ಬರಗಾಲ ಘೋಷಣೆಗಾಗಿ ಸರಕಾರಕ್ಕೆ : ತಿರುಪತಿ ಹತ್ತಿಕಟಗಿ ಆಗ್ರಹ
ಬರಗಾಲ ಘೋಷಣೆಗಾಗಿ ಸರಕಾರಕ್ಕೆ : ತಿರುಪತಿ ಹತ್ತಿಕಟಗಿ ಆಗ್ರಹ
ಶಹಾಪುರ : ಮುಂಗಾರು ಮಳೆ ಕೈ ಕೊಟ್ಟ ಕಾರಣ ರೈತ ಬೆಳೆದ ಬೆಳೆ ಸಂಪೂರ್ಣ ಹಾನಿಯಾಗಿರುವುದರಿಂದ ರೈತನ
ಬದುಕು ಸಂಪೂರ್ಣ ದುಸ್ಥಿತಿಗೆ ತಲುಪಿರುವುದರಿಂದ ರೈತರಿಗೆ ಪರಿಹಾರ ನೀಡಲು ರಾಜ್ಯದಲ್ಲಿ ಕೂಡಲೇ ಬರಗಾಲ ಘೋಷಿಸುವಂತೆ ಬಿಜೆಪಿ ಯುವ ಮುಖಂಡ ತಿರುಪತಿ ಹತ್ತಿಕಟಗಿ ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರ ಕೈಗೆ ಯಾವುದೇ ಬೆಳೆ ಸಿಗುತ್ತಿಲ್ಲ ಮೂರು ವರ್ಷ ರೈತ ನಷ್ಟ ಅನುಭವಿಸಿದ್ದಲ್ಲಿ ಸರಕಾರವೇ ರೈತರ ಸಾಲ ಮನ್ನಾ ಮಾಡಬೇಕು ಜೊತೆಗೆ ಬೆಳೆ ಕಳೆದುಕೊಂಡ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಿಸಬೇಕು ಎಂದು ಹೇಳಿದರು.
ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ,ಆಂಧ್ರಪ್ರದೇಶ, ಮತ್ತು ತೆಲಂಗಾಣದ ಅಲ್ಲಿನ ಸರ್ಕಾರಗಳು ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಾಗಿದೆ,ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

