ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ - ಪ್ರೊ.ವಾಸುದೇವ ಸೇಡಂ
ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ - ಪ್ರೊ.ವಾಸುದೇವ ಸೇಡಂ
ಶಹಪುರ : ಸಗರನಾಡು ಸರ್ವ ಜನಾಂಗದ ಶಾಂತಿಯ ತೋಟ ಭಾವೈಕ್ಯತೆಯ ತಳಹದಿಯಿಂದ ಕೂಡಿದ್ದು,ಇಲ್ಲಿ ಜಾತಿ,ಧರ್ಮ,ಮಥ ಪಂಥ ಹಾಗೂ ಸಂಸ್ಕೃತಿಗಳ ನಡುವೆ ಸಮನ್ವಯತೆಯ ಪ್ರತೀಕವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ವಾಸುದೇವ ಸೇಡಂ ಹೇಳಿದರು.
ನಗರದ ಕೆಇಬಿ ಹತ್ತಿರವಿರುವ ಮಾತೋಶ್ರೀ ಫಂಕ್ಷನ್ ಸಭಾಂಗಣದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಗರ ಕೃಷ್ಣಾಚಾರ್ಯರ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ ಶಹಾಪುರ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಶಹಾಪುರ ಸಾಹಿತ್ಯದ ಸಾಂಸ್ಕೃತಿಕ ನೆಲೆಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಈ ಭಾಗದಲ್ಲಿ ಹಲವಾರು ತತ್ವಪದಕಾರರು,ಶರಣರು, ವಚನಕಾರರು,ಜನಪದ ಕಲಾವಿದರು,ಬಾಳಿ ಬದುಕಿದ ಈ ನಾಡಿನಲ್ಲಿ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ,ಇಂದು ನಾವಿಲ್ಲಿ ಅವರನ್ನು ಸ್ಮರಿಸುವುದು ಅತ್ಯಗತ್ಯ ಎಂದು ಹೇಳಿದರು.
ಸಾಹಿತ್ಯ ಸಂಭ್ರಮ ಮತ್ತು ಉತ್ಸವಗಳು ಕವಿಗಳ ಕಲಾವಿದರ ಮತ್ತು ಓದುಗರ ಅಭಿವ್ಯಕ್ತಿಯಾಗಿದ್ದು,ಎಲ್ಲರನ್ನೂ ಒಂದೇ ವೇದಿಕೆಯಡಿ ಸೇರಿಸುವ ಮೂಲಕ ಈ ಶಹಾಪುರ ಸಾಹಿತ್ಯ ಸಂಭ್ರಮವನ್ನು ಇತಿಹಾಸಿಕ ಪುಟಗಳಲ್ಲಿ ಸೇರಿಸಿ ಸಂಭ್ರಮಿಸುವ ಕ್ಷಣ ಇದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಮುಖಂಡರಾದ ಸಿದ್ದಲಿಂಗಣ್ಣ ಆನೆಗುಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿದ್ದರಾಮ ಹೊನಕಲ್,ಡಾ. ದೇವೇಂದ್ರಪ್ಪ ಹಡಪದ,ಡಾ. ಜಾಫರ್ ಷರೀಫ್ ನಿಡಗುಂದಿ, ಮುಖಂಡ ಬಸನಗೌಡ ಪಾಟೀಲ್ ಕಂಚಿನಕವಿ, ಹೋರಾಟಗಾರರಾದ ಲಕ್ಷ್ಮಿಕಾಂತ್ ಪಾಟೀಲ್ ಮದ್ರಿಕಿ, ಮಾನಪ್ಪ ಹಡಪದ,ಹಾಗೂ ಟ್ರಸ್ಟ್ ಪದಾಧಿಕಾರಿಗಳಾದ ವೀರಭದ್ರಯ್ಯ ಸ್ವಾಮಿ ಹಯ್ಯಾಳ,ಸೂಗುರೇಶ ಗಣಾಚಾರಿ ಮಠ,ಸೇರಿದಂತೆ ಇನ್ನಿತರರು ಈ ಸಮಾರಂಭದ ವೇದಿಕೆಯ ಮೇಲೆ ಉಪಸ್ಥಿತರಿದ್ದರು,
ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು, ಮನೋಹರ್ ವಿಶ್ವಕರ್ಮ ಅವರಿಂದ ಜಾನಪದ ಸಂಗೀತ, ಈಶ್ವರಪ್ಪ ಜಿನಿಕೇರಿ ತತ್ವಪದ, ಬೂದಯ ಹಿರೇಮಠ ಶಾಸ್ತ್ರೀಯ ಸಂಗೀತ,ಮಲ್ಲಯ್ಯ ಹಿರೇಮಠ ಸುಗಮ ಸಂಗೀತ,ಭೀಮರಾಯ ಗುಳೆದ ತತ್ವಪದ,ಪಂಡಿತ್ ಟೊಕಾಪುರ ವಚನ ಗಾಯನ, ರಮೇಶ್ ಕಂಬಾರ ತಬಲಾ ವಾದನ,ಶಿವಾನಂದ ತೇಗನೂರು ವಚನ ಗಾಯನ,ಭೀಮಣ್ಣ ಸತ್ಯಂಪೇಟೆ ಪಾರಿಜಾತ,ವಿನುತಾ ಶಿದ್ರಾ ಭರತನಾಟ್ಯ ಹೀಗೆ
ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಮಡಿವಾಳಪ್ಪ ಪಾಟೀಲ್ ನಿರೂಪಿಸಿದರು,ಪಲ್ಲವಿ ಪ್ರಾರ್ಥಿಸಿದರು,ಶರಣಬಸವ ಪೊಲೀಸ್ ಬಿರಾದರ ಸ್ವಾಗತಿಸಿದರು, ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ನುಡಿಗಳ ಹಾಡಿದರು, ಶಿವಮೂರ್ತಿ ವಂದಿಸಿದರು.
