ವಿಜಿ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿ ಪ್ರಜಾಪ್ರಭುತ್ವ, ನಾಯಕತ್ವ ಗುಣಗಳನ್ನು ಬೆಳೆಸುವ ವೇದಿಕೆ- ಡಾ. ರಾಜೇಂದ್ರ ಕೊಂಡಾ
ವಿಜಿ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿ ಪ್ರಜಾಪ್ರಭುತ್ವ, ನಾಯಕತ್ವ ಗುಣಗಳನ್ನು ಬೆಳೆಸುವ ವೇದಿಕೆ- ಡಾ. ರಾಜೇಂದ್ರ ಕೊಂಡಾ
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ದಿನಾಂಕ ೧೨.೦೮.೨೦೨೬ ರಂದು ೨೦೨೬-೨೭ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯ ಮಹಾವಿದ್ಯಾಲಯದ ಆವರಣದಲ್ಲಿ÷ಆಯೋಜಿಸಲಾಗಿತ್ತು.
೧೯೬೫ ರಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕಲ್ಯಾಣ ಕರ್ನಾಟಕ ಪ್ರದೇಶದ ಅನೇಕ ವಿದ್ಯಾರ್ಥಿನಿಯರ ಸಾಧನೆಯ ಮೆಟ್ಟಿಲಾಗಿದೆ. ಕಾರಣ ಈ ಕಾಲೇಜು ವಿದ್ಯಾಭ್ಯಾಸ ನೀಡುವುದರ ಜೊತೆಗೆ ವಿದ್ಯಾರ್ಥಿ ಪ್ರಜಾಪ್ರಭುತ್ವ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸೂಕ್ತವಾದ ವೇದಿಕೆಯಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ. ಅದು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ನಡುವಿನ ಸಂಪರ್ಕ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತದೆೆ. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ನಾಯಕತ್ವ, ತಂಡದಲ್ಲಿ ಕೆಲಸ ಮಾಡುವ ಶಕ್ತಿ ಹಾಗೂ ಜವಾಬ್ದಾರಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಕಾಲೇಜಿನಲ್ಲಿ ಚುನಾವಣೆ ಆಯೋಜಿಸಲಾಗುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಪ್ರಥಮ ಪಿಯುಸಿ ಕಲಾ ವಿಭಾಗದಲ್ಲಿ ಶ್ರೀನಿಧಿ ಮತ್ತು ಶ್ವೇತಾ, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪ್ರತಿಭಾ ಮತ್ತು ಆರಾಧನಾ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ನೇಹಾ ಮತ್ತು ಇಂದುಬಾಯಿ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಉಮಾ ಗುತ್ತೆದಾರ ಮತ್ತು ಸಂಧ್ಯಾ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಫ್ರಾ ಮತ್ತು ಶ್ರೀ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶಿಫಾ ಶಕೀಲ ಮತ್ತು ಪ್ರೇಮಾ ಅವರುಗಳು ವರ್ಗ ಪ್ರತಿನಿಧಿಗಳಾಗಿ ಮತ್ತು ವಿದ್ಯಾರ್ಥಿ ಸಂಘದ ಉಪಾಧ್ಯಾಕ್ಷರಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಪ್ರತಿಭಾ, ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಉಮಾ ಗುತ್ತೆದಾರ, ಸಾಂಸ್ಕçತಿಕ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರೇಮಾ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಆರಾಧನಾ ಅವರು ಆಯ್ಕೆಗೊಂಡಿದ್ದಾರೆ. ಅಲ್ಲದೆ ಈ ಸಾಲಿನ ವಿದ್ಯಾರ್ಥಿ ಸಂಘದ ಸಲಹೆಗಾರರಾಗಿ ಅರ್ಥಶಾಸ್ತç ಉಪನ್ಯಾಸಕರಾದ ಕನ್ಯಾಕುಮಾರಿ ಮತ್ತು ಸಿಬ್ಬಂದಿ ಕಾರ್ಯದರ್ಶಿಗಳಾಗಿ ಗೋಣಿ ಬಸವರಾಜ ಅವರನ್ನು ನೇಮಿಸಲಾಗಿದೆ.
