ಇಂದು,ಡಾ. ಫ. ಗು. ಹಳಕಟ್ಟಿ ಅವರ 62ನೇ ಪುಣ್ಯಸ್ಮರಣೋತ್ಸವ

ಇಂದು,ಡಾ. ಫ. ಗು. ಹಳಕಟ್ಟಿ ಅವರ 62ನೇ ಪುಣ್ಯಸ್ಮರಣೋತ್ಸವ

ಇಂದು,ಡಾ. ಫ. ಗು. ಹಳಕಟ್ಟಿ ಅವರ 62ನೇ ಪುಣ್ಯಸ್ಮರಣೋತ್ಸವ 

ಕಲಬುರಗಿ, ಜೂನ್ 29: ಶ್ರೀ ರಾಮಲಿಂಗ ಚೌಡೇಶ್ವರಿ ಪ್ರತಿಷ್ಠಾನ, ಕಲಬುರಗಿ ಸಂಚಾಲಿತ ಕನ್ನಡ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ವಚನ ಸಾಹಿತ್ಯ ಸಂಶೋಧನಾ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ 62ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಜೂನ್ 29ರಂದು ಸಂಜೆ 6.30 ರಿಂದ 8 ಗಂಟೆಯವರೆಗೆ ಮಹಾಂತ ನಗರದ, ಬಸವ ಮಂಟಪದಲ್ಲಿ (ಡಾ. ಟಿ. ಎ. ಪಾಟೀಲ ಆಸ್ಪತ್ರೆ ಪಕ್ಕದಲ್ಲಿ) ಆಯೋಜಿಸಲಾಗಿದೆ.

ವಚನ ಸಾಹಿತ್ಯ ಚಿಂತಕರು, ಶರಣ ಭಕ್ತರು, ಶರಣ ಬಂಧುಗಳು, ವಚನಪರ ಅಭಿಮಾನಿಗಳು, ವಿವಿಧ ಕಾಯಕ ಸಮಾಜಗಳ ಮುಖಂಡರು ಹಾಗೂ ಶರಣ ತತ್ವದ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶರಣ/ವಚನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಸಂಚಾಲಕ ಹಾಗೂ ನ್ಯಾಯವಾದಿ ಜೆ. ಎಸ್. ವಿನೋದಕುಮಾರ ಮನವಿ ಮಾಡಿದ್ದಾರೆ.

ಡಾ. ಫ. ಗು. ಹಳಕಟ್ಟಿ ಅವರ 62ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಸರ್ವಾನುಮತದಿಂದ ಸಮಿತಿಯನ್ನು ರಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.