ಹಿಂದಿ ರಾಷ್ಟ್ರವನ್ನು ಒಗ್ಗೂಡಿಸುವ ಭಾಷೆ: ಡಾ. ಅಂಜು ಸಿಂಗ್
ಹಿಂದಿ ರಾಷ್ಟ್ರವನ್ನು ಒಗ್ಗೂಡಿಸುವ ಭಾಷೆ: ಡಾ. ಅಂಜು ಸಿಂಗ್
ಕಲಬುರಗಿ: ಇಂದಿನ ಆಧುನಿಕ ಸಂದರ್ಭದಲ್ಲಿ ಭಾಷೆ ಬಹಳ ಪ್ರಮುಖವಾಗಿದೆ, ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯಬೇಕು ಹಾಗೂ ಭಾರತದಲ್ಲಿ ಎಲ್ಲರಿಗೂ ಒಗ್ಗೂಡಿಸುವ ಭಾಷೆಯಾವುದಾದರೂ ಇದೆ ಎಂದರೆ ಅದು ಹಿಂದಿ ಭಾಷೆ ಎಂದು ಕೇಂದ್ರ ಸರ್ಕಾರದ ಉಚ್ಚ ಶಿಕ್ಷಣ ವಿಭಾಗದ ಅಂಗ ಸಂಸ್ಥೆಯಾದ ಕೇಂದ್ರೀಯ ಹಿಂದಿ ನಿದೇರ್ಶಾಲಯದ ಉಪ ನಿರ್ದೇಶಕರಾದ ಡಾ. ಅಂಜು ಸಿಂಗ್ ಅವರು ನುಡಿದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ಹಿಂದಿ ವಿಭಾಗ ಆಯೋಜಿಸಿರುವ ಹಿಂದಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಕೇಂದ್ರೀಯ ಹಿಂದಿ ನಿದೇರ್ಶಾಲಯ ಹಿಂದಿ ಭಾಷೆಯನ್ನು ವಿಶ್ವದ ಮೂಲೆ ಮೂಲೆಗೆ ಹರಡಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಕೇಂದ್ರೀಯ ಹಿಂದಿ ನಿರ್ದೇಶಾಲಯದ ಸಹಾಯಕ ನಿರ್ದೇಶಕರಾದ ಶ್ರೀಮತಿ ಅಂಜು ಸಿಂಗ್ ಅವರು ಮಾತನಾಡುತ್ತಾ ಹಿಂದಿ ಭಾಷೆ ಇಂದು ವಿಶ್ವದ ಮೂಲೆ ಮೂಲೆಗೆ ಪಸರಿಸಿದೆ ಇನ್ನೂ ಕೆಲವೇ ಸಮಯದಲ್ಲಿ ವಿಶ್ವದ ಎರಡನೆಯ ಅತಿ ಹೆಚ್ಚು ಮಾತನಾಡುವ ಭಾಷೆಯಾಗಲಿದೆ ಎಂದು ನುಡಿದರು. ಕೇಂದ್ರೀಯ ಹಿಂದಿ ನಿರ್ದೇಶಾಲಯದ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ಅವರು ನಮ್ಮ ಮಹಾವಿದ್ಯಾಲಯದ ಹಿಂದಿ ವಿಭಾಗ ಕೇಂದ್ರ ಸರ್ಕಾರದ ಉಚ್ಚ ಶಿಕ್ಷಣ ವಿಭಾಗದ ಅಧೀನ ಸಂಸ್ಥೆಯಾದ ಕೇಂದ್ರೀಯ ಹಿಂದಿ ನಿರ್ದೇಶಾಲಯದ ಸಹಯೋಗದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸರಾಹನಿಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಇಂದು ಹಿಂದಿ ಭಾಷೆ ವಿಶ್ವದ ಎಲ್ಲ ಕಡೆಯೂ ಹರಡಿದೆ ಹಾಗೂ ವಿಶ್ವದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಒಂದು ಭಾಷೆಯಾಗಿ ಕಲಿಸುತ್ತಾರೆ ಎಂದು ನುಡಿದರು.
ಕವಿತಾ ಠಾಕೂರ್ ಅವರು ಎಲ್ಲ ಅತಿಥಿಮಾನ್ಯರಿಗೆ ಸ್ವಾಗತ ಕೋರಿದರು. ಸುಷ್ಮಾ ಕುಲಕರ್ಣಿಯವರು ಕಾರ್ಯಕ್ರಮ ನಿರೂಪಿಸಿದರು.
ಕುಮಾರಿ ವೈಷ್ಣವಿ ಬಿರಾದಾರ ಅವರು ವಂದಿಸಿದರು. ಕುಮಾರಿ ಶೆರಿಯಲ್ ಮತ್ತು ತಸ್ಮಿಯ ರುಬಾ ಅವರು ಪ್ರಾರ್ಥನೆ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ನೂತನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ದಯಾನಂದ ಶಾಸ್ತ್ರಿ, ಕೆಬಿಎನ್ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ದೇಶಮುಖ ಆಫ್ಶಾ ಬೇಗಂ, ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಮಹೇಶ್ ಗಂವ್ಹಾರ, ಡಾ ಶ್ರೀದೇವಿ ಸರಡಗಿ, ಶಿವಲೀಲಾ ಧೋತ್ರ, ಡಾ. ಮೋಹಸಿನ ಫಾತಿಮಾ, ಕವಿತಾ ಅಶೋಕ್, ಗೀತಾ ಪಾಟೀಲ್, ಹಿಂದಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು.
