ಸಮಾನತೆ ಮತ್ತು ಜ್ಞಾನ ಮಾರ್ಗದ ಪ್ರಚಾರಕ: ಡಾ. ಸತೀಶ್ ಕುಮಾರ್ ಹೊಸಮನಿ

ಸಮಾನತೆ ಮತ್ತು ಜ್ಞಾನ ಮಾರ್ಗದ ಪ್ರಚಾರಕ: ಡಾ. ಸತೀಶ್ ಕುಮಾರ್ ಹೊಸಮನಿ

ರಾಯಚೂರಿನಲ್ಲಿ ಬಸವ ಜಯಂತಿ ಹಾಗೂ ಬಸವ ಪ್ರಶಸ್ತಿ, ಶರಣ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿ

ರಾಯಚೂರು: ನಗರದ ರಂಗಮಂದಿರದಲ್ಲಿ ರಾಯಚೂರಿನ ಕಲಾ ಸಂಕುಲ ಸಂಸ್ಥೆಯ ವತಿಯಿಂದ ಬಸವ ಜಯಂತಿ ಹಾಗೂ ಬಸವ ಪ್ರಶಸ್ತಿ ಪ್ರದಾನ , ಶರಣ ದರ್ಶನ ಹಾಗೂ ಮುಕ್ಕಣ್ಣ ಕಂಡ ಬಸವಣ್ಣ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.

 ಮಾಜಿ ಸಚಿವ ಶಿವನಗೌಡ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿಗಳನ್ನು ಪ್ರಧಾನ ಮಾಡಿ ಮಾತನಾಡಿ, ಶರಣದರ್ಶನ ಪುಸ್ತಕದಲ್ಲಿ ಒಟ್ಟು 141 ಶರಣರ ಕಿರುಪರಿಚಯಗಳನ್ನು ಒಳಗೊಂಡಿದ್ದು, ಇದು ಓದುಗರಿಗೆ ಸುಲಭವಾಗಿ ತಿಳಿದುಕೊಳ್ಳಲು ಅನುಕೂಲಕರವಾದ ಕೃತಿಯಾಗಿದೆ. ಶರಣರ ಜೀವನ, ತತ್ವಗಳು ಮತ್ತು ಅವರ ಸಮಾಜಮುಖಿ ಚಿಂತನೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಮೂಲಕ ಈ ಪುಸ್ತಕವು ಓದುಗರಲ್ಲಿ ಅರಿವು ಮೂಡಿಸುತ್ತದೆ.

ಡಾ. ಸತೀಶ್ ಕುಮಾರ್ ಹೊಸಮನಿ ಅವರು ಗ್ರಂಥಾಲಯ ಇಲಾಖೆಯಲ್ಲಿ ಇದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಂಥಾಲಯಗಳ ಡಿಜಿಟಲ್ ಕರಣ ಮಾಡಿ ಓದುಗರಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪಂಚಾಕ್ಷರಿ ಮಠದ ಶಂಭು ಶಿವಾಚಾರ್ಯರು ಕಾರ್ಯಕ್ರಮದ ಸಾಹಿತ್ಯ ವಹಿಸಿ, ಬಸವ ತತ್ತ್ವಗಳ ಮಹತ್ವವನ್ನು ವಿವರಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಹೊಸಮನಿ ಅವರಿಗೆ ಬಸವ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಬುದ್ಧ, ಬಸವ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳು ಸಮಾಜಕ್ಕೆ ದಿಕ್ಕು ತೋರಿಸುವಂತಿವೆ ಎಂದು ಹೇಳಿದರು. ಬುದ್ಧನು ಜ್ಞಾನ ಮಾರ್ಗವನ್ನು ತೋರಿದರೆ, ಬಸವಣ್ಣನು ವಚನಗಳ ಮೂಲಕ ಸಮಾನತೆಯ ಸಂದೇಶವನ್ನು ನೀಡಿದರು. ಡಾ. ಅಂಬೇಡ್ಕರ್ ಅವರು ಸಂವಿಧಾನ ರೂಪದಲ್ಲಿ ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಸ್ಥಾಪಿಸಿದರು ಎಂದುರು.

12ನೇ ಶತಮಾನದಲ್ಲೇ ಬಸವಣ್ಣನವರು ಸಮಾನತೆಯ ಕನಸು ಕಂಡಿದ್ದರು. ಇಂದು ಆ ಕನಸು ಭಾರತೀಯ ಸಂವಿಧಾನದ ಮೂಲಕ ಸಾಕಾರಗೊಂಡಿದ್ದು, ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಮಾನ ಹಕ್ಕುಗಳೊಂದಿಗೆ ಬದುಕಲು ಸಾಧ್ಯವಾಗಿದೆ ಎಂದರು .

ಶರಣರ ವಚನಗಳಲ್ಲಿ ಜೀವನದ ಮೌಲ್ಯಗಳು ಅಡಕವಾಗಿದ್ದು, ಅವುಗಳನ್ನು ಓದಿ ಅರ್ಥೈಸಿಕೊಂಡರೆ ದೇಶದ ಪ್ರಗತಿಗೆ ದಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅನಿತಾ ಹಿರೇಮನಿ,ಆಲಂ ಘಣಿ,ರಾಜಶೇಖರ ದಿನ್ನಿ,ಬಸವರಾಜ ಹೆಚ್,ಅಯ್ಯಣ್ಣ ವಡವಾಟಿ,ಡಿ ಶ್ರೀನಿವಾಸ್,ರೇಖಾ ಬಡಿಗೇರ್, ವೇದಿಕೆ ಮೇಲೆ ಉಪಸ್ಥಿತರಿದ್ದರು, 

ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಶರಣದರ್ಶನ ಪುಸ್ತಕದಲ್ಲಿನ 141 ಶರಣರ ಕಿರುಪರಿಚಯಗಳು ಓದುಗರಿಗೆ ಸುಲಭವಾಗಿ ಅರಿವು ನೀಡುವ ಉತ್ತಮ ಕೃತಿ, ಶರಣರ ಆದರ್ಶಗಳು ಯುವ ಪೀಳಿಗೆಗೆ ದಾರಿದೀಪವಾಗಿದ್ದು, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ 

ಮಾಜಿ ಸಚಿವ ಶಿವನಗೌಡ ನಾಯಕ್

.