ಶ್ರಾವಣ ಮಾಸದ ಪ್ರಯುಕ್ತ ಶ್ರೀ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಕಾರ್ಯಕ್ರಮ

ಶ್ರಾವಣ ಮಾಸದ ಪ್ರಯುಕ್ತ ಶ್ರೀ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಕಾರ್ಯಕ್ರಮ

ಶ್ರಾವಣ ಮಾಸದ ಪ್ರಯುಕ್ತ ಶ್ರೀ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಕಾರ್ಯಕ್ರಮ

ಕಲಬುರಗಿ: ಒತ್ತಡದ ಬದುಕಿನಿಂದಾಗಿ ನೆಮ್ಮದಿ ಮರೀಚಿಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಪುರಾಣ, ಪುಣ್ಯ ಕಥೆಗಳನ್ನು ಆಲಿಸುವ ಮೂಲಕ ಸಂತೃಪ್ತಿಯ ಬದುಕು ಕಂಡುಕೊಳ್ಳಬೇಕು ಎಂದು ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ ಹೇಳಿದರು.

ನಗರದ ಭಾರತ್ ಪ್ರೈಡ್ ಸಮ್ಮುಚ್ಚಯದ ಶಿವ ಮಂದಿರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಕಾಯಕಯೋಗಿ ಶರಣ ಲಿಂ. ಸಂಗಪ್ಪ ಹತ್ತಿ ಸ್ಮರಣಾರ್ಥ ಆಯೋಜಿಸಿದ್ದ ಶ್ರೀ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಪಾದಿಸಿದ ಹಣವನ್ನೆಲ್ಲ ಕೂಡಿಡುವುದಕ್ಕಿಂತ, ಗಳಿಸಿದ ಸಂಪತ್ತಿನಲ್ಲಿ ಒಂದು ಭಾಗವನ್ನು ದಾನ-ಧರ್ಮ ಕಾರ್ಯಗಳಿಗೆ ವಿನಿಯೋಗಿಸುವುದು ಸತ್ಪಾತ್ರಕ್ಕೆ ಸಲ್ಲುತ್ತದೆ. ಹಣವನ್ನು ಕೇವಲ ಉಳಿಸುವತ್ತ ಗಮನ ಹರಿಸಿದರೆ ಅದು ವಿವಿಧ ಕಾರಣಗಳಿಂದ ನಷ್ಟವಾಗಬಹುದು. ಆದ್ದರಿಂದ ಸಂಪತ್ತು ಇರುವಾಗಲೇ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳಿಗೆ ದಾನ ಮಾಡಬೇಕು ಎಂದು ಅವರು ಹಿತವಚನ ನೀಡಿದರು.

ಗದಗಿನ ಪುಟ್ಟರಾಜ ಕವಿಗಳು ರಚಿಸಿದ ಶ್ರೀ ಗುಡ್ಡಾಪುರದ ದಾನಮ್ಮ ದೇವಿ ಪುರಾಣವನ್ನು ಖ್ಯಾತ ಪುರಾಣಿಕ ಶ್ರೀ ಸಿದ್ಧೇಶ್ವರ ಶಾಸ್ತ್ರಿಗಳು ಮನಮುಟ್ಟುವ ರೀತಿಯಲ್ಲಿ ಪ್ರವಚನದ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾರತ್ ಪ್ರೈಡ್ ಸೊಸೈಟಿಯ ಅಧ್ಯಕ್ಷ ರಾಜಕುಮಾರ ಕೌಡಲ್ ಜ್ಯೋತಿ ಬೆಳಗಿಸಿದರು. ಶಿವ ಮಂದಿರದ ಮಹಿಳಾ ಮಂಡಳದ ಉಪಾಧ್ಯಕ್ಷೆ ಸವಿತಾ ಸಜ್ಜನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ರತ್ನ ಪ್ರಶಸ್ತಿ ಪುರಸ್ಕೃತೆ ಕು. ಶ್ರೇಯಾ ಮೃತ್ಯುಂಜಯ ಪಾಟೀಲ ಹಿರೇಮಠ ಸಂಗೀತ ಗಾಯನ ನಡೆಸಿಕೊಟ್ಟರು.

ನಿವೃತ್ತ ಮುಖ್ಯಗುರು ಶಿವಾನಂದ ಪಾಟೀಲ ರುದ್ರವಾಡಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸಿದ್ಧಲಿಂಗಪ್ಪ ಹತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಡಾ. ಮಹಾದೇವ ಪಟ್ಟಣಶೆಟ್ಟಿ, ಡಾ. ಎ.ಜಿ. ಅಷ್ಠಗಿ, ಡಾ. ವೈ.ಎಸ್. ಕಣ್ಣಿ, ರಾಜಶೇಖರ ದೇವಣಿ, ಗೋವಿಂದ ರಾಠಿ, ಭೀಮರಾವ ವಗ್ದಾಲೆ, ಪ್ರಭು ಚವ್ಹಾಣ, ದಿನೇಶ ಜೈನ್, ವಿನಾಯಕ ಮುಕ್ಕಾ, ಶಿವಕುಮಾರ ದಾನಾ, ಮಹೇಶ್ ಹಳ್ಳಿ, ಬಸವರಾಜ ಬಸವಂತರಾವ, ರಾಹೆವಾಡೆಈಶ್ವರ, ಅಶ್ವಿನಿ ಭಾವಗಿ, ಪೂಜಾ ಮುದ್ದಾ, ಜಯಲಕ್ಷ್ಮಿ ದಾನಾ, ಸುವರ್ಣ ರಾಜಾಪೂರ, ರಾಜಶ್ರೀ ದೇವಣಿ, ವಿದ್ಯಾದೇವಿ ಠಾಕೂರ, ಬಸವರಾಜ ದಂಡಿ, ವೀರಭದ್ರಪ್ಪ ಮೂಲಗೆ, ದೇವಾನಂದ ಪಾಟೀಲ ಸೇರಿದಂತೆ ಅನೇಕ ಗಣ್ಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.

ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ ನಡೆದ ಪುರಾಣ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.