ಬರವಣಿಗೆಯ ಮೂಲಕ ಸಮಾಜವನ್ನು ಜಾಗೃತಿಗೊಳಿಸಿದ ಕನಕದಾಸರು : ದೇವು ಹೆಬ್ಬಾಳ
ಬರವಣಿಗೆಯ ಮೂಲಕ ಸಮಾಜವನ್ನು ಜಾಗೃತಿಗೊಳಿಸಿದ ಕನಕದಾಸರು : ದೇವು ಹೆಬ್ಬಾಳ
ಸುರಪುರ : ಕನ್ನಡದ ಸಂತ ಕವಿ ಕನಕದಾಸರು ಜಾತಿ ಪದ್ಧತಿ ಹಾಗೂ ಮೂಢನಂಬಿಕೆ ವಿರುದ್ಧ ತಮ್ಮ ಬರವಣಿಗೆ ಮೂಲಕ ಸಮಾಜವನ್ನು ಜಾಗೃತಿಗೊಳಿಸಿದ್ದಾರೆ ಎಂದು ಉಪನ್ಯಾಸಕ ದೇವು ಎಸ್. ಹೆಬ್ಬಾಳ ಹೇಳಿದರು.
ಸುರಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ ಕನ್ನಡದ ಸಂತ ಕವಿ ಕನಕದಾಸರ ಕುರಿತು "ಕನಕ ದರ್ಶನ" ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನಕದಾಸರ ವೈಚಾರಿಕತೆ,ಚಿಂತನೆ, ಅವರ ಮೌಲ್ಯಯುತ ಬದುಕು
ಇಂದಿನ ಯುವ ಸಮೂಹಕ್ಕೆ ಮತ್ತಷ್ಟು ಪರಿಚಯಿಸುವ ಕೆಲಸ ಸರಕಾರ ಹಾಗೂ ಸಂಘ-ಸಂಸ್ಥೆಗಳು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳು ಹಾಗೂ ಸಾಹಿತಿಗಳಾದ ಶರಣಗೌಡ ಪಾಟೀಲ್ ಜೈನಾಪುರ ಮಾತನಾಡಿ,ರಾಜ ವೈಭೋಗದಲ್ಲಿದ್ದ ಕನಕದಾಸರು ಎಲ್ಲವನ್ನು ತ್ಯಾಗ ಮಾಡಿ ಇಡೀ ಸಮಾಜಕ್ಕಾಗಿ ಹಗಲಿರುಳು ಶ್ರಮಿಸಿದ ಕನ್ನಡದ ಸಂತ ಕವಿ ಕನಕದಾಸರನ್ನು ನಾವಿಂದು ಸ್ಮರಿಸುವುದು ಅತ್ಯಗತ್ಯ ಎಂದು ನುಡಿದರು.
ದಾಸ ಸಾಹಿತ್ಯದ ಮೂಲಕ ಇಡೀ ಜಗತ್ತಿಗೆ ಅಮೂಲ್ಯವಾದ ಕೊಡುಗೆ ನೀಡಿದ ಮಹಾನ್ ಶ್ರೇಷ್ಠ ಕವಿ ಕನಕದಾಸರು ಅವರ ಜೀವನ ತತ್ವ ಆದರ್ಶಗಳು ಪ್ರತಿಯೊಬ್ಬರಿಗೆ ಸ್ಪೂರ್ತಿಯಾಗಿದೆ ಎಂದು ಎಚ್. ಎಮ್.ವಗ್ಗನವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ನುಡಿದರು.
ಡಾ: ಜಗದೀಶಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ,ಬಿ.ಆರ್.ಸಿ.ರಾಜಶೇಖರ್ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪಿ.ಕೆ.ಕುಲಕರ್ಣಿ,ಹನುಮಂತರಾಯ ದೊಡ್ಡಮನಿ,ಡಾ:ಮಹದೇವಪ್ಪ,ಶಾಂತು ನಾಯಕ,ಹನುಮಂತ ಸಿಂಗೆ,ಬಸವರಾಜ ಪೂಜಾರಿ, ಮಾರುತಿ,ಪ್ರಭುಗೌಡ ಸೇರಿದಂತೆ ಇತರರು ಹಾಜರಿದ್ದರು.
