ನಾಟಕಗಳು ಗ್ರಾಮೀಣ ಜನರ ಜೀವಾಳ.
ನಾಟಕಗಳು ಗ್ರಾಮೀಣ ಜನರ ಜೀವಾಳ.
ಶಹಾಪುರ : ಗ್ರಾಮೀಣ ಭಾಗಗಳಲ್ಲಿ ನಾಟಕಗಳು ಕೇವಲ ಮನರಂಜನೆಗಾಗಿ ಸೀಮಿತವಾಗಿರದೆ,ಜನರ ಬದುಕಿನ ಸಂಸ್ಕೃತಿ,ಸಂಪ್ರದಾಯ,ಮತ್ತು ಭಾವನೆಗಳ ಜೀವಂತ ಪ್ರತೀಕವಾಗಿವೆ ಎಂದು ಗ್ರಾಮದ ಹಿರಿಯ ಮುಖಂಡ ನಿಂಗಣಗೌಡ ಮಾಲಿಪಾಟೀಲ್ ಹೇಳಿದರು.
ತಾಲೂಕಿನ ಗಂಗನಾಳ ಗ್ರಾಮದ ದ್ಯಾವಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ವಿಭೂತಿಹಳ್ಳಿಯ ಶ್ರೀ ಪಂಚಾಕ್ಷರಿ ಗವಾಯಿಗಳ ಸಾಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ನಾಟಕಗಳು ಗ್ರಾಮೀಣ ಭಾಗದಲ್ಲಿ ಜರುಗುವುದರಿಂದ, ಜನರನ್ನು ಒಗ್ಗೂಡಿಸುವುದಲ್ಲದೆ ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ಹಾಗೂ ಸಂದೇಶಗಳನ್ನು ನೀಡುತ್ತವೆ ಎಂದು ನುಡಿದರು.
ಮುಖ್ಯ ಅತಿಥಿಗಳಾದ ಶಾಂತಗೌಡ ಹಳ್ಳಿಮನೆ ಮಾತನಾಡಿ ಪೌರಾಣಿಕ ಮತ್ತು ಸಾಮಾಜಿಕ ಸುಂದರ ನಾಟಕಗಳು ಸತ್ಯ,ಧರ್ಮ, ನ್ಯಾಯ,ನೀತಿಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತವೆ ಎಂದು ನುಡಿದರು.
ಈ ಸಮಾರಂಭದ ವೇದಿಕೆಯ ಮೇಲೆ ಬಸವರಾಜಪ್ಪಗೌಡ ಪೊಲೀಸ್ ಪಾಟೀಲ್,
ಶಶಿಧರಗೌಡ ಮಾಲಿ ಪಾಟೀಲ್,ಶರಣಗೌಡ ಮಾಲಿಪಾಟೀಲ್,ಶಿವಪುತ್ರಪ್ಪ ಸಾಹುಕಾರ,ವಿಜಯಕುಮಾರ ಇಂಡಿ,ಸಾಯಬಣ್ಣ ದೊಡ್ಡಮನಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್ ಸಿತಾರೆ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು,ನಾಟಕ ತಂಡದ ಕಲಾವಿದರರಾದ ಶಿವಕುಮಾರ್ ಮಲ್ಲಿಕಾರ್ಜುನ್ ಮಹಾಂತೇಶ ಪರಶುರಾಮ್ ವೀರೇಶ್ ಕಲಾವಿದರಿಂದ ನಾಟಕೋತ್ಸವವನ್ನು ಅದ್ದೂರಿಯಾಗಿ ಜರುಗಿತು.