ವಿದ್ಯಾರ್ಥಿ ಸಂಘದ ಈ ಸಾಲಿನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ೮೦ನೇ ಸ್ವಾತಂತ್ರೊö್ಯÃತ್ಸವ ದಿನವಾದ ಇಂದು ಧ್ವಜಾರೋಹಣದ ನಂತರ ಹಮ್ಮೀಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ವಹಿಸಿದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿ, ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ೨೦೨೬–೨೭ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಕೇವಲ ಒಂದು ಚುನಾವಣೆ ಅಲ್ಲ ಡಾ. ಕೊಂಡಾ ಅವರು ಹೇಳಿರುವ ಹಾಗೆ ಇದು ವಿದ್ಯಾರ್ಥಿ ಪ್ರಜಾಪ್ರಭುತ್ವ, ನಾಯಕತ್ವ ಮತ್ತು ಜವಾಬ್ದಾರಿಯ ಹಬ್ಬವಾಗಿದೆ. ಪ್ರೀತಿಯ ವಿದ್ಯಾರ್ಥಿನಿಯರೆ — ನಿಮ್ಮ ಮತವನ್ನು ಜಾಣತನದಿಂದ ನೀಡಿ ನೈತಿಕತೆಯುಳ್ಳ, ವಿದ್ಯಾರ್ಥಿಗಳ ಕಾಳಜಿಯ ವಿಷಯಗಳನ್ನು ಮುಂದಿಟ್ಟುಕೊಳ್ಳುವ, ಮಹಾವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿಗಳನ್ನು ಆಯ್ಕೆಮಾಡಿದ್ದೀರಿ. ಎಲ್ಲ ಅಭ್ಯರ್ಥಿಗಳಿಗೂ ನನ್ನ ಹಾರ್ದಿಕ ಅಭಿನಂದನೆಗಳು. ೨೦೨೬–೨೭ನೇ ಸಾಲಿನ ವಿದ್ಯಾರ್ಥಿ ಸಂಘವು ನಮ್ಮ ಸಂಸ್ಥೆಗೆ ಗೌರವ, ಐಕ್ಯತೆ ಮತ್ತು ಪ್ರಗತಿಯ ನಾಂದಿಯಾಗಲಿ ಎಂದು ಮಾತನಾಡಿದರು.
ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮೋಹನರಾಜ ಪತ್ತಾರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು. ಚುನಾವಣೆಯ ಮುಖ್ಯ ಅಧಿಕಾರಿಗ¼ ಶ್ರೀಲಕ್ಷಿö್ಮÃ ಅವರು ಚುನಾವಣೆಯಲ್ಲಿ ಚುನಾಯಿತರಾದವರÀ ವಿವರಗಳನ್ನು ಎಲ್ಲರಿಗೂ ತಿಳಿಸಿಕೊಟ್ಟು ಪರಿಚಯಿಸಿದರು. ೨೦೨೫-೨೬ ನೇ ಸಾಲಿನ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಜಗದೇವಿ ತಮ್ಮ ಅನುಭವಗಳನ್ನು ಹಂಚಿಕೊAಡು ಅಧಿಕಾರವನ್ನು ನೂತನವಾಗಿ ನೇಮಕಗೊಂಡ ಕನ್ಯಾಕುಮಾರಿ ಅವರಿಗೆ. ಹಸ್ತಾಂತರಿಸಿದರು. ನಂತರ ಕನ್ಯಾಕುಮಾರಿಯವರು ಮಾತನಾಡಿ ತಮಗೂ ಕೂಡಾ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರಿಗೆ ತಮ್ಮ ಈ ಅವಧಿಯಲ್ಲಿ ಸಹಾಯವನ್ನು ನೀಡಲು ಮತ್ತು ಕಾಲೇಜಿನ ಏಳಿಗಾಗಿ ಎಲ್ಲರೂ ಶ್ರಮಿಸೋಣವೆಂದು ಕೇಳಿಕೊಂಡರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಗೋಣಿ ಬಸವರಾಜ, ಅನಿತಾ ಪಾಟೀಲ, ಜಗದೇವಿ ಚಿಕ್ಕೆಗೌಡ, ಮಹಾನಂದಾ, ಸಂತೋಷಿ ಕೆ, ರಶ್ಮೀ, ಅಸ್ಮಿತಾ, ಶೈಲಜಾ ನಾಕೇದಾರ, ಡಾ. ನಯನತಾರ ಆಸ್ಪಲಿ, ಗಂಗಶ್ರೀ ಉಡಚಣ, ಸರೋಜಾ ಪಾಟೀಲ, ಜ್ಯೋತಿ ಪಾಟೀಲ, ಬೋಧಕೇತರ ಸಿಬ್ಬಂದಿಗಳಾದ ಶ್ರೀಮತಿ ಜ್ಯೋತಿ ಕಲ್ಲೂರ, ಶ್ರೀಮತಿ. ಸುಚಿತಾ ಪಾಟೀಲ, ಶ್ರೀಮತಿ ಜಯಶ್ರೀ ಎನ್, ಶ್ರೀಮತಿ ಅಂಬಿಕಾ, ಕುಮಾರಿ. ಸುನೀತಾ ಸ್ವಾಮಿ ಮತ್ತಿತರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಕವಿತಾ ಅವರು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ನಡೆಸಿಕೊಟ್ಟರು ಎಂದು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ
.

