ಚರಿತ್ರೆಗೆ ಶಾಸನಗಳೇ ಆಧಾರ ಸ್ತಂಭ : ಡಾ. ಬಸವರಾಜ ಭಾಗಾ.

ಚರಿತ್ರೆಗೆ ಶಾಸನಗಳೇ ಆಧಾರ ಸ್ತಂಭ   : ಡಾ. ಬಸವರಾಜ ಭಾಗಾ.

ಚರಿತ್ರೆಗೆ ಶಾಸನಗಳೇ ಆಧಾರ ಸ್ತಂಭ : ಡಾ. ಬಸವರಾಜ ಭಾಗಾ.     

ಕಲಬುರಗಿ: ಮಾನವ ಜನಾಂಗದ ಚರಿತ್ರೆಗೆ ಸ್ಮಾರಕಗಳು ಮೈಲುಗಲ್ಲುಗಳಾದರೆ, ಶಾಸನಗಳು ಆಧಾರಸ್ತಂಭಗಳಾಗಿವೆ,ಇಂದು ನಾವು ಶಾಸನಗಳ ಅಧ್ಯಯನ ಮತ್ತು ಸಂಶೋಧನೆಯ ಅಗತ್ಯದಷ್ಟೆ, ಸ್ಮಾರಕಗಳನ್ನು ಸಂರಕ್ಷಿಸಬೇಕಾದ ಅವಶ್ಯಕತೆ ಇದೆ ಎಂದು ಡಾ ಬಸವರಾಜ ಭಾಗಾ ಹೇಳಿದರು.

ನಗರದ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಕಾರ್ಯಾಲಯದಲ್ಲಿ " ಪುಸ್ತಕ ಪರಿಚಯ ಕುರಿತು ಮಾತನಾಡಿ,

ಲೇಖಕ ಡಾ.ವೀರಶೆಟ್ಟಿ ಗಾರಂಪಳ್ಳಿಯವರು ರಚಿಸಿದ "ಗತಕಥನ:ಸಕೀರ್ಣ"ಎಂಬ ಪುಸ್ತಕದಲ್ಲಿ ಒಂಬತ್ತು ಐತಿಹಾಸಿಕ ಬಿಡಿ ಲೇಖನಗಳು ವಿವಿಧ ಸಂದರ್ಭಗಳಲ್ಲಿ ಬರೆಯಲಾಗಿದೆ.ಲೇಖಕರು ಕಲ್ಯಾಣ ಕರ್ನಾಟಕದ ಬೀದರ,ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಐತಿಹಾಸಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಕ್ಷೇತ್ರ ಕಾರ್ಯ ಮಾಡಿದ್ದಾರೆ. ಈ ಪುಸ್ತಕ ಆಧಾರಸಹಿತ ಆಕರ ಗ್ರಂಥವಾಗಿದೆ"ಎಂದು ಪುಸ್ತಕ ಪರಿಚಯ ಮಾಡಿಕೊಟ್ಟರು. 

    ಲೇಖಕ ಡಾ.ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ " ನಮ್ಮ ಗಮನಕ್ಕೆ ಬಾರದ ಅನೇಕ ವೀರಗಲ್ಲುಗಳು,ಶಾಸನಗಳು ಇವೆ,ಅವುಗಳ ಮೇಲೆ ಬೆಳಕು ಚೆಲ್ಲಬೇಕಾಗಿದೆ, ಅವುಗಳ ಕುರಿತು ಕ್ಷೇತ್ರ ಕಾರ್ಯ ಆಗಬೇಕಾಗಿದೆ" ಎಂದು ಹೇಳಿದರು.

 ಸಂಘದ ಅಧ್ಯಕ್ಷರ ಅಪ್ಪಾರಾವ ಅಕ್ಕೋಣೆಯವರು ಅಧ್ಯಕ್ಷತೆ ವಹಿಸಿದ್ದರು, ಸಂಚಾಲಕರಾದ ಡಾ. ವಿಜಯಕುಮಾರ ಪರುತೆಯವರು ನಿರೂಪಿಸಿದರು.ಸಾಹಿತಿಗಳಾದ ಡಾ. ಶ್ರೀಶೈಲ ನಾಗರಾಳ,ಡಾ. ಗವಿಸಿದ್ಧಪ್ಪ ಎಚ್. ಪಾಟೀಲ್,ಡಾ. ಶರಣಬಸಪ್ಪ ವಡ್ಡನಕೇರಿ, ಡಾ. ಸಿದ್ಧಪ್ಪ ಹೊಸಮನಿ, ಡಾ. ರಾಜಕುಮಾರ ಮಾಳಗೆ,ಡಾ. ಸಿದ್ರಾಮಯ್ಯ ಮಠ,ಶ್ರೀ ರೇವಣಸಿದ್ಧಪ್ಪ ದುಕಾನ, ಶ್ರೀ ರಾಜೇಂದ್ರ ಝಳಕಿ, ಪ್ರೋ.ಶ್ರೀಶೈಲ ಮದಾಣಿ ಉಪಸ್ಥಿತರಿದ್ದು .