ದೇಶಕ್ಕೆ ಅಂಬೇಡ್ಕರ ಕೊಡುಗೆ ಅಪಾರ - ವೇಣುಗೋಪಾಲ್ ಜೇವರ್ಗಿ

ದೇಶಕ್ಕೆ ಅಂಬೇಡ್ಕರ ಕೊಡುಗೆ ಅಪಾರ - ವೇಣುಗೋಪಾಲ್ ಜೇವರ್ಗಿ

ದೇಶಕ್ಕೆ ಅಂಬೇಡ್ಕರ ಕೊಡುಗೆ ಅಪಾರ - ವೇಣುಗೋಪಾಲ್ ಜೇವರ್ಗಿ 

ಸುರಪುರ : ದೇಶದ ಸಂವಿಧಾನವನ್ನು ರಚಿಸಿ, ಎಲ್ಲರಿಗೂ ಸಮಾನತೆ ಮತ್ತು ಸ್ವಾತಂತ್ರ್ಯ ಹಕ್ಕನ್ನು ನೀಡಿದ ಮಹಾನ್ ಮೇಧಾವಿ,ತತ್ವಜ್ಞಾನಿ, ಡಾ.ಬಿ.ಆರ್.ಅಂಬೇಡ್ಕರ್ ಅವರು,ಆದ್ದರಿಂದ ಈ ದೇಶಕ್ಕೆ ಅಂಬೇಡ್ಕರರ ಕೊಡುಗೆ ಅಪಾರವಾಗಿದೆ ಎಂದು ವೇಣುಗೋಪಾಲ ಜೇವರ್ಗಿ ಹೇಳಿದರು.

ನಗರದ ಶ್ರೀ ಪ್ರಭು ಕಲಾ,ವಿಜ್ಞಾನ,ಮತ್ತು ಜೆ.ಎಂ.ಬೋಹರಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರ ಸಹಯೋಗದಲ್ಲಿ ಆಯೋಜಿಸಿದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಡಿ ತುಳಿತಕ್ಕೊಳ್ಳಗಾದವರ ಹಕ್ಕುಗಳಿಗಾಗಿ ಧ್ವನಿ ಎತ್ತಿದರು ಎಂದು ನುಡಿದರು.

ರಂಗಂಪೇಟೆಯ ಡಾ.ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ಉಮಾದೇವಿ ದಂಡೋತಿ ಉಪನ್ಯಾಸ ನೀಡುತ್ತಾ ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು ಮತ್ತು ಸಮಾನ ಅವಕಾಶ ಕಲ್ಪಿಸಿಕೊಟ್ಟವರು ಅಂಬೇಡ್ಕರ್ ರವರು,ಅವರೊಂದು ಕೇವಲ ವ್ಯಕ್ತಿಯಾಗಿರದೇ ಇಡೀ ದೇಶದ ಶಕ್ತಿಯಾಗಿದ್ದರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದ ಅವರು. ಅಂಬೇಡ್ಕರ್ ವಿಚಾರಗಳನ್ನು, ತಾತ್ವಿಕ ನಿಲುವುಗಳನ್ನು, ಅರ್ಥೈಸಿಕೊಂಡು ನಡೆದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ನುಡಿದರು.

ಕಾಲೇಜಿನ ಪ್ರಾಂಶುಪಾಲರಾದ ವಿರೂಪಾಕ್ಷಿ ಹೆಚ್.ಮಾತನಾಡಿ ಓದು ಎಂಬುದು ಕೇವಲ ಪರೀಕ್ಷೆಗೆ ಸೀಮಿತವಾಗಿರದೆ, ಬದುಕಿನ ಅರಿವಿನ ಆಳವನ್ನು ತಿಳಿದುಕೊಳ್ಳುವುದರ ಜೊತೆಗೆ ಸಮಾಜದಲ್ಲಿನ ಜನಪರ ಮತ್ತು ಜೀವಪರ ಮೌಲ್ಯಗಳನ್ನು ಮೇಲೆತ್ತಿ ಸಮಾಜ ಸುಧಾರಣೆ ಮಾಡುವುದೇ ಓದು ಎಂದು ತಮ್ಮ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮಾತನಾಡಿದರು.

ಈ ಸಮಾರಂಭದ ವೇದಿಕೆಯ ಮೇಲೆ ಸಮಾಜಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಸಾಯಿಬಣ್ಣ ಮುಡಬುಳ,ಶಿಕ್ಷಣ ಸಂಯೋಜಕ ಶರಣಬಸವ ಗಚ್ಚಿನಮನಿ, ಸೇರಿದಂತೆ ಇತರರು ಉಪಸಿತರಿದ್ದರು,ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂದ ಮತ್ತು ಕ್ವಿಜ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು,ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪುಸ್ತಕಗಳನ್ನು ನೀಡಿ ಅಭಿನಂದಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಪ್ರಾಸ್ತಾವಿಕ ನುಡಿಗಳಾ ಡಿದರು,ಕಾರ್ಯಕ್ರಮವನ್ನು ಮಂಜುನಾಥ ಛೆಟ್ಟಿ ನಿರೂಪಿಸಿದರು,ಕು.ಮೇಘನಾ ಪ್ರಾರ್ಥಿಸಿದರು,ವಿಜಯಕುಮಾರ ಬಣಗಾರ ಸ್ವಾಗತಿಸಿದರು, ಅಂಬರೀಶ್ ವಂದಿಸಿದರು.