ವಾಡಿಯಲ್ಲಿ ಅಟಲ್ ಜಿ ಸ್ಮರಣೆ
ವಾಡಿಯಲ್ಲಿ ಅಟಲ್ ಜಿ ಸ್ಮರಣೆ
ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ 8ನೇ ವರ್ಷದ ಪುಣ್ಯದಿನ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅಟಲ್ ಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಮೂರು ಬಾರಿ ನಮ್ಮ ದೇಶದ ಪ್ರಧಾನಮಂತ್ರಿಗಳಾಗಿ ತಮ್ಮದೇ ಆದ ಅಭೂತಪೂರ್ವ ಸೇವೆ ಸಲ್ಲಿಸಿದ್ದ ಮಹಾನ ನಾಯಕ ಅಟಲ್ ಜಿ ಅವರು ಎಂದರು.
ಬಿಜೆಪಿ ಸಂಸ್ಥಾಪಕ ಸದಸ್ಯರಾಗಿ,ಪಕ್ಷದ ಬೆಳವಣಿಗೆಗೆ ಶ್ರಮಿಸಿ, ಪಕ್ಷವನ್ನು ಅಧಿಕಾರದವರೆಗೆ ಕೊಂಡೊಯ್ದ ಅಭೂತಪೂರ್ವ ಸಂಘಟಕರಾಗಿದ್ದರು. ಭಾರತೀಯರ ಪ್ರತಿಯೊಬ್ಬರ ಕನಸಾಗಿದ್ದ ಅಯೋಧ್ಯೆ ರಾಮಜನ್ಮ ಭೂಮಿ ನಿರ್ಮಾಣ ಹೋರಾಟ ಸಾಕಾರಗೊಳ್ಳಲು ವಿಜಯಸಂಕಲ್ಪ ಯಾತ್ರೆ ಮೂಲಕ ಯಶಸ್ವಿಯಾಗಲೂ ಯೋಜನೆ ರೂಪಿಸಿದವರೇ ಅಟಲ್ ಜೀ ರವರು, ರಾಜಕರಣದೊಂದಿಗೆ ಅನೇಕ ಸಾಮಾಜಿಕ,ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆಗೈದಿದ್ದಾರೆ.
ಅಟಲ್ ಜಿ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ 2018ರ ಆಗಸ್ಟ್ 16ರಂದು ವಿಧಿವಶರಾದ ನಂತರ ಅವರ ಚಿತಾಭಸ್ಮ ವನ್ನು ದೇಶದ ಪ್ರಮುಖ ಪುಣ್ಯ ನದಿಗಳಲ್ಲಿ ಸಮರ್ಪಣೆ ಮಾಡುವ ಸಲುವಾಗಿ ಅಗಸ್ಟ್ 25,2018 ರಂದು ರೈಲಿನಲ್ಲಿ ವಾಡಿ ರೈಲು ನಿಲ್ದಾಣದ ಮೂಲಕ ಬಿಜಿ ಪಾಟೀಲ ಅವರ ತೆಗೆದುಕೊಂಡು ಹೋಗುವ ಸಂಧರ್ಭದಲ್ಲಿ ನಮ್ಮ ಮಾಜಿ ಶಾಸಕರಾಗಿದ್ದ ವಾಲ್ಮೀಕ ನಾಯಕ ಅವರು ಪಕ್ಷದವರಿಗೆ ಚಿತಾಭಸ್ಮವನ್ನು ಕೆಲ ಹೊತ್ತು ನಿಲ್ದಾಣದಲ್ಲಿ ಇರಿಸಿ ದರ್ಶನಕ್ಕೆ ಅವಕಾಶ ಕೊಟ್ಟು ಪುನಿತರಾಗಿಸಿದ್ದು ಎಂದೆಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.
ಹಿರಿಯ ಮುಖಂಡರಾದ ಬಸವರಾಜ ಪಂಚಾಳ ಅವರು ಮಾತನಾಡಿ
ಭಾರತದ ಸರ್ವತೋಮುಖ ಪ್ರಗತಿಗಾಗಿ ಅಟಲ್ ಜಿ ಅವರ ಸಮರ್ಪಣೆ ಮತ್ತು ಸೇವಾ ಮನೋಭಾವವು ಇಡೀ ರಾಷ್ಟ್ರಕ್ಕೆ ಮಾದರಿ ಯಾಗಿದೆ ಎಂದರು.
ಅವರ ಒಂದು ಕನಸಿನ ಭಾರತ ನಮ್ಮ ಪ್ರಧಾನಿ ಮೋದಿಜಿ ಅವರಿಂದ ಸಾಕಾರಗೊಳ್ಳುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಅರ್ಜುನ ಕಾಳೆಕರ, ಅಶೋಕ ಪವಾರ, ವಿಠ್ಠಲ ಪುಜಾರಿ, ಮಲ್ಲಿಕಾರ್ಜುನ ಸಾತಖೇಡ, ರಮೇಶ ಜಾಧವ, ವಿಜಯ ರಾಠೋಡ, ಪ್ರಕಾಶ ದಂಡೋತಿ, ಆಕಾಶ ಉಪ್ಪಿನ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ ಸೇರಿದಂತೆ ಇತರರು ಇದ್ದರು.

