ಯೋಧರ ಸೇವೆಗೆ ನಾವೆಲ್ಲರೂ ಚಿರರುಣಿ
ಯೋಧರ ಸೇವೆಗೆ ನಾವೆಲ್ಲರೂ ಚಿರರುಣಿ
ಕಲಬುರಗಿ: ದೇಶ ಸೇವೆಯ ದೇಶದ ಗಡಿಯಲ್ಲಿ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೆ ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಅವರ ಸೇವೆಗೆ ನಾವೆಲ್ಲರೂ ಸದಾ ಚಿರಋಣಿಗಳಾಗಿರಬೇಕು ಪ್ಲೋರಾ ಪಬ್ಲಿಕ್ ಶಾಲೆಯ ಮುಖ್ಯ ಗುರುಗಳು ಹೇಳಿದರು.
ನಗರದ ಎಂ.ಎಸ್.ಕೆ ಮಿಲ್ ನ ನ್ಯೂ ರಾಘವೇಂದ್ರ ಕಾಲೋನಿಯ ಪ್ಲೋರಾ ಕನ್ನಡ ಮತ್ತು ಇಂಗ್ಲೀಷ್ ಮಿಡಿಯಮ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಶೆಯಲ್ಲಿಯೇ ದೇಶದ ಆಗು ಹೋಗುಗಳ ಬಗ್ಗೆ ಅರಿವು ಹೊಂದಿ,ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಬೇಕು ಎಂದರು.ಭಾರತದಲ್ಲಿರುವ ಪ್ರತಿಯೊಬ್ಬರೂ ಮೊದಲು ಭಾರತಾಂಬೆಗೆ ಆದ್ಯತೆ ನೀಡಬೇಕು.ಗುರು ಹಿರಿಯರು ಹಾಗೂ ತಂದೆ-ತಾಯಿಗಳಿಗೆ ಗೌರವ ನೀಡಿ ವಿಧೇಯರಾಗಿರಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯ ಮತ್ತು ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಬಾಲ್ಯದಿಂದಲೇ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕು. ಮನೋಭಾವ ಬೆಳೆಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು,ಸಹ ಶಿಕ್ಷಕರು, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ಜರುಗಿದವು.

