಡಲ ಅಧ್ಯಕ್ಷ ಗಂಗಪ್ಪ ಗೌಡ ಪಾಟೀಲ,ಬಿಜೆಪಿ ಮುಖಂಡ ಗೋರಖನಾಥ ಶಕಾಪೂರೆ, ಸಂಗಮೇಶ ವಾಲಿ,ಗ್ರಾಮೀಣ ಮಂಡಲ ಪ್ರದಾನ ಕಾರ್ಯದರ್ಶಿ ಪ್ರವೀಣ ಮಚ್ಚೆಟ್ಟಿ,ಶಿವುಕುಮಾರ ಪಾಟೀಲ ಜಂಬಗಾ,ಸೋಮನಾಥ ತಡಕಲ್,ಮಲ್ಲಿಕಾರ್ಜುನ ಮರತೂರಕರ್,ಗ್ರಾಮ ಪಂ ಮಾಜಿ ಅದ್ಯಕ್ಷ ನರೇಶ ಹರಸೂರಕರ್,ರಾಜಕುಮಾರ ಮಂಠಾಳೆ, ಉದಯಕುಮಾರ ರಟಕಲ್,ಗಿರೀಶ ಪಾಟೀಲ,ಶರಣಗೌಡ ಹರಕಂಚಿ,ಅಜರ್ ಪಟೇಲ ಕುರಕೋಟ,ಶಾಲಾ ಎಸ್.ಡಿ ಎಂ.ಸಿ ಅಧ್ಯಕ್ಷ ಸಿದ್ದಲಿಂಗ ದಿಗ್ಗಾಂವಿ ಸೇರಿದಂತೆ ಇತರರು ಇದ್ದರು.