ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ : ಎಸ್.ಎಸ್.ರಾಂಪುರೆ

ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ : ಎಸ್.ಎಸ್.ರಾಂಪುರೆ

.

ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ : ಎಸ್.ಎಸ್.ರಾಂಪುರೆ

ಕಮಲನಗರ: ಸ್ವಾತಂತ್ರ ಹೋರಾಟಗಾರರ ತ್ಯಾಗ ಮತ್ತು ಬಲಿದಾನ ಸ್ಮರಿಸುವ ಮೂಲಕ ದೇಶದ ಸಮಗ್ರ ಅಭಿವೃದ್ದಿ ನಮ್ಮ ಧ್ಯೇಯವಾಗಿರಬೇಕು.ಜಾತಿ, ಮತ ಮತ್ತು ಪಂಥಗಳೆನ್ನುವ ಬೇಧಭಾವ ತೊರೆದು ರಾಷ್ಟ್ರೀಯತೆ, ಸ್ವಾವಲಂಬಿ ಮತ್ತು ಸ್ವಾಭಿಮಾನದ ಕನಸು ಯುವಕರು ನನಸಾಗಿಸಿದಲ್ಲಿ ನಿಜವಾದ ಸ್ವಾತಂತ್ರದ ಅರ್ಥ ಸಾಕಾರಗೊಳ್ಳುತ್ತದೆ ಎಂದು ಪ್ರೊ.ಎಸ್ ಎಸ್,ರಾಂಪೂರೆ ನುಡಿದರು.

ಕಮಲನಗರ ಪಟ್ಟಣದ ತಹಸೀಲದಾರರ ಕಾರ್ಯಾಲಯದ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ತಾ.ಪಂ.ಮತ್ತು ಗ್ರಾ.ಪಂ.ಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭವಿಷ್ಯದ ಬದುಕಿನ ಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಂಕಲ್ಪ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ.ವೈಜ್ಞಾನಿಕ ಪ್ರಗತಿ ಜತೆಗೆ ಕಲೆ, ಸಾಹಿತ್ಯ ,ಸಂಸ್ಕøತಿ ಮತ್ತು ಜನಾಂಗದ ಸಾಮರಸ್ಯವನ್ನು ಮೆಟ್ಟಿ ನಿಂತು ಸ್ವಾತಂತ್ರವನ್ನು ಉಳಿಸಿ ಬೆಳೆಸಲು ನಾವೆಲ್ಲರು ಪ್ರತಿಜ್ಞೆ ಮಾಡಬೇಕು. ಸ್ವಾತಂತ್ರ ಸಂಗ್ರಾಮದ ಮಹತ್ವ ಮತ್ತು ಹೋರಾಟಗಾರರ ಆದರ್ಶ ವಿಚಾರಗಳು ಯುವ ಪೀಳಿಗೆಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ ಎಂದರು.

ತಹಸೀಲದಾರ ಅಮೀತಕುಮಾರ ಕುಲಕರ್ಣಿ ಅವರು ದ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ ದಿನಾಚರಣೆ ನಮ್ಮ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ.ಶಾಂತಿ, ಸಹಬಾಳ್ಳೆ, ಸಹಕಾರ ಮತ್ತು ವಿಶ್ವಾಸದ ನೆಲೆಗಟ್ಟಿನಲ್ಲಿ ನವ್ಯ ಭಾರತ ನಿರ್ಮಾಣದ ಕನಸು ನಮ್ಮಲ್ಲಿರಬೇಕು ಎಂದರು.

ವೇದಿಕೆಯಲ್ಲಿ ಸಿಪಿಐ.ಶ್ರಿಕಾಂತ ಅಲ್ಲಾಪೂರ್, ಹೋರಾಟಗಾರ ಗುಂಡಪ್ಪ ದಾನಾ, ತಾ.ಪಂ.ಇಒ.ಹಣಮಂತರಾಯ ಕೌಟಗೆ, ಪಿಡಿಒ.ದಿಲೀಪ ಸಂತಪುರೆ, ಕೆಪಿ ಎಸ್ ಶಾಲೆ ಮುಖ್ಯಗುರು ಲಿಂಗಾನಂದ ಮಹಾಜನ, ಸಿ ಆರ್‍ಪಿ.ಶಿವಕುಮಾರ ಹೊನ್ನಾಳೆ ಹಾಗೂ ಗಣ್ಯ ನಾಗರೀಕರು ಇದ್ದರು.ಶಿಕ್ಷಕ ಸ್ವಾಮಿದಾಸ ನಿರೂಪಣೆ ಮಾಡಿದರು.ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.