ಸನ್ಮಾನಗಳು ಸಾಧಕರಿಗೆ ಪ್ರೇರಣಾಶಕ್ತಿ ನೀಡುತ್ತವೆ: ಪಾಳಾ ಶ್ರೀಗಳು

ಸನ್ಮಾನಗಳು ಸಾಧಕರಿಗೆ ಪ್ರೇರಣಾಶಕ್ತಿ ನೀಡುತ್ತವೆ: ಪಾಳಾ ಶ್ರೀಗಳು

ಸನ್ಮಾನಗಳು ಸಾಧಕರಿಗೆ ಪ್ರೇರಣಾಶಕ್ತಿ ನೀಡುತ್ತವೆ: ಪಾಳಾ ಶ್ರೀಗಳು

ಕಲಬುರಗಿ, ಏ.29: ಯಾವುದೇ ಪ್ರಶಸ್ತಿ-ಪುರಸ್ಕಾರಗಳು ವ್ಯಕ್ತಿಯ ಹೊಣೆಗಾರಿಕೆ ಹಾಗೂ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಪಾಳಾ ಕಟ್ಟಿಮನಿ ಸಂಸ್ಥಾನದ ಷ.ಬ್ರ. ಡಾ. ಗುರುಮೂರ್ತಿ ಶಿವಾಚಾರ್ಯರು ಹೇಳಿದರು.

ನಗರದ ಪ್ರಶಾಂತ ನಗರದಲ್ಲಿರುವ ಅಮರಪ್ರಿಯ ಕಲಾ ಸ್ಟುಡಿಯೋದಲ್ಲಿ ಶಿವಬಸವ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ವಿಶ್ವಗುರು ಬಸವಣ್ಣನವರ ಜಯಂತೋತ್ಸವ ಅಂಗವಾಗಿ ಆಯೋಜಿಸಿದ್ದ ಬಸವ ಸಂಸ್ಕೃತಿ ಉತ್ಸವ ಹಾಗೂ ‘ಬಸವ ಬೆಳಕು’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ. ಸಮಾಜಕ್ಕೆ ಸಮಾನತೆಯ ತಾತ್ವಿಕ ಚಿಂತನೆಯನ್ನು ಬಿತ್ತಿದ ಶರಣರು ಸದಾ ಸ್ಮರಣೀಯರು. ಶರಣ ಚಿಂತನೆಯಲ್ಲಿ ಸಾಮಾಜಿಕ ಸ್ವಸ್ಥತೆ ಅಡಗಿದೆ ಎಂದು ಅವರು ತಿಳಿಸಿದರು.

ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ಸೇವೆಗಾಗಿ ಶಿವರಾಜ ಅಂಡಗಿ, ಸಾಹಿತ್ಯ ಕ್ಷೇತ್ರಕ್ಕೆ ಡಾ. ಕೆ. ಗಿರಿಮಲ್, ಶಿಕ್ಷಣ ಕ್ಷೇತ್ರಕ್ಕೆ ರವಿಕುಮಾರ ಶಹಾಪೂರಕರ್, ಕೃಷಿ ಕ್ಷೇತ್ರಕ್ಕೆ ಬಸವರಾಜ ಮಾಲಿ ಪಾಟೀಲ ಹಾಗೂ ಶಿಕ್ಷಣ ಸೇವೆಗೆ ಕುಶಾಲ ದರ್ಗಿ ಅವರಿಗೆ ‘ಬಸವ ಬೆಳಕು’ ಪ್ರಶಸ್ತಿ ನೀಡಿ ಗೌರವಿಸಿದ್ದರು.

 ಜಗದೀಶ ಮರಪಳ್ಳಿಯವರು ಮಾತನಾಡಿ, ಸೇವೆ ಮಾಡಿದ ವ್ಯಕ್ತಿಗಳಿಗೆ ಸಮಾಜದಿಂದ ಸಿಗುವ ಪ್ರೋತ್ಸಾಹವೇ ಸಾಧನೆಗೆ ಮತ್ತಷ್ಟು ಶಕ್ತಿ ನೀಡುತ್ತದೆ ಎಂದರು. ಸಾಮಾಜಿಕ ಪ್ರೇರಣೆಯಿಂದ ತಾವು ಬೆಂಗಳೂರಿನ ಗ್ರಾಮಾಂತರ ನೆಲಮಂಗಲದ ಪವಾಡ ಬಸವಣ್ಣ ಮಠದಲ್ಲಿ ನಡೆದ ರಾಷ್ಟ್ರಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ 850ಕ್ಕೂ ಹೆಚ್ಚು ವಚನಗಳನ್ನು ಪಠಿಸಿ ದ್ವಿತೀಯ ಸ್ಥಾನ ಪಡೆದು 75 ಸಾವಿರ ರೂ. ಬಹುಮಾನ ಪಡೆದ ಅನುಭವ ಹಂಚಿಕೊಂಡರು.

ಅಮರಪ್ರಿಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಣಮಂತ ಬೆಂಕಿಮುಗಟಿ, ಸಿದ್ದಣ್ಣ ಬಾವಿಕಟ್ಟಿ, ವಿಶ್ವನಾಥ ತೋಟ್ನಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮಲ್ಲಿನಾಥ ಹೂಗಾರ ಸ್ವಾಗತಿಸಿದರು. ಸಂಜು ಹಾಗರಗಿ ವಂದಿಸಿದರು. ವಿಶ್ವನಾಥ ತೋಟ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿನಾಥ ದೇಶಮುಖ, ಬಸವರಾಜ ಎನ್. ಪುಣ್ಯಶೆಟ್ಟಿ, ರೇವಣಸಿದ್ದಪ್ಪ ಜೀವಣಗಿ, ದತ್ತಪ್ಪ ಬಳಬಟ್ಟಿ, ಕಲ್ಲಪ್ಪ ಹಡಪದ, ಸಾಗರ ದೊಡ್ಡಮನಿ, ಸಿದ್ದು ಹೊತ್ತಗೋಳ ಹಾಗೂ ಐಟಿಐ ವಿದ್ಯಾರ್ಥಿಗಳು ಭಾಗವಹಿಸಿದ್ದರು.