ರೈತರ ವಿವಿಧ ಬೇಡಿಕೆಗಾಗಿ ರಸ್ತೆ ಸಂಚಾರ ತಡೆ
ರೈತರ ವಿವಿಧ ಬೇಡಿಕೆಗಾಗಿ ರಸ್ತೆ ಸಂಚಾರ ತಡೆ
ಕಮಲನಗರ: ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಾದ ಕಾರಣ ಬರಗಾಲ ಘೋಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಪಟ್ಟಣದ ಚನ್ನಬಸವ ಪಟ್ಟದ್ದೇವರ ವಾಚನಾಲಯದಿಂದ ಅಲ್ಲಮಪ್ರಭು ವೃತ್ತದವರೆಗೆ ಪ್ರತಿಭಟನೆ ಮಾಡಲಾಗಿತು. ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತರು ಮಹಮ್ಮದ್ ಶಕೀಲ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರೈತ ಮುಖಂಡರಾದ ಶ್ರೀಮಂತ ಬಿರಾದಾರ ಅವರು ಮಾತನಾಡಿ
2025-26 ನೇ ಸಾಲಿನ ಬೆಳೆವಿಮೆ ಈಗಾಗಲೇ ಕೆಲವರ ಖಾತೆಗೆ ಮಾತ್ರ ಹಣ ಜಮೆ ಆಗಿದೆ. ಇನ್ನೂ ಹಲವು ರೈತರ ಖಾತೆಗೆ ಹಣ ಜಮೆ ಆಗಿಲ್ಲ. ತಾಲ್ಲೂಕ ಎಲ್ಲಾ ರೈತರ ಖಾತೆಗೆ ಬೆಳೆವಿಮೆ ಹಣ ಜಮೆ ಮಾಡಬೇಕು. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದಿರುವುದರಿಂದ ಮುಂಗಾರು ಹಂಗಾಮಿನ ಬೆಳೆಗಳು ಹಾಳಾಗಿದ್ದು, ಕೂಡಲೇ ಸರ್ಕಾರ ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ
ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು. ರೈತರ ಸಾಲಮನ್ನಾ, ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ, ಬಿಎಸ್‍ಎಸ್‍ಕೆ ಕಾರ್ಖಾನೆ ಪುನರ್ ಆರಂಭಿಸಿ ರೈತರ ಹಿತ ಕಾಪಾಡಬೇಕು. ಈ ಸಮಸ್ಯೆಗಳನ್ನು ಕೂಡಲೇ ಸರ್ಕಾರ ಬಗೆಹರಿಸಬೇಕು ಎಂದು ಹೇಳಿದರು.
ಕೆಲಹೊತ್ತು ಬೀದರ್ -ನಾಂದೇಡ್ ರಾಷ್ಟೀಯ ಹೆದ್ದಾರಿ ತಡೆದು ಹೋರಾಟ ಮಾಡಿದರು. ರೈತರ ಕೂಗು,ರೈತರ ಗೀತೆ ,ರೈತರ ವಿರೋಧಿ ನೀತಿಗೆ ಧಿಕ್ಕಾರ ಕೂಗಿದರು.
ಕಮಲ ನಗರ ಪೊಲೀಸ್ ಠಾಣೆ ಸಿ. ಪಿ. ಐ ಶ್ರೀಕಾಂತ್ ಅಲ್ಲಾ ಪುರೆ, ಪಿ.ಎಸ್.ಐ. ಆಶಾ ರಾಠೋಡ್ ಹಾಗೂ ಪೊಲೀಸರು ಪ್ರತಿಭಟನೆಯನ್ನ ನಿಯಂತ್ರಣ ಮಾಡಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪ್ರವೀಣ ಕುಲಕರ್ಣಿ ಉಪಾಧ್ಯಕ್ಷ ವಿಠ್ಠಲರಾವ ಪಾಟೀಲ್, ಗೌರವಧ್ಯಕ್ಷ ವೈಜಿನಾಥ ವಡ್ಡೆ, ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಯಶವಂತ ಬಿರಾದಾರ, ಉತ್ತಮರಾವ ಮಾನೆ, ಮನೋಜ ಪೋ.ಪಾಟೀಲ್, ಸುನೀಲ್ ಸೇರಿದಂತೆ ಪ್ರಮುಖರು ಹಾಗೂ ತಾಲೂಕಿನ ವಿವಿಧ ಹಳ್ಳಿಗಳಿಂದ ನೂರಾರು ಮಹಿಳೆಯರು ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

