ಜೆಡಿಎಸ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
ಜೆಡಿಎಸ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
ಕಲಬುರಗಿ: ನಗರದ ಜಿಲ್ಲಾ ಜೆಡಿಎಸ್ ಪಕ್ಷದ ಕಚೇರಿ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸೇವಾದಳ ಜಿಲ್ಲಾಧ್ಯಕ್ಷರಾದ ನರಸಯ್ಯ ಗುತ್ತೇದಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಾಲರಾಜ್ ಅಶೋಕ ಗುತ್ತೇದಾರ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮವನ್ನು ಸ್ಮರಿಸಿ, ದೇಶದ ಏಕತೆ, ಅಖಂಡತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ್ ಬೀರಬಿಟ್ಟೆ, ಮಹಾನಗರ ಪಾಲಿಕೆ ಸದಸ್ಯರಾದ ಅಲೀಮ್ ಪಟೇಲ್ ಕ್ಯೂ.ಪಿ., ಕೃಷ್ಣ ರೆಡ್ಡಿ, ಕಾರ್ಯಾಧ್ಯಕ್ಷ ರಾಮಚಂದ್ರ ಅಟ್ಟೂರ್, ಹಿರಿಯ ಉಪಾಧ್ಯಕ್ಷರಾದ ಮಹಾಂತಪ್ಪ ಮದರಿ, ಶಂಕರಗೌಡ ಪಾಟೀಲ್ ಸೇರಿದಂತೆ ಜೆಡಿಎಸ್‌ನ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವಲಸಲ್ ಕುಮಾರ್, ಮಲ್ಲಿಕಾರ್ಜುನ ಸಂಗಣಿ, ಹೇಮಂತ್ ಶಹಾ, ಪ್ರವೀಣ್ ಜಾಧವ್, ಬಾಬರ್ ಮುಸ್ತಫಾ, ಗಂಗಾಧರ್ ಪಂಚಾಳ್, ಬೈಲಪ್ಪ ಪಟ್ಟೇದಾರ್, ಮಾಣಿಕ್ ಶಾಪೂರಕರ್, ದೇವಿಂದ್ರ ಹಸನಪುರ, ಶಿವಲಿಂಗಪ್ಪ ಪಾಟೀಲ್, ಹೋಬಸಿಂಗ್ ಚವಾಣ್, ಮಾರುತಿ ಚವಾಣ್, ಮುಸ್ತಾಕ್ ಅಲಿ, ಬಸವರಾಜ್ ಪಾಟೀಲ್, ಚಂದ್ರು ಮೋರೆ, ಬಸರೆಡ್ಡಿ ಚಿತ್ತಾಪುರ, ಸುನಿಲ್ ಗಜರೆ, ಹಣಮಂತ ಕಂದಳ್ಳಿ, ಅನ್ವರ್ ಪಟೇಲ್, ಹಣಮಂತ ಸನಗುಂದಿ, ಬಸವರಾಜ್ ಸಿದ್ರಾಮಗೋಳ್, ಖಾಜಾ ಪಟೇಲ್, ಕಿಶನ್, ಗೋಪಾಲ್ ಗುತ್ತೇದಾರ, ಯೇಸುನಾಥ್, ನಾಗಯ್ಯ ಸ್ವಾಮಿ, ಮೊಹಮ್ಮದ್ ಪಟೇಲ್, ಪ್ರವೀಣ್ ದೊಡ್ಡಮನಿ, ಕೈಲಾಸಪತಿ, ಶ್ರೀನಿವಾಸ್ ಜಮಾದಾರ್, ಸಿದ್ದು ಪೂಜಾರಿ, ಮಹಾನಂದ ಪಡಶೆಟ್ಟಿ, ಸುನೀತಾ ಕೋರವಾರ, ಅನುರಾಧ, ವಿಜಯಾ, ನಿರ್ಮಲಾ ಬಿರಾದಾರ್, ಮಹಾದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

