ವಿವಿಧ ಕಡೆ : ಜಗಜ್ಯೋತಿ ಬಸವಣ್ಣನವರ 893ನೇ ಜಯಂತಿ ಅದ್ಧೂರಿಯಾಗಿ ಆಚರಣೆ

ವಿವಿಧ ಕಡೆ :  ಜಗಜ್ಯೋತಿ ಬಸವಣ್ಣನವರ 893ನೇ ಜಯಂತಿ ಅದ್ಧೂರಿಯಾಗಿ ಆಚರಣೆ

ವಿವಿಧ ಕಡೆ : ಜಗಜ್ಯೋತಿ ಬಸವಣ್ಣನವರ 893ನೇ ಜಯಂತಿ ಅದ್ಧೂರಿಯಾಗಿ ಆಚರಣೆ

ಚಿಂಚೋಳಿ : ತಾಲೂಕಿನ ವಿವಿಧ ಕಡೆಗಳಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವ ಆಚರಣೆಯನ್ನು ಅಭಿಮಾನಿಗಳು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಯಿತು.

ಪಟ್ಟಣದ ಮಲ್ಲಿಕಾರ್ಜುನ್ ದೇವಸ್ಥಾನದಿಂದ ಮತ್ತು ಚಂದಾಪೂರದ ಬಸವಣ್ಣ ಕಟ್ಟೆಯ ಅಭಿಮಾನಿ ಬಳಗ ವತಿಯಿಂದ ಬಸವಣ್ಣನ ಭವ್ಯ ಚಿತ್ರ ಪಟದೊಂದಿಗೆ ಅದ್ಧೂರಿ ಮೇರವಣಿಗೆಯೊಂದಿಗೆ ಜರುಗಿಸಿ, ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ತಾಲೂಕ ಆಡಳಿತ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಾಲೂಕಿನ ನಾಗಾಇದ್ಲಾಯಿ, ಕೆರೋಳ್ಳಿ, ಸುಲೇಪೇಟ, ಐನಾಪೂರ ಗ್ರಾಮಗಳಲ್ಲಿಸಂಭ್ರಮದ ಆಚರಣೆ ಜರುಗಿತು. ಚಿಂಚೋಳಿ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಸಿಬ್ಬಂದಿಗಳು ಬ್ಯಾಂಡ್ ವಾದ್ಯಗಳೊಂದಿಗೆ ಬಸ್ ಡಿಪೋದಿಂದ ಬಸವಣ್ಣನ ಪಟ್ಟಣ ಬಸವೇಶ್ವರ ವೃತ್ತದವರೆಗೆ ಅತ್ಯಂತ ಸಡಗರ, ಸಂಭ್ರಮದಿಂದ ಶಾಂತವಾಗಿ ಬಸವಣ್ಣನ ಚಿತ್ರ ಪಟ ಮೇರವಣಿಗೆ ನಡೆಸಿದ್ದು, ಎಲ್ಲರ ಗಮನ ಸೆಳೆಯಿತ್ತು.

ಕುರ್ಚಿಗಾಗಿ ಕಾರ್ಯಕ್ರಮದಲ್ಲಿ ಗದ್ದಲ :

ಜಗಜ್ಯೋತಿ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವ ನಿಮಿತ್ಯವಾಗಿ ತಾಲೂಕ ಆಡಳಿತವು ಸರಕಾರದ ಆದೇಶದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎಲ್ಲಾ ಸಿದ್ದತೆಗಳೊಂದಿಗೆ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರ ಪರಿಣಾಮ ಆಸನಗಳ ಕೊರತೆ ಉಂಟಾಗಿದ್ದರ ಹಿನ್ನಲೆಯಲ್ಲಿ ಅಭಿಮಾನಿಗಳ ಮತ್ತು ಅಧಿಕಾರಿಗಳ ಮಧ್ಯ ಮಾತಿನ ಚಕಮಕಿ ನಡೆದು ಕಾರ್ಯಕ್ರಮ ಗದ್ದಲಕ್ಕೆ ಕಾರಣವಾಯಿತು. ಬಳಿಕ ತಾಲೂಕ ಆಡಳಿತ ತಹಸೀಲ್ ಕಾರ್ಯಾಲಯದಲ್ಲಿ ಎಲ್ಲರ ಸಮ್ಮುಖದಲ್ಲಿ ಬಸವಣ್ಣನವರ ತತ್ವ ಸಿದ್ದಾಂತಗಳ ಬಗ್ಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದರೊಂದಿಗೆ ಅರ್ಥ ಪೂರ್ಣವಾಗಿ ಕಾರ್ಯಕ್ರಮ ಜರುಗಿಸಿ ಗದ್ದಲಕ್ಕೆ ತೆರೆ ಎಳೆಯಲಾಯಿತು.

ಈ ಸಂದರ್ಭದಲ್ಲಿ ಗ್ರೇಡ್ – 2 ತಹಸೀಲ್ದಾರ ವೆಂಕಟೇಶ ದುಗ್ಗನ್, ಇಓ ಸಂತೋಷ ಚವ್ಹಾಣ, ಪುರಸಭೆ ಸಿಓ ಕಾಶಿನ್ನಾಥ ಧನ್ನಿ, ಡಾ. ಗಫಾರ್, ಅನುಸೂಯ ಚವ್ಹಾಣ, ವೀರಶೆಟ್ಟಿ ರಾಠೋಡ, ಡಾ. ಮಲ್ಲಿಕಾರ್ಜುನ ಪಾಲಮೂರ, ಸಂತೋಷ, ಶಿವಾಜಿ ರಾಠೋಡ, ಪ್ರವೀಣಕುಮಾರ, ಉಪನ್ಯಾಸಕ ಡಾ.ಶಿವಶರಣಪ್ಪ ಮೋತಕಪಳ್ಳಿ, ಸಮಾಜದ ಪ್ರಮುಖರಾದ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ, ಬಾಬುರಾವ ಪಾಟೀಲ್, ಬಸವರಾಜ ಮಲಿ, ಗೌತಮ್ ಪಾಟೀಲ್, ಶ್ರೀಮಂತ ಕಟ್ಟಿಮನಿ, ಸಂತೋಷ ಗಡಂತಿ, ಕೆ.ಎಂ.ಬಾರಿ, ಸಂಜೀವಕುಮಾರ ಪಾಟೀಲ್, ಶಶಿಕಾಂತ ಆಡಕಿ, ನಂದಿಕುಮಾರ ಪಾಟೀಲ್ ನಂಪಾ, ಬಸವರಾಜ ಐನೋಳಿ, ಸುಭಾಷ ಸಿಳ್ಳಿನ್, ವೀರೇಶ ಯಂಪಳ್ಳಿ, ವಿವೇಕ ಪಾಟೀಲ್, ಲೋಕೇಶ ಶೆಳಗ್ಗಿ, ಮಲ್ಲಿಕಾರ್ಜುನ ಭೂಶೆಟ್ಟಿ, ರಾಜಶೇಖರ ಹಿತ್ತಲ್, ಶಂಕರ ಶಿವಪೂರಿ ಸೇರಿದಂತೆ ಬಸವ ಅಭಿಮಾನಿಗಳು ಇದ್ದರು.