ಬಸವಣ್ಣನವರ ತತ್ವ ಬದುಕಿಗೆ ದಾರಿದೀಪ: ಬೆಲ್ದಾಳ ಶರಣರು

ಬಸವಣ್ಣನವರ ತತ್ವ ಬದುಕಿಗೆ ದಾರಿದೀಪ: ಬೆಲ್ದಾಳ ಶರಣರು

ಬಸವಣ್ಣನವರ ತತ್ವ ಬದುಕಿಗೆ ದಾರಿದೀಪ: ಬೆಲ್ದಾಳ ಶರಣರು

ವಿಶ್ವಗುರು ಬಸವಣ್ಣ ಜಯಂತಿ ವಿಜೃಂಭಣೆಯಿಂದ ಆಚರಣೆ

ಕಲಬುರಗಿ, ಬಸವಣ್ಣನವರ ತತ್ವ, ಆದರ್ಶಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆಯ ಬದುಕಿಗೆ ಪ್ರೇರಣೆಯಾಗಿವೆ ಎಂದು ಡಾ. ಸಿದ್ದರಾಮ ಬೆಲ್ದಾಳ ಶರಣರು ಹೇಳಿದರು 

ಮೇ 17: ವಿಶ್ವಗುರು ಬಸವಣ್ಣ ಅವರ ಜಯಂತಿಯ ಅಂಗವಾಗಿ ನಗರದ ಡಾ. ಎಸ್.ಎಂ. ಪಂಡಿತರಂಗ ಮಂದಿರದಲ್ಲಿ ಪರಿವರ್ತನಾ ಪ್ರತಿಷ್ಠಾನ ಹಾಗೂ ವಿಶ್ವ ಸಾಮರಸ್ಯ ವೇದಿಕೆ ವತಿಯಿಂದ ಭಾನುವಾರ ಬಸವ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಗುರು ಬಸವಣ್ಣನವರು ಸಾರಿದ ಸಮಾನತೆ, ಮಾನವೀಯತೆ ಹಾಗೂ ವಚನಗಳ ಮೌಲ್ಯಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ಹೇಳಿದರು. 

ಸಮಾರಂಭದಲ್ಲಿ ಪೂಜ್ಯ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಗುರುಮಾತಾ ನಂದಾತಾಯಿ, ಹಜರತ್ ಸೈಯದ್ ಶಾಹಾ ಮುಸ್ತಾಫ್ ಖಾದ್ರಿ ಹಾಗೂ ಮೊಹ್ಮದ್ ಮೌಲಾಲಿ ಮುತ್ಯಾ ಅವರು ಬಸವಣ್ಣನವರ ಸಾಹಿತ್ಯ, ಸಮಾನತೆ ಮತ್ತು ಸರ್ವಧರ್ಮ ಸಮಭಾವದ ವಿಚಾರಗಳನ್ನು ಪ್ರಸ್ತಾಪಿಸಿ, ಸಮಾಜದಲ್ಲಿ ಸಾಮರಸ್ಯ ಬೆಳೆಸುವ ಅಗತ್ಯವನ್ನು ತಿಳಿಸಿದರು.

ವೇದಿಕೆಯಲ್ಲಿ ಅರ್ಜುನ ಹತ್ತಿ, ಡಾ. ವಿಶ್ವನಾಥ, ಸರ್ಕಲ್ ಇನ್ಸ್ಪೆಕ್ಟರ್ ಜಗದೇವಪ್ಪ ಪಾಳಾ, ಶಂಕರ ಹಡಪದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಸವಣ್ಣನವರ ಸಹಬಾಳ್ವೆ, ಮಾನವೀಯತೆ ಹಾಗೂ ಸಾಮರಸ್ಯದ ಸಂದೇಶಗಳನ್ನು ಸ್ಮರಿಸಲಾಯಿತು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸರ್ವಧರ್ಮ ಸಮಭಾವದ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ವಕ್ತಾರರು ಅಭಿಪ್ರಾಯಪಟ್ಟರು.

ವಿವಿಧ ಕ್ಷೇತ್ರಗಳ ಭಕ್ತರು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.