ನಿಷ್ಕಾಳಜಿ ವಹಿಸಿದ ಜೆಸ್ಕಾಂ ಅಧಿಕಾರಿಯನ್ನು ವರ್ಗಾವಣೆಗೊಳಿಸಲು - ಶ್ರೀಕಾಂತಗೌಡ ಸುಬೇದಾರ ಆಗ್ರಹ

ನಿಷ್ಕಾಳಜಿ ವಹಿಸಿದ ಜೆಸ್ಕಾಂ ಅಧಿಕಾರಿಯನ್ನು ವರ್ಗಾವಣೆಗೊಳಿಸಲು - ಶ್ರೀಕಾಂತಗೌಡ ಸುಬೇದಾರ ಆಗ್ರಹ

ನಿಷ್ಕಾಳಜಿ ವಹಿಸಿದ ಜೆಸ್ಕಾಂ ಅಧಿಕಾರಿಯನ್ನು ವರ್ಗಾವಣೆಗೊಳಿಸಲು - ಶ್ರೀಕಾಂತಗೌಡ ಸುಬೇದಾರ ಆಗ್ರಹ

ಶಹಾಪುರ : ತಾಲೂಕಿನ ಸಗರ ಗ್ರಾಮದಲ್ಲಿ ಮೇಲಿಂದ ಮೇಲೆ ವಿದ್ಯುತ್ ಕೈಕೊಡುತ್ತಿದ್ದು ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಕಳೆದ 20 ದಿನಗಳಿಂದ ಗ್ರಾಮಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಯುವ ಮುಖಂಡ ಶ್ರೀಕಾಂತಗೌಡ ಸುಬೇದಾರ ಶಹಾಪುರ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರ ಬರೆದು ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿದ್ದಾರೆ.

ಇದು ಬಹುದೊಡ್ಡ ಗ್ರಾಮವಾಗಿದ್ದು ವಿದ್ಯುತ್ ಇಲ್ಲದೆ ಕುಡಿಯುವ ನೀರಿನ ಸಮಸ್ಯೆ,ಹಿಟ್ಟಿನ ಗಿರಣಿಯ ಸಮಸ್ಯೆ ಉದ್ಭವಿಸಿದೆ ಅಲ್ಲದೆ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು,ಮಲೇರಿಯಾ ಹಾಗೂ ಡೆಂಗ್ಯೂ ಜ್ವರ ಹರಡುವ ಭೀತಿ ಉಂಟಾಗಿದೆ.ಮತ್ತು ಬೇರೆ ಊರುಗಳಿಗೆ ಹೋಗಿ ಮೂಲಭೂತ ಸೌಲಭ್ಯಗಳು ಪಡೆಯುವಂತಾಗಿದೆ.ಸಗರ ಜೆಸ್ಕಾಂ ಅಧಿಕಾರಿಯಾದ ಎಸ್ಒ ಶರಣಪ್ಪ ಅವರ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿತನದ ವರ್ತನೆ ಇದಕ್ಕೆಲ್ಲ ಕಾರಣವಾಗಿದೆ ಎಂದು ಹೇಳಿದರು.

ಎಸ್ಓ ಶರಣಪ್ಪ ಅವರಿಗೆ ಜನಪ್ರತಿನಿಧಿಗಳು ಕರೆ ಮಾಡಿದರು ಕರೆ ಸ್ವೀಕರಿಸುವುದಿಲ್ಲ,ಇನ್ನು ಸಾಮಾನ್ಯ ಜನರ ಪಾಡೇನು ಎಂಬುದು ಆಲೋಚಿಸಬೇಕಾಗಿದೆ.ಇಂತಹ ಅಧಿಕಾರಿಗಳು ನಮ್ಮ ಊರಿಗೆ ಬೇಡ ಬೇರೆ ಕಡೆ ವರ್ಗಾಯಿಸಿ, ಉತ್ತಮ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ನೇಮಿಸಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗಂಗಾಧರ ಪತ್ತಾರ,ಶಿವಕುಮಾರ್ ಮಲ್ಲೇದ, ಶರಣು ಚಟ್ಟಿ,ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.