ಬುದ್ಧ ಜಯಂತಿ : ಪೂರ್ವಭಾವಿ ಸಭೆ :..

ಬುದ್ಧ ಜಯಂತಿ : ಪೂರ್ವಭಾವಿ ಸಭೆ :..

ಬುದ್ಧ ಜಯಂತಿ : ಪೂರ್ವಭಾವಿ ಸಭೆ :..

ನಾಗರಾಜ್ ದಂಡಾವತಿ ವರದಿ ಶಹಾಬಾದ : - ತಾಲ್ಲೂಕ ಗ್ರೇಡ್ 2 ತಹಶೀಲ್ದಾರ ಗುರುರಾಜ ಸಂಘಾವಿ ಅವರ ಅಧ್ಯಕ್ಷತೆಯಲ್ಲಿ ತಥಾಗಥ ಗೌತಮ್ ಬುದ್ಧರ ೨೫೭೦ನೇ ಜಯಂತಿಯ ಅಂಗವಾಗಿ ತಹಶೀಲ್ದಾರ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.

ನಗರ ಸಭೆಯ ಪೌರಾಯುಕ್ತ ಫಕ್ರುದ್ದೀನ್ ಸಾಬ ಉಪಸ್ಥಿತರಿದ್ದು, ತಾಲೂಕ ಆಡಳಿತ ವತಿಯಿಂದ ಮೇ.೧ ರಂದು ಬೆಳಗ್ಗೆ ೧೦ಗಂಟೆಗೆ ಡಾ.ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಆವರಣದಲ್ಲಿ ಸಾಮೂಹಿಕವಾಗಿ ಬುದ್ಧ ಜಯಂತಿಯನ್ನು ಆಚರಿಸೋಣ ಎಂದು ಹೇಳಿದರು.

ಪೂರ್ವ ಭಾವಿ ಸಬೆಯಲ್ಲಿ ದಲಿತ ಮುಖಂಡ ಕೃಷ್ಣಪ್ಪ ಕರ್ಣಿಕ ಮಾತನಾಡಿ, ಸರಕಾರದ ವತಿಯಿಂದ ಬುದ್ದ ಜಯಂತಿ ಆಚರಣೆ ಮಾಡುತ್ತಿರುವುದು ಅಭಿನಂಧನಾರ್ಹವಾಗಿದೆ, ತಾಲ್ಲೂಕಿನ ಎಲ್ಲಾ ಇಲಾಖೆಗಳಲ್ಲಿ ತಪ್ಪದೆ ಬುದ್ದ ಜಯಂತಿ ಆಚರಣೆ ಮಾಡಬೇಕು, ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪಿ.ಎಸ್ ಮೇತ್ರಿ, ಮಲ್ಲಣ್ಣ ಮಸ್ಕಿ, ಸುಭಾಷ ಸಾಕ್ರೆ, ಮೋಹನ ಹಳ್ಳಿ ಯವರು ಬುದ್ದ ಜಯಂತಿ ಕುರಿತು ಹಲವಾರು ಸಲಹೆ ಸೂಚನೆ ಹಾಗೆ ಪೂಜಾ ವಿಧಿ ವಿಧಾನ ಗಳನ್ನು ವಿವರಣೆ ನೀಡಿದರು. 

ಸಭೆಯಲ್ಲಿ ನಗರ ಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಜಲಂದರ, ಮಹಾದೇವ ತರನಳ್ಳಿ, ೧೩೫ನೇ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ ಯನಗುಂಟಿಕರ, ಗೌರವಾಧ್ಯಕ್ಷ ವಸಂತ ಕಾಂಬಳೆ, ತಾಲ್ಲೂಕ ಸಂಚಾಲಕ ತಿಪ್ಪಣ್ಣ ಧನೇಕರ, ಮೊಮ್ಮದ ಅಜರ, ಸತೀಶ ಕೋಬಾಳ, ಪರಶುರಾಮ ಚಲವಾದಿ, ಮನೋಹರ ಕೊಳೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಾದ ಅಣವೀರಪ್ಪ ಹುಳಗೇರಿ, ಸತ್ಯನಾರಾಯಣ, ಮಹೇಶ ಜೋಗ್ದನ್ಕರ, ಸಂಗಮ್ಮ ಪಾಟೀಲ, ಸುಷ್ಮಾ ಕಲ್ಕೇರಿ ಉಪಸ್ಥಿತರಿದರು.