ಪಟ್ಟದ್ದೇವರ, ಪ್ರೌಢ ಶಾಲೆಯ ಅಮೃತಾ ರಾಜ್ಯಕ್ಕೆ 8ನೇ ಸ್ಥಾನ

ಪಟ್ಟದ್ದೇವರ, ಪ್ರೌಢ ಶಾಲೆಯ ಅಮೃತಾ ರಾಜ್ಯಕ್ಕೆ 8ನೇ ಸ್ಥಾನ

ಪಟ್ಟದ್ದೇವರ, ಪ್ರೌಢ ಶಾಲೆಯ ಅಮೃತಾ ರಾಜ್ಯಕ್ಕೆ 8ನೇ ಸ್ಥಾನ

ಕಮಲನಗರ: ಶೈಕ್ಷಣಿಕ ಸಾಧನೆಯಲ್ಲಿ ಸದಾ ಮುಂದಿರುವ ಪ್ರತಿಷ್ಠಿತ ಡಾ| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ 10ನೇ ತರಗತಿಯ 2025-26ನೇ ಸಾಲಿನ ವಾರ್ಷಿಕ ಪರೀಕ್ಷೆ ಕೃಮಾಂಕ-01ರಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಅಮೃತಾ ವಿನೋದಕುಮಾರ 618 (98.88%) ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಪಡೆದು ಮತ್ತು ಜಿಲ್ಲೆಗೆ 5ನೇ ಸ್ಥಾನ ಪಡೆದು ಶಾಲೆ ಕೀರ್ತಿ ಹೆಚ್ಚಿಸಿದ್ದಾಳೆ.

ವಿದ್ಯಾರ್ಥಿಗಳಾದ ಅಮೃತಾ ವಿನೋದಕುಮಾರ 618 (98.88%) ಅಂಕ, ಈಶ್ವರ ಅನೀಲಕುಮಾರ 607(97.12%), ಚೈತನ್ಯ ಪ್ರೇಮಸಾಗರ 601 (96.16%), ಚೇತನಾ ವೆಂಕಟ 597 (95.52%) ರಷ್ಟು ಫಲಿತಾಂಶ ದಾಖಲಿಸಿ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು ಪೂಜ್ಯಶ್ರೀ ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು, ಹಿರೇಮಠ ವಿದ್ಯಾಪೀಠದ ಪೀಠಾಧಿಪತಿ ಗುರುಬಸವ ಪಟ್ಟದೇವರು, ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಂಶುಪಾಲ ಬಸವರಾಜ ಮೊಳಕೇರೆ ಮತ್ತು ಅಡಳಿತಾಧಿಕಾರಿ ಚನ್ನಬಸವ ಘಾಳೆ ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.  

ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಾಧನೆಗೆ ಸಿದ್ಧಪಡಿಸುವ ಕೆಲಸ ಹಿರೇಮಠ ವಿದ್ಯಾಪೀಠ ಸಂಸ್ಥೆ ಪರಿಸರದಲ್ಲಿ ನಡೆದಿದೆ. ಶ್ರೀ ಡಾ| ಬಸವಲಿಂಗ ಪಟ್ಟದ್ದೇವರು ಮಾರ್ಗದರ್ಶನದಲ್ಲಿ ಪರಿಣಿತ ಬೋಧಕರ ಅವಿರತ ಪರಿಶ್ರಮ, ವಿನೂತನ ಪ್ರಯೋಗದಿಂದ ಫಲ ನೀಡುತ್ತಿದೆ. ರಾಜ್ಯದ ರ್ಯಾಂಕ್ 10ರ ಪಟ್ಟಿಯಲ್ಲಿ ಲಿಂಗೈಕ್ಯ ಡಾ| ಚನನ್ಬಸವ ಪಟ್ಟದ್ದೇವರ ಜನ್ಮ ಸ್ಥಳವಾಗ ಗಡಿಭಾಗ ಕಮಲನಗರದಿಂದ ಸಾಧನೆ ಮಾಡಿದ್ದು ಗಗನ ಎತ್ತರಕ್ಕೆ ಪತಾಕೆ ಹಾರಿಸಿದ್ದು ಹೆಮ್ಮೆ ವಿಷಯವಾಗಿದೆ.

- ಗುರುಬಸವ ಪಟ್ಟದ್ದೇವರು, ಭಾಲ್ಕಿ ಹಿರೇಮಠ ಸಂಸ್ಥಾನ ಪೀಠಾಧಿಪತಿ.

ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾದ ಹತ್ತನೇ ಪರೀಕ್ಷೆಯಲ್ಲಿ ನಮ್ಮ ಶಾಲೆ ಪ್ರತಿಭಾವಂತ ವಿದ್ಯಾರ್ಥಿನಿ ಜಿಲ್ಲೆಗೆ 5ನೇ ಸ್ಥಾನ ಮತ್ತು ರಾಜ್ಯಕ್ಕೆ 8ನೇ ಸ್ಥಾನ ಪಡೆದು ಉತೀರ್ಣರಾಗಿದ್ದು ಖುಷಿ ತಂದಿದೆ.

 -ಚನ್ನಬಸವ ಘಾಳೆ, ಕಮಲನಗರ ಶಾಲೆ ಆಡಳಿತಾಧಿಕಾರಿ.