ಸಾಹಿತ್ಯ ಕೃತಿ ಎಲ್ಲರೂ ಓದಲು ಸಲಹೆ- ಶಶಿಕಲಾ ಟೆಂಗಳಿ

ಸಾಹಿತ್ಯ ಕೃತಿ ಎಲ್ಲರೂ ಓದಲು ಸಲಹೆ- ಶಶಿಕಲಾ ಟೆಂಗಳಿ

ಸಾಹಿತ್ಯ ಸಮಾಗಮ:೧೧ ಉಪನ್ಯಾಸ ಮಾಲಿಕೆ: ಕವಿ ರೇವಣಸಿದ್ಧಪ್ಪ ದುಕಾನ ಬದುಕು- ಬರಹ- 

ಸಾಹಿತ್ಯ ಕೃತಿ ಎಲ್ಲರೂ ಓದಲು ಸಲಹೆ- ಶಶಿಕಲಾ ಟೆಂಗಳಿ

ಕಲಬುರಗಿ:ಒಳ್ಳೆಯ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.ಮಕ್ಕಳು ಮೊಬೈಲಗೆ ಮರುಳಾಗಿದ್ದಾರೆ.ಅವರಲ್ಲಿ ಉತ್ತಮ ಸಂಸ್ಕೃತಿ ರೂಪಿಸಲು

ಕುಟುಂಬದ ಪಾತ್ರ ಮಹತ್ವದ್ದು,ಸಾಹಿತಿಗಳು, ಕವಿಗಳು ಕಾವ್ಯ ರಚಿಸುವ ಮೂಲಕ ಸಜ್ಜನರನ್ನು ರೂಪಿಸುತ್ತಾರೆ.ಎಲ್ಲರೂ ಸಾಹಿತ್ಯ ಕೃತಿಗಳನ್ನು ಓದಬೇಕೆಂದು ಮಹಿಳಾ ಅಭಿವೃದ್ಧಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಟೆಂಗಳಿ ಕರೆ ನೀಡಿದರು.

ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಏರ್ಪಡಿಸಿದ ಸಾಹಿತ್ಯ ಸಮಾಗಮ-೧೧ ನೇ ಉಪನ್ಯಾಸ ಮಾಲಿಕೆಯ ಕವಿ ರೇವಣಸಿದ್ಧಪ್ಪ ದುಕಾನ ಅವರ ಬದುಕು- ಬರಹ ಉದ್ಘಾಟಿಸಿ ಮಾತನಾಡಿ ನಮ್ಮ ಬಡಾವಣೆಯಲ್ಲಿ ಇಂತಹ ವಿಚಾರವಂತ ಕವಿ ಇರುವುದು ನಮಗೆ ಹೆಮ್ಮೆ ಎನಿಸುತ್ತದೆಂದರು.ಅವರ ಮುಂದಿನ ಕೃತಿ ನಮ್ಮ ಮನೆಯ ಹೊರಾಂಡದಲ್ಲಿ ಬಿಡುಗಡೆ ಮಾಡುವಿದಾಗಿ ಹೇಳಿದರು.

ಮುಂಗನಸು ಕವನ ಸಂಕಲನದಲ್ಲಿ ಸಾಮಾಜಿಕ ಕಳಕಳಿ,ರಾಜಕೀಯ ಭ್ರಷ್ಟತೆ,ಹೆಣ್ಣಿನ ಬಗ್ಗೆ,ಈ ನಾಡಿನ ಕುರಿತು ಹಲವಾರು ಕವನದ ಮೂಲಕ ಜನರ ಎಚ್ಚರಿಸುವ ಕೆಲಸ ಕವಿ ಮಾಡಿದ್ದಾರೆ ಕಾವ್ಯ ಮೊನಚಾಗಿರಬೇಕು ಎಂದು ಸಾಹಿತಿ,ಪತ್ರಕರ್ತ ಡಾ.ಶಿವರಂಜನ್ ಸತ್ಯಂಪೇಟೆ ಅಭಿಮತ ಪಡಿಸಿದರು.

ಹೂಗನಸು ಕವನ ಸಂಕಲನ ಕುರಿತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಉಪನ್ಯಾಸಕಿ ಡಾ.ಶರಣಮ್ಮ ಪಾಟೀಲ ಅವರು ಜಾನಪದ, ವಚನದ ಪ್ರಭಾದಿಂದ ಇಲ್ಲಿನ ಕವನಗಳು ಅರಳಿವೆ.ಅವರ ಅನುಭವ ಮೂಲಕ ಸಮಾಜ,ಸಂಸ್ಕೃತಿ, ಎಲ್ಲಾ ಬಗೆಯ ಕವನದ ನೋಟ ಸಿಗುತ್ತವೆಂದವು.

ಅಧ್ಯಕ್ಷತೆಯನ್ನು ವಹಿಸಿದ ಡಾ.ಗವಿಸಿದ್ಧಪ್ಪ ಪಾಟೀಲ ಅವರು ಸಾಹಿತಿ,ಕವಿಗಳ ಕುರಿತು ಚಿಂತನೆ ಮಾಡುವ ಅಗತ್ಯ ಇಂದು ಇದೆ.ರೇವಣಸಿದ್ಧಪ್ಪ ದುಕಾನ ಅವರ ಎರಡು ಕಾವ್ಯದಲ್ಲಿ ಸಾಮಾಜಿಕ ಚಿಂತನೆ, ವಸ್ತು ವೈವಿಧ್ಯತೆ ಮೂಲಕ ಭರವಸೆ ನೀಡುತ್ತಾರೆ.

ಪ್ರಾರ್ಥನೆ ಗೀತೆಯನ್ನು ಡಾ.ಶೋಭಾದೇವಿ ಚೆಕ್ಕಿ ಹಾಡಿದರು.ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಸಿದ್ದಪ್ಪ ಹೊಸಮನಿ ಸ್ವಾಗತಿಸಿದರು,ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಡಾ.ಶೀಲಾದೇವಿ ಎಸ್.ಬಿರಾದಾರ ವಂದಿಸಿದರು.

ಡಾ.ವಿಜಯಕುಮಾರ ಪರುತೆ, ಡಾ.ಜಯದೇವಿ ಗಸಯಕವಾಡ, ಡಾ.ಶ್ರೀಶೈಲ ಮದಾನೆ, ಡಾ.ಶಾಂತಪ್ಪ ಡಂಬಳ,ಸಿ.ಎಸ್‌.ಮಾಲಿಪಾಟೀಲ, ರಾಜೇಂದ್ರ ಝಳಕಿ,ಡಾ.ಭೀಮಾಶಂಕರ ತಳವಾರ, ಮನೋಹರ ಮರಗುತ್ತಿ,ಸುರೇಶ ಹತ್ತಿ,ಡಾ.ಸಿದ್ದಲಿಂಗ ದಬ್ಬಾ,ಡಾ. ಶಿವಶರಣಪ್ಪ ದಾಬಾ,ಡಾ.ರವಿಕುಮಾರ ಕಾಂಬಳೆ,ಡಾ.ಕರಬಸಪ್ಪ,ಡಾ.ಪೀರಪ್ಪ ಸಜ್ಜನ, ಸಿದ್ದು ಕೋಣಿ,ಹನಮಂತ ಮರಡಿ,,ಡಾ.ಚಿದಾನಂದ ಕುಡ್ಡನ್,ಇತರರಿದ್ದರು.